

ಉತ್ತರ-ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳ ಗಡಿಯಲ್ಲಿರುವ ಜಗದ್ವಿಖ್ಯಾತ ಜೋಗಜಲಪಾತ ಇಂದಿನಿಂದ ಸಾರ್ವಜನಿಕರಿಗೆ ಮುಕ್ತವಾಗಿದೆ. ಕಳೆದ ಎರಡು ತಿಂಗಳುಗಳಿಂದ ಕರೋನಾ-ಲಾಕ್ ಔಟ್ ಹಿನ್ನೆಲೆಗಳಲ್ಲಿ ಜೋಗ ಜಲಪಾತಕ್ಕೆ ಸಾರ್ವಜನಿ ಕರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಈ ಬಗ್ಗೆ ಸ್ಪಷ್ಟಪಡಿಸಿರುವ ಶಿವಮೊಗ್ಗ ಜಿಲ್ಲಾಡಳಿತ ಜೂನ್ 8 ರಿಂದ ಜೋಗ ಜಲಪಾತ ಸಾರ್ವಜನಿಕರಿಗೆ ಮುಕ್ತವಾಗಿದ್ದು ಕೋವಿಡ್ 19- ಸುರಕ್ಷತಾ ಕ್ರಮಗಳ ಮೂಲಕ ಸಾರ್ವಜನಿಕರು ಜೋಗ ಪ್ರವೇಶಿಸಬಹುದಾಗಿದೆ. ಮಾಸ್ಕ್ ಮತ್ತು ಸೆನಿಟೈಸರ್ ಬಳಕೆ ಕಡ್ಡಾಯವಾಗಿದ್ದು ಸರ್ಕಾರ ಮತ್ತು ಆರೋಗ್ಯ ಇಲಾಖೆಯ ನಿರ್ಧೇಶನಗಳನ್ನು ಪಾಲಿಸುವ ಮೂಲಕ ವೈಯಕ್ತಿಕ ಅಂತರ, ಸುರಕ್ಷತೆಗಳನ್ನು ಕಾಪಾಡಲು ಸೂಚಿಸಿದೆ.ಕಳೆದ ವಾರದ ಮಳೆ ಬರಲಿರುವ ಮಳೆಗಾಲದ ಹಿನ್ನೆಲೆಯಲ್ಲಿ ಜೋಗ ಜಲಪಾತ ವೀಕ್ಷಣೆಗೆ ಬರುವ ಜನರ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ.

