kaadupaapa-ಕಡು ಪಾಪದ ಪ್ರಾಣಿ ಕಾಡುಪಾಪ

ಬಲು ಅಪರೂಪದ ವಿರಳವಾಗಿ ಮನುಷ್ಯನಿಗೆ ಕಾಣಸಿಗುವ ಕಾಡುಪಾಪ ಶನಿವಾರ ಮುಠ್ಠಳ್ಳಿಯಲ್ಲಿ ಕಂಡು ಅದನ್ನು ಸ್ಥಳಿಯರು ಮರಳಿ ಕಾಡಿಗೆ ತಲುಪಿಸಿದ್ದಾರೆ. ಪಶ್ಚಿಮಘಟ್ಟ ಸೇರಿದಂತೆ ಅತಿ ಕಡಿಮೆ ಪ್ರದೇಶದಲ್ಲಿ ಬಹುವಿರಳವಾಗಿ ಕಾಣಸಿಗುವ ಈ ಕಾಡುಪಾಪದ kannda online ವರದಿಯೊಂದು ಇಲ್ಲಿದೆ.

ಶಾಲೆಗೆ ಬಂದ ಲಜ್ಜಾ ಸುಂದರಿ ಕಾಡುಪಾಪ ವೃತ್ತಾಂತ -By ಸ ರಘುನಾಥ, ಕೋಲಾರ |

ಒಂದು ದಿನ ಸಂಜೆ ಮಾವಿನ ಮರದಡಿ ಎಮ್ಮೆಯಿಂದ ಹಾಲು ಕರೆಯುತ್ತಿದ್ದಳು ಅಜ್ಜಿ. ನಾನು ಕರುವನ್ನು ಹಿಡಿದುಕೊಂಡು ನಿಂತಿದ್ದೆ. ಮರದ ಮೇಲೆ ಏನೋ ಸರಿದಂತಾಗಿ ಅಜ್ಜಿ ತಲೆ ಎತ್ತಿ ನೋಡಿ, ಗುಟ್ಟು ಹೇಳುವವಳಂತೆ ‘ನೋಡೊ ಅಲ್ಲಿ ಕಾಡುಪಾಪ’ ಎಂದು ಪಿಸುಗುಟ್ಟಿದಳು. ನೋಡಿದೆ. ಸಂಜೆಗತ್ತಲಿನಲ್ಲಿ ಎಲೆಗಳ ಮರೆಯಲ್ಲಿ ಎರಡು ಅಗಲವಾದ ಕಂಗಳು ಹೊಳೆಯುತ್ತಿದ್ದವು. ಅದರ ಕೂಗು ನೆನಪಾಗಿ ದಿಗಿಲಾಯಿತು.

ಆಗ ಎಮ್ಮೆ ವಂಯ್ ಎಂದು ಕೂಗಿತು. ಕೂಡಲೇ ಕಾಡುಪಾಪ ಮಾಯವಾಯಿತು. ತಾತ ಬೆಳೆಸಿದ ಮರಗಳು ಹೇಗೆ ವಿಸ್ತರಿಸಿಕೊಂಡಿದ್ದವೆಂದರೆ ಹಲಸು, ಮಾವು, ನೇರಳೆ, ಮಳೆ ಮರಗಳು ಒಂದಕ್ಕೊಂದು ಕಸಿ ಮಾಡಿ ಬೆಳೆಸಿದ್ದಂತೆ ಚಾಚಿಕೊಂಡಿದ್ದವು. ಇದರಿಂದ ಹಲಸಿನಲ್ಲಿ ಮಾವು, ಮಾವಿನಲ್ಲಿ ನೇರಳೆ ಹುಟ್ಟಿ ಬೆಳೆದಂತೆ ತೋರುತ್ತಿತ್ತು. ಒಂದು ಮರವೇರಿ ಕೊಂಚ ಧೈರ್ಯ ವಹಿಸುವ ಸಾಹಸ ಮಾಡಿದರೆ ನಾಕಾರು ಮರಗಳಲ್ಲಿ ಸಂಚರಿಸಬಹುದಿತ್ತು. ನದಿಯ ಒಂದು ದಡದಿಂದ ಈಜಿ ಇನ್ನೊಂದು ದಡ ತಲುಪುವಂತೆ.

ನಾನು ಹತ್ತಿದ ಮರದಿಂದ ಇಳಿದು ಇನ್ನೊಂದನ್ನು ಏರುತ್ತಿದ್ದುದು ವಿರಳ. ಇದನ್ನು ಬಲ್ಲ ಅಜ್ಜಿ ನನ್ನನ್ನು ಎರಡು ಕಾಲಿನ ಮಂಗ ಅನ್ನುತ್ತಿದ್ದಳು. ಕಾಡಿಗೆ ಹೋಗಿ ಸೌದೆ ತರಲು ಬಿಡುವಾಗದ ದಿನಗಳಲ್ಲಿ ಮರಗಳಲ್ಲಿ ಒಣಗಿದ ರೆಂಬೆಗಳನ್ನು ಮುರಿದು, ಸೌದೆ ಮಾಡುವುದು ನನ್ನ ಕೆಲಸವಾಗಿತ್ತು. ಇತರೆ ಮರಗಳಿಗಿಂತ ಹಲಸಿನ ಮರಗಳಲ್ಲಿನ ಕೊಂಬೆಗಳು ಒಣಗಿರುತ್ತಿದ್ದುದು ಹೆಚ್ಚು. ಪಿಳಿಪಿಳಿ ಕಣ್ಣಿನ ಜೀವಿಯೊಂದು ಮಾವಿನ ಮರದಿಂದ ಹಲಸಿನ ಮರಕ್ಕೆ ಬರುತ್ತಿತ್ತು

ಪಿಳಿಪಿಳಿ ಕಣ್ಣಿನ ಜೀವಿಯೊಂದು ಮಾವಿನ ಮರದಿಂದ ಹಲಸಿನ ಮರಕ್ಕೆ ಬರುತ್ತಿತ್ತು ಒಂದು ದಿವಸ ಸೌದೆಗಾಗಿ ಹಲಸಿನ ಮರವೇರಿದವನು ಅದರಲ್ಲಿನ ಒಣ ಕೊಂಬೆಗಳನ್ನು ಮುರಿದು ಮಾವಿನ ಮರಕ್ಕೆ ಹೋಗುವ ಸಾಹಸದ ಕೊನೇ ಹಂತದಲ್ಲಿದ್ದೆ. ಆಗಲೆ ಪಿಳಿಪಿಳಿ ಕಣ್ಣಿನ ಜೀವಿಯೊಂದು ಮಾವಿನ ಮರದಿಂದ ಹಲಸಿನ ಮರಕ್ಕೆ ಬರುತ್ತಿತ್ತು. ಅದನ್ನು ನೋಡಿ ನಾನು ಅಲುಗದೆ ನಿಂತೆ. ನನ್ನನ್ನು ನೋಡಿ ಅದು ನಿಂತಿತು. ಇಬ್ಬರ ಕಣ್ಣುಗಳೂ ಸಂಧಿಸಿದವು. ಅದರ ಭಯ ನನಗಿದ್ದಂತೆ, ನನ್ನ ಭಯ ಅದಕ್ಕಿದ್ದಂತಿತ್ತು. ನನ್ನ ಕೈಕಾಲುಗಳು ನಡುಗಿ ಬಿಗಿ ತಪ್ಪಿತು. ನಾನು ಎಮ್ಮೆ ಕಟ್ಟಲು ಹಾಕಿದ್ದ ಇಳಿಜಾರು ಚಪ್ಪರದ ಮೇಲೆ ಬಿದ್ದೆ. ತರಚು ಗಾಯಗಳೊಂದಿಗೆ ಮನೆ ಸೇರಿ, ‘ಮರದ ಮೇಲಿದ್ದಾಗ ಕೋತಿ ಆಟ ಆಡಬೇಡವೆಂದರೆ ಕೇಳುತ್ತೀಯ’ ಎಂದು ಅಜ್ಜಿ ಕೈಲಿ ಗದರಿಸಿಕೊಂಡೆ. ಇದರಿಂದ ಕಾಡುಪಾಪದ ಬಗ್ಗೆ ಇದ್ದ ಭಯ ಮತ್ತೂ ಹೆಚ್ಚಿತು.

ಇಪ್ಪತ್ತು ವರ್ಷಗಳ ನಂತರ ಕಾಡುಪಾಪದ ದರ್ಶನ-

ಇಪ್ಪತ್ತು ವರ್ಷಗಳ ನಂತರ ಕಾಡುಪಾಪದ ದರ್ಶನ ಇದಾಗಿ ಇಪ್ಪತ್ತು ವರ್ಷಗಳ ನಂತರ ಕಾಡುಪಾಪದ ದರ್ಶನವಾಯಿತು. ನಾನು ಮೇಷ್ಟ್ರಾಗಿ ಗೌನಿಪಲ್ಲಿ ಶಾಲೆಯಲ್ಲಿದ್ದೆ. ಒಂದು ದಿನ ರೈತ ಮಹಿಳೆಯೊಬ್ಬಳು ಕಾಡುಪಾಪವನ್ನು ತಂದಳು. ಅದು ಗಾಯಗೊಂಡಿತ್ತು. ನನಗೆ ಮರದಿಂದ ಬಿದ್ದ ದಿನದ ನೆನಪಾಯಿತು. ಭಯವೂ ಮರುಕಳಿಸಿತು. ಅದರ ಸಹವಾಸ ಬೇಡ ಅನ್ನಿಸಿತು. ಆಕೆ ಅದರ ತಲೆಯ ಮೇಲಿನ ಚರ್ಮ ಹಿಡಿದೆತ್ತಿ, ‘ಹೀಗೆ ಹಿಡಿದರೆ ಕಚ್ಚುವುದಿಲ್ಲ’ ಎಂದು ತೋರಿಸಿ ಧೈರ್ಯ ಕೊಟ್ಟಳು. ಈ ದಿನಕ್ಕಾಗಲೇ ಗಾಯಗೊಂಡ ಇಂಥ ಪ್ರಾಣಿ, ಪಕ್ಷಿಗಳ ಆರೈಕೆಯಲ್ಲಿ ನಾನು ಪಳಗಿದ್ದೆ. ಹಾಗಾಗಿ ನಿರಾಕರಿಸದೆ ಸ್ವೀಕರಿಸಿ, ಮಕ್ಕಳಿಗೆ ಅದರ ಆರೈಕೆಯ ಮಾಹಿತಿ ಕೊಟ್ಟು, ಅಂಥವಕ್ಕೆಂದೇ ಮಾಡಿಸಿದ್ದ ದೊಡ್ಡ ಬೋನಿನಲ್ಲಿ ಬಿಟ್ಟೆ. ದಿನ ಕಳೆದು ಅದು ಗುಣಮುಖವಾಗುತ್ತಿದ್ದಂತೆ ನನ್ನಲ್ಲಿನ ಭಯವೂ ಹೋಯಿತು. ಅದಕ್ಕೆ ಕೊಂಚವಾದರೂ ಮರದಲ್ಲಿರುವ ಸ್ಪಂದನೆ ಉಂಟಾಗಲೆಂದು ಹಸಿರು ಕೊಂಬೆಗಳನ್ನು ಬೋನಿನೊಳಗೆ ಕಟ್ಟಿಸಿದೆ.

ಅದು ನಾಚುವುದನ್ನು ನೋಡಿಯೇ ಅನುಭವಿಸಬೇಕು

ಅದು ನಾಚುವುದನ್ನು ನೋಡಿಯೇ ಅನುಭವಿಸಬೇಕು ಹಸಿರು ಕೊಂಬೆಗಳನ್ನು ವಾರದಲ್ಲೆರಡು ಬಾರಿ ಬದಲಿಸುತ್ತಿದ್ದೆ. ಸೀಬೆ, ದ್ರಾಕ್ಷಿ, ಬಾಳೆ, ಹಲಸಿನ ತೊಳೆ, ಹಸಿರು ತರಕಾರಿ ಅದಕ್ಕೆ ಆಹಾರವಾಗಿ ಕೊಡುತ್ತಿದ್ದೆವು. ಅದಕ್ಕೆ ನಮ್ಮೊಂದಿಗೆ ಹೊಂದಿಕೊಳ್ಳಲು ಅದರ ಸಹಜ ಸ್ವಭಾವವಾದ ನಾಚಿಕೆ ಮತ್ತು ಭಯದಿಂದ ಸಾಧ್ಯವಾಗಿರಲಿಲ್ಲ. ಅದು ನಾಚುವುದನ್ನು ನೋಡಿಯೇ ಅನುಭವಿಸಬೇಕು.

ಅಂಥ ಮೂರು ಕಾಡುಪಾಪದ ಮರಿಗಳು ನಮ್ಮ ಮಡಿಲಿಗೆ ಬಂದವು ಗಂಡನ್ನು ತೋರಿಸುವಾಗ ಹತ್ತು ಜನ ಕೂಡಿ, ‘ಏನಮ್ಮ ಗಂಡನ್ನು ಸರಿಯಾಗಿ ನೋಡಿ, ಒಪ್ಪಿಗೆಯಾಯಿತೆ ತಿಳಿಸು’ ಎಂದಾಗ ನಾಚುವ ಹೆಣ್ಣಿನಂತೆ ಇರುತ್ತಿತ್ತು. ಅದು ಎಲೆಗಳ ಮರೆಯಲ್ಲಿ ಮದುಡಿಕೊಳ್ಳುತ್ತ, ದೊಡ್ಡ ಮರದಲ್ಲಿ ಕ್ಷೇಮದಿಂದ ಅವಿತಿರುವಂತೆ ಭಾವಿಸುತ್ತಿತ್ತು. ಇನ್ನು ಅದರ ಉಳಿವಿಗೆ ಭಯವಿಲ್ಲ ಅನ್ನಿಸಿದಾಗ ಊರಾಚೆಗಿದ್ದ ಎಲೆ (ವೀಳ್ಯದ) ತೋಟದ ಅಗಸೆ ಮರಗಳ ಗುಂಪಿನಲ್ಲಿ ಬಿಟ್ಟು ಬಂದೆವು. ಆ ನಂತರ ಅಂಥ ಮೂರು ಕಾಡುಪಾಪದ ಮರಿಗಳು ನಮ್ಮ ಮಡಿಲಿಗೆ ಬಂದು ಆರೈಕೆ ಪಡೆದವು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

Leave a Reply

Your email address will not be published. Required fields are marked *