

ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಬಳ್ಳಾರಿ ಮೂಲದ ಸ್ತ್ರೀ ಪೀಡಕನೊಬ್ಬನನ್ನು ಬಂಧಿಸಿ,ನ್ಯಾಯಾಂಗದ ವಶಕ್ಕೆ ನೀಡಲಾಗಿದೆ.ಈತ ತನ್ನ ಪರಿಚಯದ ಶಿಕ್ಷಕಿಯೊಬ್ಬರಿಗೆ ಹಣಕ್ಕಾಗಿ ಪೀಡಿಸುತಿದ್ದ ಎಂದು ಆರೋಪಿಸಲಾಗಿದೆ. ಬಳ್ಳಾರಿ ಬಳಿ ಶಾಲಾ ಶಿಕ್ಷಕಿಯಾಗಿದ್ದ ಮಹಿಳೆಯೊಬ್ಬರ ಜೊತೆಗೆ ಸಲುಗೆಯಂದಿದ್ದುನಂತರ ತನ್ನ ಬಳಿ ಇದ್ದ ಚಿತ್ರಗಳನ್ನು ಬಳಸಿಕೊಂಡು ಹಣಕ್ಕಾಗಿ ಪೀಡಿಸುತಿದ್ದ ಎನ್ನಲಾಗಿದೆ. ಈತ ಶಿವಕುಮಾರ ಮುಳಸಾವಳಗಿ ಎನ್ನುವ ವ್ಯಕ್ತಿಯಾಗಿದ್ದು ಶಿರಸಿಗ್ರಾಮೀಣಭಾಗ ಬನವಾಸಿಹೋಬಳಿಯ ಶಿಕ್ಷಕಿಗೆ ಪೀಡಿಸುತಿದ್ದ ಎಂದು ಆರೋಪಿಸಲಾಗಿದೆ.

ಅತ್ಯಾಚಾರಿ ಪರಾರಿ-
ಶಿರಸಿ ನಗರಸಭೆಯ ಸದಸ್ಯ ಯಶವಂತ್ ಮರಾಠೆ ಮೇಲೆ ಅಪ್ರಾಪ್ತಬಾಲಕಿಯ ಅತ್ಯಾಚಾರದ ಆರೋಪ ಕೇಳಿಬಂದಿದ್ದು ಶಿರಸಿ ಗ್ರಾಮೀಣಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿರಸಿ ಗ್ರಾಮೀಣ ಭಾಗದ 16 ವರ್ಷದ ಬಾಲಕಿಗೆ ಅತ್ಯಾಚಾರವೆಸಗುವ ಉದ್ದೇಶದಿಂದ ನಂಬಿಸಿ,ಅಧಿಕಾರ ಬಳಸಿ ಬಚಾವಾಗಲು ಪ್ರಯತ್ನಿಸಿ ನಂತರ ನಾಪತ್ತೆಯಾಗಿದ್ದಾನೆ.
ಅಪ್ರಾಪ್ತಬಾಲಕಿಯನ್ನು ನಂಬಿಸಿ ನಿರಂತರ ಅತ್ಯಾಚಾರ ಎಸಗಿದ ಆರೋಪಕ್ಕೆ ಯಶವಂತ್ ಮರಾಠೆ ಮೇಲೆ ಪೋಸ್ಕೋ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ.
ಉ.ಕ. ಜೂನ್ 30 ರ ವರೆಗೆ ಲಾಕ್ ಡೌನ್ ಮುಂದುವರಿಕೆ ಜಿಲ್ಲಾಧಿಕಾರಿ ಆದೇಶ
ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಜೂನ್ 30 ರ ವರೆಗೆ ಲಾಕ್ಡೌನ್ ಮುಂದುವರಿದಿದ್ದು ರಾತ್ರಿ 9 ರಿಂದ ಬೆಳಿಗ್ಗೆ 5 ರ ವರೆಗೆ ಜಿಲ್ಲೆಯಲ್ಲಿ ಸಾರ್ವಜನಿಕ ಸಂಚಾರವನ್ನು ನಿರ್ಬಂಧಿಸಲಾಗಿದೆ. ಕಂಟೇನ್ ಮೆಂಟ್ ಪ್ರದೇಶ ಹೊರತುಪಡಿಸಿ ಉಳಿದೆಡೆ ಈ ನಿಯಮ ಅನ್ವಯವಾಗಿತಿದ್ದು ಎಳೆಯರು ಮತ್ತು ವೃದ್ಧರ ಓಡಾಟವನ್ನೂ ನಿಷೇಧಿಸಲಾಗಿದೆ, ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಸ್ಪಸ್ಟಪಡಿಸಿರುವ ಜಿಲ್ಲಾಧಿಕಾರಿ ಹರೀಶ್ ಕುಮಾರ ಕೆ. ಇಂದಿನಿಂದ ಜೂನ್ 30 ರ ವೆರೆಗೆ ಈ ಆದೇಶ ಜಾರಿಯಲ್ಲಿರುತ್ತದೆ ಎಂದಿದ್ದಾರೆ.
ಬೆಂಗಳೂರಿನ ಪ್ರಕರಣದಿಂದ ಕಂಟೇನ್‍ಮೆಂಟ್ ಆದ ಜೋಗ ಬಳಿಯ ಕುಗ್ರಾಮ ಜಿಡ್ಡಿ
ಇಂತಿದೆ ಇಂದಿನ ಸಿದ್ಧಾಪುರದ ಪ್ರಕರಣಗಳ ಪ್ರವಾಸ ಚರಿತ್ರೆ
ಕಳೆದ ವಾರ ಸಿದ್ಧಾಪುರದ ಮೊದಲಪ್ರಕರಣವಾಗಿ ಉತ್ತರಕನ್ನಡ ಜಿಲ್ಲೆಯ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಿಸಿದ ಪ್ರಕರಣದ ನಂತರ ಇಂದು ಒಂದೇ ದಿವಸ ಸಿದ್ಧಾಪುರದಲ್ಲಿ (ಮೇ31) ಎರಡು ಜನರಲ್ಲಿ ಕರೋನಾಸೋಂಕು ದೃಢಪಟ್ಟಿವೆ.
ಸಿದ್ಧಾಪುರದ ಜಿಡ್ಡಿ ಗ್ರಾಮದ 5 ಮನೆಗಳ ಪ್ರದೇಶವನ್ನು ಕಂಟೇ ನ್ಮೆಂಟ್ ಮಾಡಿದ ಕರೋನಾ ಸೋಂಕಿತ 12 ದಿವಸಗಳ ಹಿಂದೆ ಮಸ್ಕತ್ ನಿಂದ ಬೆಂಗಳೂರಿಗೆ ಬಂದಿಳಿದ ವ್ಯಕ್ತಿ, ಬೆಂಗಳೂರಿನಲ್ಲಿ10 ದಿವಸ ಕಾರಂಟೈನ್ ಆಗಿದ್ದ ವ್ಯಕ್ತಿ ಮೇ 29 ರಂದು ಬೆಂಗಳೂರಿನಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬೆಂಗಳೂರು-ಸಾಗರ ಬಸ್ ನಲ್ಲಿ ಸಾಗರಕ್ಕೆ ಬಂದು ಲಗೇಜ್ ರಿಕ್ಷಾದಲ್ಲಿ ಹುಟ್ಟೂರು ಜೋಗದ ಬಳಿಯ ಜಿಡ್ಡಿ ಸೇರಿಕೊಂಡಿದ್ದರು. …….
ಇಲಿಯಾಸ್ ಶೇಖ್ ರಿಂದ ಕಿಟ್ ವಿತರಣೆ-
ಕರೋನಾ ತೊಂದರೆ, ಲಾಕ್ ಔಟ್ ರಗಳೆಗಳ ಹಿನ್ನೆಲೆಯಲ್ಲಿ ತೊಂದರೆಗೆ ಒಳಗಾದ ತಾಲೂಕಿನ ಬಡವರಿಗೆ ಜೆ.ಡಿ.ಎಸ್. ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇಲಿಯಾಸ್ ಶೇಖ್ ರಾಘವೇಂದ್ರ ಮಠದ ಬಳಿ ಎರಡನೇ ಬಾರಿ ಜೀವನಾವಶ್ಯಕ ವಸ್ತುಗಳ ಕಿಟ್ ವಿತರಿಸಿದರು.
ಯಲ್ಲಾಪುರದ 5 ಜನರಿಗೆ ಕರೋನಾ-
ಹೊರ ರಾಜ್ಯದಿಂದ ಬಂದು ಕಾರಂಟೈನ್ ಮುಗಿಸಿ ಮನೆಗೆ ತೆರಳಿದ್ದ ಯಲ್ಲಾಪುರ ಕಿರವತ್ತಿಯ ಒಂದೇ ಕುಟುಂಬದ 5 ಜನರಲ್ಲಿ ಕರೋನಾ ದೃಢ ಪಟ್ಟಿದೆ. ಇದೇ ತಾಲೂಕಿನ ಗ್ರಾಮೀಣ ಪ್ರದೇಶ ಮಾನಿಮೋಲೆ ಗ್ರಾಮದ ವೃದ್ಧರೊಬ್ಬರು ಬಾವಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
