

ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಜೂನ್ 30 ರ ವರೆಗೆ ಲಾಕ್ಡೌನ್ ಮುಂದುವರಿದಿದ್ದು ರಾತ್ರಿ 9 ರಿಂದ ಬೆಳಿಗ್ಗೆ 5 ರ ವರೆಗೆ ಜಿಲ್ಲೆಯಲ್ಲಿ ಸಾರ್ವಜನಿಕ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಕಂಟೇನ್ ಮೆಂಟ್ ಪ್ರದೇಶ ಹೊರತುಪಡಿಸಿ ಉಳಿದೆಡೆ ಈ ನಿಯಮ ಅನ್ವಯವಾಗಿತಿದ್ದು ಎಳೆಯರು ಮತ್ತು ವೃದ್ಧರ ಓಡಾಟವನ್ನೂ ನಿಷೇಧಿಸಲಾಗಿದೆ, ಇಂದು ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಸ್ಪಸ್ಟಪಡಿಸಿರುವ ಜಿಲ್ಲಾಧಿಕಾರಿ ಹರೀಶ್ ಕುಮಾರ ಕೆ. ಇಂದಿನಿಂದ ಜೂನ್ 30 ರ ವೆರೆಗೆ ಈ ಆದೇಶ ಜಾರಿಯಲ್ಲಿರುತ್ತದೆ ಎಂದಿದ್ದಾರೆ.
ಬೆಂಗಳೂರಿನ ಪ್ರಕರಣದಿಂದ ಕಂಟೇನ್‍ಮೆಂಟ್ ಆದ ಜೋಗ ಬಳಿಯ ಕುಗ್ರಾಮ ಜಿಡ್ಡಿ
ಇಂತಿದೆ ಇಂದಿನ ಸಿದ್ಧಾಪುರದ ಪ್ರಕರಣಗಳ ಪ್ರವಾಸ ಚರಿತ್ರೆ-
ಕಳೆದ ವಾರ ಸಿದ್ಧಾಪುರದ ಮೊದಲಪ್ರಕರಣವಾಗಿ ಉತ್ತರಕನ್ನಡ ಜಿಲ್ಲೆಯ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಿಸಿದ ಪ್ರಕರಣದ ನಂತರ ಇಂದು ಒಂದೇ ದಿವಸ ಸಿದ್ಧಾಪುರದಲ್ಲಿ (ಮೇ31) ಎರಡು ಜನರಲ್ಲಿ ಕರೋನಾಸೋಂಕು ದೃಢಪಟ್ಟಿವೆ.
ಸಿದ್ಧಾಪುರದ ಜಿಡ್ಡಿ ಗ್ರಾಮದ 5 ಮನೆಗಳ ಪ್ರದೇಶವನ್ನು ಕಂಟೋನ್ಮೆಂಟ್ ಮಾಡಿದ ಕರೋನಾ ಸೋಂಕಿತ 12 ದಿವಸಗಳ ಹಿಂದೆ ಮಸ್ಕತ್ ನಿಂದ ಬೆಂಗಳೂರಿಗೆ ಬಂದಿಳಿದ ವ್ಯಕ್ತಿ, ಬೆಂಗಳೂರಿನಲ್ಲಿ10 ದಿವಸ ಕಾರಂಟೈನ್ ಆಗಿದ್ದ ವ್ಯಕ್ತಿ ಮೇ 29 ರಂದು ಬೆಂಗಳೂರಿನಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬೆಂಗಳೂರು-ಸಾಗರ ಬಸ್ ನಲ್ಲಿ ಸಾಗರಕ್ಕೆ ಬಂದು ಲಗೇಜ್ ರಿಕ್ಷಾದಲ್ಲಿ ಹುಟ್ಟೂರು ಜೋಗದ ಬಳಿಯ ಜಿಡ್ಡಿ ಸೇರಿಕೊಂಡಿದ್ದರು. …
….ಈ ವರೆಗೆ ಉತ್ತರಕನ್ನಡ ಜಿಲ್ಲೆಯಲ್ಲಿ 42 ಜನ ಕೋವಿಡ್ ಸೋಂಕಿತರು ಗುಣಮುಖರಾಗಿದ್ದಾರೆ. ಇತ್ಯಾದಿ…-samajamukhi.net

