

ಕಾರವಾರದ ಕರೋನಾ ಸೋಂಕಿತೆಯನ್ನು
ಶಿರಸಿಯಿಂದ ಕಾರವಾರಕ್ಕೆ ಕರೆದೊಯ್ದು ತಲುಪಿಸಿದ ಮುಜಾಮಿಲ್ ನಜೀರ್ ಶೇಖ್ ಎನ್ನುವವರ ಮೇಲೆ ಪೊಲೀಸ್ ದೂರು ದಾಖಲಾಗಿದೆ. ಈ ಶೇಖ್ ಕತಾರ್ ದೇಶದಿಂದ ಹುಬ್ಬಳ್ಳಿಗೆ ಬಂದು ಅಲ್ಲಿಂದ ಶಿರಸಿಯಲ್ಲಿಓಡಾಡಿ, ನಂತರ ಕಾರವಾರಕ್ಕೆ ತೆರಳಿದ್ದರು. ಈ ಮಹಿಳೆ ಶಿರಸಿಯಲ್ಲಿ ಸುತ್ತಾಡಲು ಹಾಗೂ ಕಾರವಾರಕ್ಕೆ ತೆರಳಲು ನೆರವಾಗಿ ಈ ಮಾಹಿತಿಯನ್ನು ಸ್ಥಳೀಯ ಆಡಳಿತಕ್ಕೆ ತಿಳಿಸದ ಹಿನ್ನೆಲೆಯಲ್ಲಿ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಅತ್ಯಾಚಾರಿ ನಗರಸಭೆ ಸದಸ್ಯನ ಕಾಮಪ್ರಕರಣ-
ಶಿರಸಿಯ ನಗರಸಭೆ ಸದಸ್ಯ ಯಶವಂತ್ ಮರಾಠೆ ಅತ್ಯಾಚಾರದ ಆರೋಪದ ಮೇಲೆ ಕಳೆದ ವಾರ ಶಿರಸಿಯಲ್ಲಿ ಬಂಧನಕ್ಕೊಳಗಾಗಿದ್ದಾನೆ. ಇದೇ ವ್ಯಕ್ತಿ ಅಪ್ರಾಪ್ತ ಬಾಲಕಿಯರನ್ನು ಬಳಸಿಕೊಂಡು ಅವರ ಛಾಯಾ ಚಿತ್ರಗಳನ್ನು ಬಳಸಿ ಲಾಭಮಾಡಿಕೊಳ್ಳುತಿದ್ದ ಎನ್ನುವ ಆರೋಪ ಸಾಬೀತು ಮಾಡಲು ಈ ಮರಾಠೆಯ ಘನಂಧಾರಿ ಕೆಲಸದ ಫೋಟೋ ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಯಶವಂತ್ ಮರಾಠೆಯ ಕಾಮದಾಟಕ್ಕೆ ಸಾಕ್ಷಿ ಒದಿಸಲಾಗಿದೆ.
ವಿಪರ್ಯಾಸವೆಂದರೆ…. ಯಶವಂತ್ ಮರಾಠೆ ತನ್ನ ತಪ್ಪಿಗಾಗಿ ಕೋರ್ಟ್‍ನಿಂದ ಶಿಕ್ಷೆ ಪಡೆಯುತ್ತಾನೆ. ಆದರೆ ಈ ವ್ಯಕ್ತಿಯ ಅಪರಾಧ ಸಾಬೀತಿ ಮಾಡಲು ಹೋಗಿ ಇವನ ಪೋಟೋದೊಂದಿಗೆ ಅಪ್ರಾಪ್ತಬಾಲಕಿಯ ಫೋಟೋ ಪ್ರದರ್ಶಿಸಿದ ಆರೋಪದಡಿ ಫೋಟೋ ಅಪ್ಲೋಡ್ ಮಾಡಿದವನೂ ಶಿಕ್ಷೆಗೊಳಗಾಗುತ್ತಾನೆ. ಈ ಯಶವಂತ್ ಮರಾಠೆಯ ಬಾರಾ ಬಾನಗಡಿ ಅಮಾಯಕರಿಗೆ, ಕಾಂಗ್ರೆಸ್ ಪಕ್ಷಕ್ಕೂ ಈಗ ತಲೆನೋವಾಗಿ ಪರಿಣಮಿಸಿದೆ.
(related ) ಕಾರವಾರದ ಕೋವಿಡ್ ಸೋಕಿತೆ ಶಿರಸಿಗೂ ಬಂದಿದ್ದರು!
ಇಂದು ಉತ್ತರಕನ್ನಡ ಜಿಲ್ಲೆಯ ಕರೋನಾ ಸೋಂಕಿತರ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾದ ಕಾರವಾರದ ಕೋವಿಡ್ -19
ಸೋಕಿತ ಇಬ್ಬರಲ್ಲಿ ಒಬ್ಬರು ಮಹಾರಾಷ್ಟ್ರದಿಂದ ಬಂದವರಾಗಿದ್ದರೆ ಇನ್ನೊಬ್ಬರು ಕತಾರ್ ದೇಶದಿಂದ ಬೆಂಗಳೂರು-ಹುಬ್ಬಳ್ಳಿ ಮಾರ್ಗವಾಗಿ ಕಾರವಾರಕ್ಕೆ ಬಂದವರು. ಮಹಾರಾಷ್ಟ್ರದಿಂದ ಬಂದ ಮಹಿಳೆ ರೈಲುಪ್ರಯಾಣದಿಂದ ಕಾರವಾರಕ್ಕೆ ಬಂದವರು. ಇನ್ನೊಬ್ಬರು ಕತಾರ್ ನಿಂದ ಬೆಂಗಳೂರಿಗೆ ಬಂದು ಅಲ್ಲಿಂದ ಖಾಸಗಿ ಬಸ್ ನಲ್ಲಿ ಹುಬ್ಬಳ್ಳಿ ಅಲ್ಲಿಂದ ಶಿರಸಿ ಮಾರ್ಗವಾಗಿ ಕಾರವಾರಕ್ಕೆ ತೆರಳಿದ್ದವರು. ಈ ಇಬ್ಬರ ಗಂಟಲುದ್ರವ ಪರೀಕ್ಷೆಯ ವರದಿ ಇಂದು ಬಂದಿದ್ದು ಈ ಇಬ್ಬರಲ್ಲೂ ಕರೋನಾ ದೃಢಪಟ್ಟಿದೆ. ವಿದೇಶದಿಂದ ಬಂದ ಮಹಿಳೆ ಹುಬ್ಬಳ್ಳಿ-ಶಿರಸಿಗಳಲ್ಲೆಲ್ಲಾ ಸುತ್ತಾಡಿ ಕಾರವಾರ ಸೇರಿದ್ದು ಫಜೀತಿಗೆ ಕಾರಣವಾಗಿದೆ.
