

ಪಶ್ಚಿಮಘಟ್ಟದ ಪರಿಸರ ವೈವಿಧ್ಯ ಇಲ್ಲಿಯ ಜನಜೀವನಕ್ಕೆ ವರ. ಈ ವರದ ಕಾರಣ ಅನೇಕರು ಈ ಪರಿಸರದ ಫಲಾನುಭವಿಗಳಾದರೆ ಕೆಲವರು ಈ ಪ್ರಕೃತಿಯ ಸಂರಕ್ಷಣೆ,ಪೋಷಣೆಗೆ ತಮ್ಮದೇ ಅಳಿಲು ಸೇವೆ ಸಲ್ಲಿಸುವ ಮೂಲಕ ಜೀವವೈವಿಧ್ಯ ರಕ್ಷಣೆಗೆ ಕೊಡುಗೆ ನೀಡುತಿದ್ದಾರೆ.ಇಂಥವರಲ್ಲಿ ಗಣಪತಿ ಹೆಗಡೆ ವಡ್ನಗದ್ದೆ ಮತ್ತು ಎಂ.ಬಿ.ನಾಯ್ಕ ಕಡಕೇರಿ ಪ್ರಮುಖರು.
ಎಂ.ಬಿ.ನಾ. ಮತ್ತು ಗಣಪತಿ ಹೆಗಡೆಯವರ ಸಾಮ್ಯತೆಗಳೆಂದರೆ….
ಇಬ್ಬರೂ ಪರಿಸರ ವಿಜ್ಞಾನ, ಬೈಯೋ ಟೆಕ್ನಾಲಜಿ, ಅರಣ್ಯಶಾಸ್ತ್ರ ಗಳನ್ನು ಶಾಸ್ತ್ರೀ ಯವಾಗಿ ಓದಿದವರಲ್ಲ.ಪದವಿಧರರಲ್ಲದ ಇಬ್ಬರೂ ಅರಣ್ಯ,ಸಸ್ಯಲೋಕದ ಬಗ್ಗೆ ಅಪಾರ ಪ್ರೀತಿ-ಕಾಳಜಿ ಹೊಂದಿದವರು.
ಎಂ.ಬಿ.ನಾಯ್ಕ ಕಷಿ ಕಟ್ಟುವ, ಸಸಿಗಳನ್ನು ಬೆಳೆಸುವ, ಸಂಶೋಧಕರಿಗೆ ಮಾರ್ಗದರ್ಶನ ಮಾಡುವ ಮೂಲಕರಾಜ್ಯ ಪರಿಸರ ಪ್ರಶಸ್ತಿ ಪಡೆದ ವಿರಳ ಸಾಧಕರಾದರೆ,
ಗಣಪತಿ ವಡ್ನಗದ್ದೆಯವರಿಗೆ ಕಾಡೇ ಅವರ ಆಸ್ತಿ! ಬೆಟ್ಟ-ಗುಡ್ಡ,ಕಣಿವೆಗಳಲ್ಲಿ ಕಾಡು ಬೀಜಗಳನ್ನು ಸಂಗ್ರಹಿಸಿ ಅವುಗಳನ್ನು ಅವುಗಳ ಅನುಕೂಲಕರ ವಾತಾವರಣದಲ್ಲಿ ಬಿತ್ತುವ ಇವರಿಗೆ ಕಾಡು ನೆಡುವುದೇ ಹವ್ಯಾಸ.
ಸಮಾನ ಆಸಕ್ತರಾದ ಇಬ್ಬರೂ ಸೇರಿ ಕಾರ್ಯಕ್ರಮ ಮಾಡುವುದು, ಕಾರ್ಯಕ್ರಮಗಳಲ್ಲಿ ಕಾಡಿನ ಮಹತ್ವ ಸಾರುವುದು ಸೇರಿದಂತೆ ವರ್ಷವಿಡೀ ಪರಿಸರದ ಕೆಲಸ ಮಾಡುವುದೇ ಇವರ ಪ್ರವೃತ್ತಿ.
ಎಂ.ಬಿ.ನಾಯ್ಕ ಮಲೆನಾಡು ಪಶ್ಚಿಮಘಟ್ಟದ ಸಸ್ಯಪ್ರಭೇದಗಳನ್ನು ರಾಜ್ಯ, ರಾಷ್ಟ್ರದಾದ್ಯಂತ
ಉದ್ಯಾನವನಗಳಲ್ಲಿ ನೆಡಿಸುವ ಮೂಲಕ ಪಶಿಮಘಟ್ಟದ ಸಸ್ಯ ಪ್ರಭೇದಗಳನ್ನು ಬಯಲುನಾಡು, ಸೀಮೆಗಳಿಗೂ ಪರಿಚಯಿಸಿದ್ದಾರೆ. ಕಡಿಮೆ ಮಳೆ, ಒಣ ಹವೆಯಲ್ಲಿ ಮಳೆನಾಡಿನ ಗಿಡಗಳನ್ನು ಬೆಳೆಸುವ ವಿಧಾನವನ್ನು ಪರಿಚಯಿಸುತ್ತಿರುವ ಎಂ.ಬಿ.ನಾಯ್ಕ ನೂರಾರು ಅಳಿವಿನಂಚಿನ ಸಸ್ಯ ಪ್ರಭೇದಗಳನ್ನು ಉಳಿಸಿದ್ದಾರೆ.
ಇಂಥ ಕೆಲಸಗಳಿಗೆ ನೆರವಾಗುವ ಗಣಪತಿ ವಡ್ನಗದ್ದೆ ತಮ್ಮ ಪರಿಸರ, ಮಲೆನಾಡಿನ ಬೆಟ್ಟ-ಗುಡ್ಡಗಳಲ್ಲಿ ಈ ಭಾಗದ ಕಾಡು ಬೀಜಗಳನ್ನು ಬಿತ್ತಿ ನೈಸರ್ಗಿಕ ಕಾಡಿನ ಅಭಿವೃದ್ಧಿಗೆ ಶ್ರಮಿಸಿದ್ದಾರೆ.ಸಿದ್ಧಾಪುರ ತಾಲೂಕು, ಉತ್ತರ ಕನ್ನಡ ಜಿಲ್ಲೆಯಿಂದ ಪ್ರಾರಂಭಿಸಿ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ವರೆಗೆ ಪ್ರಕೃತಿ, ಪರಿಸರಕ್ಕಾಗಿ ಪ್ರವಾಸ ಮಾಡುವ ಆಸಕ್ತಿಯ ಈ ಇಬ್ಬರೂ ಕೃಷಿಕರು ಎನ್ನುವುದು ವಿಶೇಶ.
ಅರಣ್ಯ ಇಲಾಖೆ, ಅರಣ್ಯ ಕಾಲೇಜುಗಳಿಗೆ ಸಂನ್ಮೂಲ ವ್ಯಕ್ತಿಗಳಾಗಿರುವ ಇವರು ಜೂನ್ 5 ರಂದು ಮಾತ್ರ ವಿಶ್ವ ಪರಿಸರ ದಿನ ಆಚರಿಸದೆ ಪ್ರತಿದಿನವನ್ನು ಪರಿಸರ ದಿನವನ್ನಾಗಿಸಿಕೊಂಡಿದ್ದಾರೆ. ಈ ಇಬ್ಬರ ಜ್ಞಾನ, ಆಸಕ್ತಿ, ಅಭಿರುಚಿ ಹೊಸ ಪೀಳಿಗೆಗೆ ಪರಿಚಯವಾಗಬೇಕಾಗಿದೆ.
(related-ಈ ಮರ ಸುತ್ತಿ ಬಂಜೆತನದಿಂದ ಮುಕ್ತರಾಗಿ)
(news today )ಶಿರಸಿಯಲ್ಲಿ ಸ್ತ್ರೀ ಪೀಡಕನ ಬಂಧನ,ಅತ್ಯಾಚಾರಿ ಪರಾರಿ
ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಬಳ್ಳಾರಿ ಮೂಲದ ಸ್ತ್ರೀ ಪೀಡಕನೊಬ್ಬನನ್ನು ಬಂಧಿಸಿ,ನ್ಯಾಯಾಂಗದ ವಶಕ್ಕೆ ನೀಡಲಾಗಿದೆ.ಈತ ತನ್ನ ಪರಿಚಯದ ಶಿಕ್ಷಕಿಯೊಬ್ಬರಿಗೆ ಹಣಕ್ಕಾಗಿ ಪೀಡಿಸುತಿದ್ದ ಎಂದು ಆರೋಪಿಸಲಾಗಿದೆ. ಬಳ್ಳಾರಿ ಬಳಿ ಶಾಲಾ ಶಿಕ್ಷಕಿಯಾಗಿದ್ದ ಮಹಿಳೆಯೊಬ್ಬರ ಜೊತೆಗೆ ಸಲುಗೆಯಂದಿದ್ದುನಂತರ ತನ್ನ ಬಳಿ ಇದ್ದ ಚಿತ್ರಗಳನ್ನು ಬಳಸಿಕೊಂಡು ಹಣಕ್ಕಾಗಿ ಪೀಡಿಸುತಿದ್ದ ಎನ್ನಲಾಗಿದೆ. ಈತ ಶಿವಕುಮಾರ ಮುಳಸಾವಳಗಿ ಎನ್ನುವ ವ್ಯಕ್ತಿಯಾಗಿದ್ದು ಶಿರಸಿಗ್ರಾಮೀಣಭಾಗ ಬನವಾಸಿಹೋಬಳಿಯ ಶಿಕ್ಷಕಿಗೆ ಪೀಡಿಸುತಿದ್ದ ಎಂದು ಆರೋಪಿಸಲಾಗಿದೆ.
ಅತ್ಯಾಚಾರಿ ಪರಾರಿ-
ಶಿರಸಿ ನಗರಸಭೆಯ ಸದಸ್ಯ ಯಶವಂತ್ ಮರಾಠೆ ಮೇಲೆ ಅಪ್ರಾಪ್ತಬಾಲಕಿಯ ಅತ್ಯಾಚಾರದ ಕೇಳಿಬಂದಿದ್ದು ಶಿರಸಿ ಗ್ರಾಮೀಣಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿರಸಿ ಗ್ರಾಮೀಣ ಭಾಗದ 16 ವರ್ಷದ ಬಾಲಕಿಗೆ ಅತ್ಯಾಚಾರವೆಸಗುವ ಉದ್ದೇಶದಿಂದ ನಂಬಿಸಿ,ಅಧಿಕಾರ ಬಳಸಿ ಬಚಾವಾಗಲು ಪ್ರಯತ್ನಿಸಿ ನಂತರ ನಾಪತ್ತೆಯಾಗಿದ್ದಾನೆ. ಅಪ್ರಾಪ್ತಬಾಲಕಿಯನ್ನು ನಂಬಿಸಿ ನಿರಂತರ ಅತ್ಯಾಚಾರ ಎಸಗಿದ ಆರೋಪಕ್ಕೆ ಯಶವಂತ್ ಮರಾಠೆ ಮೇಲೆ ಪೋಸ್ಕೋ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ.





