

ಕರೋನಾ ವೈರಸ್ ರೋಗ ಜಗತ್ತಿನಾದ್ಯಂತ ಜನರನ್ನು ಭಯಬೀತ ಗೊಳಿಸಿದೆ, ಅದಕ್ಕಿಂತ ಹೆಚ್ಚಾಗಿ ವಿಶ್ವದಲ್ಲೆಡೆ ಲಾಕ್ಡೌನ್ ಕಾರಣದಿಂದ ಜನರ ಆರ್ಥಿಕತೆ ಮತ್ತು ಹಣದ ಹರಿವು ನಿಂತಿರುವುದರಿಂದ ಜನಸಾಮಾನ್ಯ ಈಗ ಕರೋನಾವೈರಸ್ ಗೆ ಹೆದರದಿದ್ದರೂ ಕರೋನಾ ಲಾಕ್ ಡೌನ್ ಸೃಷ್ಟಿಸಿರುವ ಆರ್ಥಿಕ ಮುಗ್ಗಟ್ಟಿನಿಂದ ಸಾಮಾನ್ಯ ಜರ್ಜರಿತ ನಾಗಿ ದಿಕ್ಕು ತೋಚದಂತಾಗಿದ್ದಾನೆ. ಈ ಸಾಮಾನ್ಯನ ಸಂಕಷ್ಪದ ಪರಿಸ್ಥಿತಿಯಲ್ಲಿ ಬೆನ್ನಿಗೆ ನಿಲ್ಲಬೇಕಾಗಿದ್ದ ಸರ್ಕಾರಗಳು ಸಹ ತಮ್ಮದೇ ಆರ್ಥಿಕ ದುಸ್ಥಿತಿ ಯ ಕಾರಣ ಅಸಹಾಯಕರಾಗಿ 20 ಲಕ್ಷ ಕೋಟಿ ಯಂತಹ ಜುಮ್ಲಾ ಪ್ಯಾಕೇಜ್ ನಂತಹ ಪರಿಹಾರಗಳಿಗೆ ಮೊರೆಹೋಗಿವೆ.
ಆದರೂ ಸಮಾಜದ ಅತಿ ಬಡ ಕೆಳವರ್ಗದ ಹೊಟ್ಟೆ ತುಂಬುವ ಕೆಲವು ಕಾರ್ಯಗಳು ಸರ್ಕಾರ ಗಳಿಂದ ನಡೆದಿವೆ. ಈ ಕಾರ್ಯದಲ್ಲಿ ಎಷ್ಟೋ ಸ್ಥಿತಿವಂತರೂ ಸಹ ಕೈಜೋಡಿಸಿ ತಮ್ಮ ಹೃದಯ ಶ್ರೀಮಂತಿಕೆಯನ್ನು ಮೆರೆದಿದ್ದಾರೆ. ಅದೇ ರೀತಿ ಕೆಲವು ರಾಜಕೀಯ ಪಕ್ಷಗಳು ಸ್ಟಿಕ್ಕರ್ ರಾಜಕಾರಣದಲ್ಲಿಯೂ ಸಹ ತೊಡಗಿದ್ದಾರೆ.
ಇದು ಸದ್ಯದ ಪರಿಸ್ಥಿತಿ, ಸರ್ಕಾರ ಮತ್ತು ರಾಜಕೀಯದವರ ಕತೆಯಾದರೆ. ಅಲ್ಲೊಂದು ಮಧ್ಯಮವರ್ಗ ಸರ್ಕಾರ ಮಾಡುವ ಸಹಾಯದ ಪರಿದಿಯಲ್ಲಿಯೂ ಬರದೆ ಸಿರಿವಂತರು ಮಾಡುವ ಸಹಾಯಕ್ಕೂ ಕೈಚಾಚಲಾಗದೆ 20 ಲಕ್ಷ ಕೋಟಿಯಲ್ಲಿ ನನಗೇನಾದರೂ ಬರಬಹುದೋ ಎಂಬ ಹುಸಿ ನಿರೀಕ್ಷೆ ಯ ಲ್ಲಿ ದಿಕ್ಕು ತೋಚದೆ ಮನೆಯಲ್ಲಿಯೂ ಹಾಯಾಗಿ ಕೂಡ್ರಲಾ ಗದೆ ಹೊರಹೋಗಿ ದುಡಿದು ತಿನ್ನಲೂ ಸಹ ಆಗದ ಅತಂತ್ರ ಸ್ಥಿತಿಯಲ್ಲಿ ಮಾಧ್ಯಮಗಳು ಕೊಡುವ ಬ್ರೇಕಿಂಗ್ ನ್ಯೂಸ್ ಗಳನ್ನು ನೋಡುತ್ತಾ ತಮ್ಮ ಮತ್ತು ತಮ್ಮ ಕುಟುಂಬದ ಭವಿಷ್ಯದ ಬಗ್ಗೆ ಚಿಂತಿಸುತ್ತ ಬಿಪಿ ಶುಗರ್ ಹೆಚ್ಚಿಸಿಕೊಂಡು ಅಸಹಾಯಕರಾ ಗಿರುವುದು ವಾಸ್ತವ.
ಈ ಎಲ್ಲಾ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯದ ಅನೇಕರು ಮಾನಸಿಕವಾಗಿ ನೊಂದು ವಿಪರೀತ ವಾದ ಹೆಜ್ಜೆಯಿಟ್ಟು ಬದುಕನ್ನು ಕಳೆದುಕೊಳ್ಳುವ
ಮಟ್ಟಕ್ಕೂ ತಲುಪಿದ್ದಾರೆ.
ಹಾಗಾದರೆ ಈ ಎಲ್ಲಾ ಪರಿಸ್ಥಿತಿಯನ್ನು ನಿಭಾಯಿಸುವುದಾದರೂ ಹೇಗೆ ?
How to stop worrying and start living ಲೇಖಕರಾದ ಡೇಲ್ ಕಾರ್ನಿಗಿ ಹೇಳುವಂತೆ
ಜೀವನದ ಯಾವುದೇ ಸಮಸ್ಯೆಗಳ ಬಗ್ಗೆ ಅತಿಯಾಗಿ ಚಿಂತಿಸುವ ದರಿಂದ ಯಾವುದೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ.ಚಿಂತಿಸುವುದರಿಂದ ಸಮಸ್ಯೆ ದಿನದಿಂದ ದಿನಕ್ಕೆ ಇನ್ನೂ ಹೆಚ್ಚು ಭೀಕರವಾದಂತೆ ಕಾಣುತ್ತದೆ.
ವಾಸ್ತವವಾಗಿ ಪರಿಸ್ಥಿತಿ ಮತ್ತು ಸಮಸ್ಯೆಗಳ ಬಗ್ಗೆ ನಾವು ಚಿಂತಿಸಿ ಅದಕ್ಕೆ ಇಲ್ಲದ ಅರ್ಥ ಕೊಡುತ್ತಾ ಹೋಗುತ್ತೇವೆ.
ಇದರಿಂದ ಹೊರಬರಲು ಲೇಖಕರು 3 ಸುಲಭದ ಸ್ಟೆಪ್ ಗಳನ್ನು ಸಲಹೆ ಮಾಡಿದ್ದಾರೆ ಅದು ಇಂದಿನ ನಾವೆಲ್ಲರೂ ಇರುವ ಪರಿಸ್ಥಿತಿಯಿಂದ ಹೊರಬರಲು ಸಹಾಯವಾಗಿದೆ.
Step 1 – ಯಾವುದೇ ಅಂಜಿಕೆಯಿಲ್ಲದೆ ಸದ್ಯದ ಪರಿಸ್ಥಿತಿಯನ್ನು ಸರಿಯಾಗಿ ಅವಲೋಕಿಸಿ ಆಗಬಹುದಾದ ಅತಿ ಕೆಟ್ಟ ಪರಿಣಾಮವನ್ನು ತಿಳಿದುಕೊಳ್ಳಿ.
Step 2 – ಸಂಭವಿಸಬಹುದಾದ ಅತಿ ಕೆಟ್ಟ ಪರಿಣಾಮವನ್ನು ತಿಳಿದುಕೊಂಡ ನಂತರ ವಾಸ್ತವವನ್ನು ಒಪ್ಪಿಕೊಳ್ಳಿ. ಇದರಿಂದ ವಿನಾಕಾರಣ ಸಮಸ್ಯೆಯ ಬಗ್ಗೆ ಚಿಂತಿಸಿ ಎಂದೂ ನಮ್ಮ ಜೀವನದಲ್ಲಿ ನಡೆಯದೆ ಇರುವ ಪರಿಣಾಮಗಳ ನ್ನೆಲ್ಲ ಅನುಭವಿಸುವುದು ತಪ್ಪಿ ಮನಸ್ಸಿಗೊಂದು ನೆಮ್ಮದಿ ಸಿಗುವುದು.
Step – 3 – ಸಂಭವಿಸಬಹುದಾದ ಅತಿ ಕೆಟ್ಟ ಪರಿಣಾಮವನ್ನು ಒಪ್ಪಿಕೊಂಡ ನಂತರ ಇದಕ್ಕಿಂತ ಹೆಚ್ಚೇನೂ ಆಗುವುದಿಲ್ಲ ಎಂದು ತಿಳಿದ ನಿಮ್ಮ ಮನಸ್ಸು ನಿರಾಳವಾಗುತ್ತದೆ ಅದರ ಜೊತೆಗೆ ಈ ಪರಿಸ್ಥಿತಿಯನ್ನು ಹೇಗೆ ಸುಧಾರಿಸಬಹುದು ಎಂಬುವದರ ಬಗ್ಗೆ ಚಿಂತನೆಮಾಡಿ.
ನಿರಾಳವಾಗಿರುವ ನಿಮ್ಮ ಮನಸ್ಸು ಸಮಗ್ರವಾಗಿ ಪರಿಹಾರದ ಬಗ್ಗೆ ಆಲೋಚನೆ ಮಾಡುವ ಮತ್ತು ಪರಿಹಾರ ಕಂಡುಕೊಳ್ಳಲು ಶಕ್ತವಾಗಿರುತ್ತದೆ.
ಅಗತ್ಯಬಿದ್ದರೆ ಹತ್ತಿರದ ಸ್ನೇಹಿತರಲ್ಲಿ ನಮ್ಮ ಸದ್ಯದ ಪರಿಸ್ಥಿತಿಯ ಬಗ್ಗೆ ಹೃದಯಬಿಚ್ಚಿ ಮಾತನಾಡುವುದರಿಂದಲೂ ಸಹ ಪರಿಸ್ಥಿತಿಯನ್ನು ಸುಧಾರಿಸಲು ಸಹಾಯಕಾರಿ.
ಸೋ ಸ್ಟಾಪ್ ವರಿಂಗ್ ಸ್ಟಾರ್ಟ್ ಲಿವಿಂಗ್ –
By – *ಲೋಹಿತ್ ನಾಯ್ಕ್*


