

ಸಿದ್ಧಾಪುರದಲ್ಲಿ ಕಾಡುಬೀಜ ಸಂಗ್ರಹಿಸುವ ಗಣಪತಿ ವಡ್ಡಿನಗದ್ದೆ ತಮ್ಮ ಗ್ರಾಮದಲ್ಲಿ ಕಾಡುಬೀಜಗಳನ್ನು ಭೂಮಿಗೆ ಬಿತ್ತುವ ಮೂಲಕ ಪರಿಸರದಿನ ಆಚರಿಸಿದರು.
ಶಿರಸಿ ಪೋಲೀಸರು ಹಸಿರುಪಟ್ಟಿ ಕಟ್ಟಿಕೊಂಡು ಕರ್ತವ್ಯ ನಿರ್ವಹಿಸಿದ್ದಲ್ಲದೆ ಮಾರುಕಟ್ಟೆಠಾಣೆ ಪ್ರದೇಶದಲ್ಲಿ ವೃಕ್ಷಾರೋಪಣ ಮಾಡಿ ಪರಿಸರ ದಿನ ಆಚರಿಸಿದರು.
ಸಿದ್ಧಾಪುರ ಮನಮನೆಯಲ್ಲಿ ರವಿಚೆನ್ನಣ್ಣನವರ್ ಅಭಿಮಾನಿ ಬಳಗದ ಸದಸ್ಯರು ಗಿಡನೆಡುವ ಮೂಲಕ ವಿಶ್ವಪರಿಸರ ದಿನ ಆಚರಿಸಿದರು.
ಸಾಗರ ಹೊನ್ನೆಮರುಡುವಿನಲ್ಲಿ ಸ್ವಾಮಿ,ನೊಮಿಟೋ ನೇತೃತ್ವದಲ್ಲಿ ಪರಿಸರ ದಿನ ಆಚರಿಸಿ ಗಂಗಾಧರ ಕೊಳಗಿಯವರ ಯಾನ ಪುಸ್ತಕ ವಿತರಿಸಿದರು.




