#ಸಮಾಜಮುಖಿ# ಕೊಡುಗೆ,ಬೀಳ್ಕೊಡುಗೆ, ಪ್ರಶಂಸೆ ಇತ್ಯಾದಿ…..

ಆಹಾರ ಸಾಮಗ್ರಿ ಕಿಟ್ ವಿತರಣೆ
(ಸಿದ್ದಾಪುರಜೂನ್,02)
ಉದ್ಯಮಿ ಉಪೇಂದ್ರ ಪೈ ಪಟ್ಟಣದ ಆಟೋ ಮಾಲಕ- ಚಾಲಕರಿಗೆ ಹಾಗೂ ಸವಿತಾ ಸಮಾಜದ ಸದಸ್ಯರಿಗೆ ಆಹಾರದ ಸಾಮಗ್ರಿಗಳನ್ನು ಹಾಳತಕಟ್ಟಾದ ಶ್ರೀ ಮಾರಿಕಾಂಬಾ ದೇವಾಲಯದ ಎದುರು ವಿತರಿಸಿದರು. ಪಟ್ಟಣದ ಎಲ್ಲ ಆಟೋ ಮಾಲಕ,ಚಾಲಕರು ಮತ್ತು ಸವಿತಾ ಸಮಾಜದ 60ಕ್ಕೂ ಹೆಚ್ಚು ಕುಟುಂಬದವರು ಈ ಕಿಟ್ ಗಳನ್ನು ಪಡೆದುಕೊಂಡರು.

edh

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉಪೇಂದ್ರ ಪೈ ಪ್ರಧಾನಿ ನರೇಂದ್ರ ಮೋದಿ ಹಾಗೂ ಇನ್ನಿತರ ಹಿರಿಯರು ಸೂಚಿಸಿದಂತೆ ಭವ್ಯಭಾರತ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಲು ಉದ್ದೇಶಿಸಿದ್ದು ನಮ್ಮಿಂದಾದ ಕೊಡುಗೆಯನ್ನು ನೀಡುತ್ತಿದ್ದೇವೆ. ಅನುಕೂಲ ಇದ್ದವರು, ಸ್ಥಿತಿವಂತರಾದವರು ಕಷ್ಟದಲ್ಲಿದ್ದವರಿಗೆ ನೆರವಾಗುವದು ಮನುಷ್ಯ ಧರ್ಮ. ಪರಸ್ಪರ ಪ್ರೀತಿ,ವಿಶ್ವಾಸ, ಆತ್ಮೀಯತೆಯಿಂದ ಇರಬೇಕು. ಇದರಿಂದ ಮನುಷ್ಯ ಜನ್ಮ ಸಾರ್ಥಕವಾಗುತ್ತದೆ. ಈವರೆಗೆ ಉಪೇಂದ್ರ ಪೈ ಟ್ರಸ್ಟ ವತಿಯಿಂದ ಯಾರಿಗೆ ಅವಶ್ಯಕತೆ ಇದೆ, ಯಾರು ನೊಂದವರಿದ್ದಾರೆ ಅವರಿಗೆ ನೆರವನ್ನು ನೀಡುತ್ತ ಬಂದಿದ್ದು ಶಿರಸಿ-ಸಿದ್ದಾಪುರ ತಾಲೂಕುಗಳಲ್ಲಿ ಈವರೆಗೆ 6500 ಆಹಾರ ಸಾಮಗ್ರಿಗಳ ಕಿಟ್‍ಗಳನ್ನು, ಸಾವಿರಕ್ಕೂ ಹೆಚ್ಚು ತರಕಾರಿ ಕಿಟ್‍ಗಳನ್ನು ನೀಡಲಾಗಿದೆ. ಯಾರು ಉಪಯೋಗಿಸುತ್ತಾರೋ ಅವರಿಗೆ ಸುಮಾರು 31 ಸಾವಿರ ಕೋಳಿಮೊಟ್ಟೆಗಳನ್ನು ನೀಡಿದ್ದೇವೆ.

ಶಿರಸಿಯಲ್ಲಿ 200 ಆಟೋದವರಿಗೆ ಆಹಾರ ಸಾಮಗ್ರಿ ಕಿಟ್ ನೀಡಿದ್ದು ಇಲ್ಲಿಯೂ ಇಂದು ಕಿಟ್ ಗಳನ್ನು ನೀಡುತ್ತಿದ್ದೇವೆ. ನನ್ನೊಂದಿಗೆ ನಮ್ಮ ಟ್ರಸ್ಟನ ಸದಸ್ಯರು ಮಾತ್ರವಲ್ಲದೇ ಆತ್ಮೀಯರಾದ ಪ್ರಕಾಶ ಪಾಲನಕರ, ಶಿರಸಿ ಆಟೋ ಚಾಲಕ, ಮಾಲಕ ಸಂಘದ ಪ್ರಧಾನ ಕಾರ್ಯದರ್ಶಿ ಈಶ್ವರ ಆಚಾರಿ, ಸದಸ್ಯರಾದ ಈಶ್ವರ ನಾಯ್ಕ ಸೇರಿದಂತೆ ಹಲವರು ಸಹಕಾರ ನೀಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸ್ಥಳೀಯ ಆಟೋ ಮಾಲಕ-ಚಾಲಕ ಸಂಘದ ಅಧ್ಯಕ್ಷ ನಂದಕುಮಾರ ಕೊಂಡ್ಲಿ, ಪ್ರಧಾನ ಕಾರ್ಯದರ್ಶಿ ವಾಸುದೇವ ಕೊಂಡ್ಲಿ, ಸವಿತಾ ಸಮಾಜದ ಅಧ್ಯಕ್ಷ ಸತೀಶ ಕೊಡಿಯಾ, ಕಾರ್ಯದರ್ಶಿ ಆನಂದ ಮಹಾಲೆ ಮುಂತಾದವರಿದ್ದರು.

ನಾಪತ್ತೆ ಆಗಿದ್ದ ತಾಯಿಯನ್ನು ಮಗನ ಜೊತೆ ಸೇರಿಸಿದ ನಾಗರಾಜ ನಾಯ್ಕ. ಪ್ರಚಲಿತ ಆಶ್ರಯಧಾಮ ಮಾನವೀಯ ಕಾರ್ಯ. ಎಲ್ಲೆಡೆ ಪ್ರಶಂಸೆ.
ಒಂದು ವರ್ಷದಿಂದ ಮನೆ ತೊರೆದು ಬೀದಿ ಬೀದಿ ಅಲೆದು ರೋಗದಲ್ಲಿ ಬಿದ್ದ ವೃದ್ಧೆಯನ್ನು ಆಶ್ರಮಕ್ಕೆ ಕರೆತಂದು ಆರೈಕೆ ಮಾಡಿ ಆಕೆಯ ವಿಳಾಸವನ್ನು ಪತ್ತೆ ಹಚ್ಚಿ ಒಂದು ವರ್ಷದಿಂದ ಹುಡುಕುತಿದ್ದ ಆಕೆಯ ಮಗನಿಗೆ ಆಕೆಯನ್ನು ಒಪ್ಪಿಸಿದವರು ಸಿದ್ದಾಪುರದ ಪ್ರಚಲಿತ ಆಶ್ರಯಧಾಮ ಅನಾಥಾಶ್ರಮದ ನಾಗರಾಜ ನಾಯ್ಕ. ಈ ಅಪೂರ್ವ ಕ್ಷಣಕ್ಕೆ ಸಿದ್ದಾಪುರ ಪೊಲೀಸ್ ಠಾಣೆ ಸಾಕ್ಷಿಯಾಯಿತು.
ಕಳೆದ ಐದಾರು ತಿಂಗಳುಗಳ ಹಿಂದೆ ಸಿದ್ದಾಪುರದ ರಸ್ತೆಯ ಮೇಲೆ ಅನಾರೋಗ್ಯದಿಂದ ಅಸಹಾಯಕ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದ ವೃದ್ಧ ಮಹಿಳೆಯನ್ನು108 ವಾಹನದಲ್ಲಿ ಸಿದ್ದಾಪುರ ತಾಲೂಕಾ ಸರಕಾರಿ ಆಸ್ಪತ್ರೆಗೆ ಸಾರ್ವಜನಿಕರು ಸೇರಿಸಿದ್ದರು. ಈ ಬಗ್ಗೆ ತಾಲೂಕ ಸರ್ಕಾರಿ ಆಸ್ಪತ್ರೆಯವರು ಸಿದ್ದಾಪುರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು.
ವಾಂತಿಯಿಂದ ಬಳಲುತ್ತಿದ್ದ ವೃದ್ಧ ಮಹಿಳೆಯು ರಸ್ತೆ ಮೇಲೆ ಬಿದ್ದು ಕಾಲು ಮಂಡಿಯ ಚಿಪ್ಪು ಒಡೆದು ಹೋಗಿ ಕೀವು ತುಂಬಿತ್ತು. ನಡೆದಾಡಲು ಆಗುತ್ತಿರಲಿಲ್ಲ ನಂತರ ಆಸ್ಪತ್ರೆಯವರು ಹಾಗೂ ಪೊಲೀಸ್ ಠಾಣೆಯಿಂದ ಕಾರ್ಯಕರ್ತ ನಾಗರಾಜ ನಾಯ್ಕರಿಗೆ ಫೋನ್ ಮಾಡಿ ವೃದ್ಧ ಮಹಿಳೆಯನ್ನು ನಾಗರಾಜ ನಾಯ್ಕರು ಸಿದ್ದಾಪುರದ ಮುಗದೂರಿನಲ್ಲಿ ನಡೆಸುತ್ತಿರುವ ಪ್ರಚಲಿತ ಆಶ್ರಯಧಾಮ ಅನಾಥಾಶ್ರಮದಲ್ಲಿ ಸೇರಿಸಿಕೊಂಡು ಆರೈಕೆ ಮಾಡುವಂತೆ ಕೇಳಿಕೊಂಡಿದ್ದರು. ಅದರಂತೆ ನಾಗರಾಜ ನಾಯ್ಕ ಹಾಗೂ ಆಶ್ರಮದ ಮೇಲ್ವಿಚಾರಕಿ ಮಮತಾ ನಾಯ್ಕ ಆಸ್ಪತ್ರೆಗೆ ಹೋಗಿ ಈ ವೃದ್ಧ ಮಹಿಳೆಯನ್ನು ಉಪಚಾರ ಮಾಡಿ, ಆರೈಕೆ ಮಾಡಿ ಔಷದೋಪಚಾರ ಕೊಡಿಸಿ ಆಸ್ಪತ್ರೆಯಿಂದ ಆಶ್ರಮಕ್ಕೆ ಕರೆತಂದು ಆರೈಕೆ ಮಾಡುತ್ತಿದ್ದರು. ಈಕೆಯ ಹೆಸರು ಶಾಂತಮ್ಮ ಎಂದು ತಿಳಿದುಬಂದಿತ್ತು. ನಂತರ ಕಳೆದ ಐದಾರು ತಿಂಗಳಿನಿಂದ ಈಕೆಯ ವಿಳಾಸವನ್ನು ಕಂಡು ಹಿಡಿಯಲು ಪ್ರಯತ್ನಿಸಿದರು ಸಾಧ್ಯವಾಗಿರಲಿಲ್ಲ.
ಈಗ ಕಳೆದ ವಾರದಿಂದ ಈಕೆಯ ವಿಳಾಸ ಪತ್ತೆಗಾಗಿ ಚಿತ್ರದುರ್ಗ ಜಿಲ್ಲೆಯ ರವಿಕುಮಾರ್ ಎನ್ನುವ ನಾಗರಾಜ ನಾಯ್ಕರ ಸ್ನೇಹಿತರ ಮೂಲಕ ಶಿರಾಳಕೊಪ್ಪದ ಕಾಳಪ್ಪ ಎನ್ನುವವರ ಸಂಪರ್ಕ ಮಾಡಿ ಅವರ ಮೂಲಕ ಶಾಂತಮ್ಮಳ ವಿಳಾಸವನ್ನು ಕಂಡುಹಿಡಿಯಲಾಗಿತ್ತು. ಶಾಂತಮ್ಮಳ ಮಗ ನಾಗರಾಜಪ್ಪನವರು ಸಿದ್ದಾಪುರಕ್ಕೆ ಆಗಮಿಸಿ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಅಧಿಕಾರಿಗಳ ಸಮಕ್ಷಮದಲ್ಲಿ ಶಾಂತಮ್ಮನನ್ನು ಭೇಟಿಯಾದರು. ಈ ಸಮಯದಲ್ಲಿ ತಾಯಿ ಮಗನ ಕಣ್ಣಲ್ಲಿ ಸಂತೋಷದ ಕಣ್ಣಿರು ಹರಿಯಿತು. ಒಂದು ವರ್ಷದಿಂದ ತಾಯಿಯನ್ನು ಹುಡುಕುತಿದ್ದ ನಾಗರಾಜಪ್ಪನ ಸಂತೋಷಕ್ಕೆ ಪಾರವೆ ಇರಲಿಲ್ಲ. ಶಾಂತಮ್ಮಳನ್ನು ಮಗನ ಜೊತೆ ಕಳುಹಿಸಲಾಯಿತು.
ಈ ಸಂದರ್ಭದಲ್ಲಿ ಸಿದ್ದಾಪುರ ಪೊಲೀಸ್ ಠಾಣೆಯ ಪೋಲೀಸ್ ನಿರೀಕ್ಷಕ ಪ್ರಕಾಶ್, ಪಿ ಎಸ್ ಐ ಮಂಜುನಾಥ ಬಾರ್ಕಿ, ಪೋಲೀಸ್ ಸಿಬ್ಬಂದಿಗಳು, ಪ್ರಚಲಿತ ಆಶ್ರಯಧಾಮ ಅನಾಥಾಶ್ರಮದ ಮುಖ್ಯಸ್ಥರಾದ ನಾಗರಾಜ ನಾಯ್ಕ ಹಾಗೂ ಆಶ್ರಮದ ಮೇಲ್ವಿಚಾರಕಿ ಮಮತಾ ನಾಯ್ಕ ಉಪಸ್ಥಿತರಿದ್ದರು.


ಸ್ಥಳದಲ್ಲಿ ಉಪಸ್ಥಿತರಿದ್ದ ಸಿದ್ದಾಪುರ ಪೋಲೀಸರು ಹಾಗೂ ಸಾರ್ವಜನಿಕರು ನಾಗರಾಜ ನಾಯ್ಕರ ಈ ಕಾರ್ಯಕ್ಕೆ ಮೆಚ್ಚಿ ಅಭಿನಂದನೆ ಸಲ್ಲಿಸಿದರು. ನಾಗರಾಜ ನಾಯ್ಕರು ಈಗಾಗಲೇ ಇಂತಹ ಅನೇಕರನ್ನು ರಕ್ಷಿಸಿ ಆರೈಕೆ ನೀಡುತಿದ್ದಾರೆ. ಕೆಲವರನ್ನು ಅವರ ಕುಟುಂಬಗಳಿಗೆ ತಲುಪಿಸುವ ಕಾರ್ಯ ಮಾಡಿದ್ದಾರೆ.

ಹೇಳಿಕೆ

          ಕಳೆದ ಒಂದು ವರ್ಷದ ಹಿಂದೆ ನಮ್ಮ ಅಮ್ಮ ಮನೆಬಿಟ್ಟು ಬಂದಿದ್ದಳು. ನಮ್ಮ ಅಮ್ಮನನ್ನು ನಾನು ಹುಡುಕದೆ ಇರುವ ಸ್ಥಳವಿಲ್ಲಾ. ನನ್ನ ಅಮ್ಮ ಬದುಕೇ ಇಲ್ಲಾ ಎಂದು ತಿಳಿದುಕೊಂಡಿದ್ದೆ. ಆದರೆ ಅವಳು ಬದುಕಿ ಸುರಕ್ಷಿತವಾಗಿ ಇರುವ ಬಗ್ಗೆ ತಿಳಿದು ನನಗೆ ತುಂಬಾ ಸಂತೋಷ ವಾಯಿತು. ನನ್ನ ಅಮ್ಮನನ್ನು ಇಷ್ಟು ದಿನಗಳ ಕಾಲ ಸುರಕ್ಷಿತವಾಗಿ ನೋಡಿಕೊಂಡ ನಾಗರಾಜ ನಾಯ್ಕ ಹಾಗೂ ಅವರ ತಂಡಕ್ಕೆ ಧನ್ಯವಾದಗಳು. 
             ನಾಗರಾಜಪ್ಪ 
           ಶಾಂತಮ್ಮನ ಮಗ

ತಾಯಿ ಮಗನನ್ನು ಒಂದುಗೂಡಿಸಿದ ಸಂತೋಷ ನನಗಿದೆ. ಸಿದ್ದಾಪುರ ಸರಕಾರಿ ಆಸ್ಪತ್ರೆಯ ವೈದ್ಯರುಗಳು, ಪೋಲೀಸರು ಹಾಗೂ ಸಾರ್ವಜನಿಕರ ಸಹಕಾರದಿಂದ ನನಗೆ ಈ ಸೇವೆ ಮಾಡಲು ಸಾಧ್ಯವಾಗುತ್ತಿದೆ.
ನಾಗರಾಜ ನಾಯ್ಕ
ಮುಖ್ಯಸ್ಥರು
ಪ್ರಚಲಿತ ಆಶ್ರಯಧಾಮ ಅನಾಥಾಶ್ರಮ.
ಮೊ. 9481389187

ಸಮಾಜಶಾಸ್ತ್ರ ಉಪನ್ಯಾಸಕಿ ನಾಗವೇಣಿ ನಾಯ್ಕ ಸೇವಾ ನಿವೃತ್ತಿ
ಸಿದ್ದಾಪುರ. ತಾಲೂಕಿನ ನಾಣಿಕಟ್ಟಾ ಕಾಲೇಜಿನಲ್ಲಿ ಸಮಾಜಶಾಸ್ತ್ರ ಉಪನ್ಯಾಸಕಿಯಾಗಿ ಸೇವೆಸಲ್ಲಿಸುತ್ತಿದ್ದ ನಾಗವೇಣಿ ಹನುಮಂತ ನಾಯ್ಕ ಸೇವೆಯಿಂದ ವಯೋನಿವೃತ್ತಿಹೊಂದಿದ್ದಾರೆ. ಮೂಲತ: ಕುಮಟಾ ತಾಲೂಕಿನವರಾದ ಇವರು ಕುಮಟಾದಲ್ಲಿ ತಮ್ಮ ಶಿಕ್ಷಣ ಮತ್ತು ತರಬೇತಿ ಮುಗಿದನಂತರ ಸಿದ್ದಾಪುರ ಹೊಸೂರಿನ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಾಧ್ಯಾಪಕರಾಗಿ 1984ರಲ್ಲಿ ಸೇವೆ ಪ್ರಾರಂಭ ಮಾಡಿದ್ದರು.

ನಂತರ ಬಾಲಕಿಯರ ಪ್ರೌಢಶಾಲೆ ನಿಲೇಕಣಿಯಲ್ಲಿ ಸಹಶಿಕ್ಷಕಿಯಾಗಿ ಸೇವೆ ಸಲ್ಲಿಸಿದರು. ಈ ಅವಧಿಯಲ್ಲಿ ಅವರಿಗೆ ಇಲಾಖೆ ನೀಡುವ ಜನಮೆಚ್ಚಿದ ಶಿಕ್ಷಕಿ ಗೌರವ ದೊರಕಿತ್ತು 2005ರಲ್ಲಿ ಪದೋನ್ನತಿಹೊಂದಿ ನಾಣಿಕಟ್ಟಾ ಕಾಲೇಜಿಗೆ ಉಪನ್ಯಾಸಕಿಯಾಗಿ ಆಗಮಿಸಿದ್ದರು. ಪ್ರತಿ ವರ್ಷವೂ ತಮ್ಮ ಬೋಧನೆಯ ವಿಷಯವಾದ ಸಮಾಜಶಾಸ್ತ್ರದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ನೂರಕ್ಕೆ ನೂರು ಫಲಿತಾಂಶ ದೊರಕುವಂತೆ ಶ್ರಮವಹಿಸಿದ್ದು ಇವರ ಸಾಧನೆ. ಸೇವೆಯಿಂದ ವಯೋನಿವೃತ್ತಿ ಹೊಂದಿದ ನಾಗವೇಣಿ ನಾಯ್ಕ ರನ್ನು ಕಾಲೇಜಿನ ಪ್ರಾಚಾರ್ಯ ಎಂ.ಕೆ.ನಾಯ್ಕ ಮತ್ತು ಉಪನ್ಯಾಸಕರು ಶನಿವಾರವೇ ಅಭಿನಂದಿಸಿ ಬೀಳ್ಕೊಟ್ಟರು. ಉಪನ್ಯಾಸಕರಾದ ಶ್ರೀನಿವಾಸ ನಾಗರಕಟ್ಟೆ, ಆನಂದು ಎಲ್ ನಾಯ್ಕ, ಶೈಲಾ ಹೆಗಡೆ, ಎಂ.ಆಯ್.ಹೆಗಡೆ, ಎಂ.ಎಂ.ಭಟ್ಟ ಉಪಸ್ಥಿತರಿದ್ದರು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *