

ಮಹಾರಾಷ್ಟ್ರದಿಂದ ಬಂದ ನೂರಾರು ಜನರಲ್ಲಿ ಉಡುಪಿಯಲ್ಲಿ ಒಂದೇ ದಿನ ಕರೋನಾ ದೃಢಪಟ್ಟ ಇಂದು ಉತ್ತರಕನ್ನಡ ಜಿಲ್ಲೆಯ ಸಿದ್ಧಾಪುರಕ್ಕೆ ಮಹಾರಾಷ್ಟ್ರದಿಂದ ಬಂದು ಕಾರಂಟೈನ್ ಆಗಿದ್ದ ಇಬ್ಬರಲ್ಲಿ ಕೋವಿಡ್ 19 ದೃಢವಾಗಿದೆ.
ಮೊನ್ನೆ ಕೋವಿಡ್ ದೃಢಪಟ್ಟ ಹಿರಿಯರೊಂದಿಗೆ ಮಹಾರಾಷ್ಟ್ರದಿಂದ ಬಂದು ಕಾವಂಚೂರಿನಲ್ಲಿ ಕಾರಂಟೈನ್ ಆಗಿದ್ದ ಈ ಇಬ್ಬರು ಯುವತಿಯರು ಸೇರಿ ಒಟ್ಟೂ ನಾಲ್ಕು ಜನರು ಮಹಾರಾಷ್ಟ್ರ ಠಾಣಾದಿಂದ ಪ್ರಯಾಣ ಬೆಳೆಸಿದ್ದರು. ಇವರಲ್ಲಿ ಮೂರು ಜನರಿಗೆ ಕರೋನಾ ದೃಢಪಟ್ಟಂತಾಗಿದೆ.
ಈ ಪ್ರಕರಣಗಳೊಂದಿಗೆ ಸಿದ್ಧಾಪುರದಲ್ಲಿ ಒಟ್ಟೂ 5 ಉತ್ತರಕನ್ನಡದಲ್ಲಿ ಒಟ್ಟೂ86 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು ಇವರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಗುಣಮುಖರಾಗಿದ್ದಾರೆ. ಮಹಾರಾಷ್ಟ್ರದಿಂದ ಬಂದವರೆಲ್ಲರಲ್ಲೂ ಕರೋನಾ ದೃಢಪಡುತ್ತಿರುವುದರಿಂದ ಹೊರ ರಾಜ್ಯಗಳಿಂ ದ ಬರುವ ಜನರಿಗೆ ಅವಕಾಶ ಮಾಡಿದ ಸರ್ಕಾರದ ಕ್ರಮದ ವಿರುದ್ಧ ಸಾರ್ವಜನಿಕರ ವಿರೋಧ ವ್ಯಕ್ತವಾಗಿದೆ.
