ಸಿದ್ಧಾಪುರ ತಾಲೂಕಿನ ಇಬ್ಬರು ಯುವತಿಯರು,ಮತ್ತೊಬ್ಬ ಕಾರವಾರದ ಮಹಿಳೆ ಸೇರಿ 3 ಜನ ಕರೋನಾ ಸೋಂಕಿತರು ಇಂದು ಗುಣಮುಖರಾಗಿ ಹೊರನಡೆಯುವ ಮೂಲಕ ಉತ್ತರಕನ್ನಡ ಜಿಲ್ಲೆಯ ಒಟ್ಟೂ 85 ಜನ ಕರೋನಾ ಸೋಂಕಿತರು ಗುಣಮುಖರಾಗಿ ಅವರವರ ಮನೆ ಸೇರಿದ್ದಾರೆ.
ಸಿದ್ಧಾಪುರ ತಾಲೂಕಿನ ಒಟ್ಟೂ5 ಜನ ಕರೋನಾ ಸೋಂಕಿತರಲ್ಲಿ 3 ಜನ ಗುಣಮುಖರಾಗಿ ಉಳಿದ ಇಬ್ಬರೂ ಅಪಾಯದಿಂದ ಪಾರಾಗಿರುವ ವರದಿ ಇದೆ.
ಇಂದು ಹಳಿಯಾಳ, ದಾಂಡೇಲಿಯ ಮೂರು ಜನರಲ್ಲಿ ಕರೋನಾ ದೃಢಪಡುವ ಮೂಲಕ ಜಿಲ್ಲೆಯ ಕರೋನಾ ಸೋಂಕಿತರ ಪ್ರಮಾಣಬರೋಬ್ಬರಿ99 ಆಗಿದೆ. ಈ 99 ರಲ್ಲಿ ಇಂದಿನವರೆಗೆ ಗುಣಮುಖರಾದವರ ಸಂಖ್ಯೆ 85 ಜಿಲ್ಲೆಯ 99 ಜನ ಕರೋನಾ ಸೋಂಕಿತರಲ್ಲಿ ಬಹುತೇಕರು ಹೊರದೇಶ, ಹೊರ ರಾಜ್ಯಗಳಿಂದ ಬಂದವರು ಮತ್ತು ಅವರ ನಿಕಟ ಸಂಪರ್ಕದಲ್ಲಿದ್ದವರು ಎನ್ನುವುದು ವಿಶೇಶ.
ಈ ಸಂಚೂರಿ ಸಮೀಪದ ಕರೋನಾ ಸೋಂಕಿತರಲ್ಲಿ ಶೇ.90 ಹೊರರಾಜ್ಯ-ಹೊರದೇಶಗಳಿಂದ ಬಂದವರಾಗಿರುವುದರಿಂದ ಈ ವರೆಗೂ ಉತ್ತರ ಕನ್ನಡ ಕರೋನಾ ಮಹಾಮಾರಿಯಿಂದ ಬಚಾವಾಗಿದೆ ಎನ್ನಲಡ್ಡಿಯಿಲ್ಲ.
(one more news)
….ಹಳ್ಳಿಗಾಡಿನ ನಿವೃತ್ತ ಶಿಕ್ಷಕಿಗೆ ಪ್ರಶಂಸೆಯ ಸುರಿಮಳೆ
ನಿಸ್ವಾರ್ಥ ಸೇವೆಯಿಂದ ವಿಶ್ರಾಂತ ಜೀವನದತ್ತ ಹೆಜ್ಜೆಯಿಟ್ಟ ವನಿತಾ ಮೇಡಮ್
ಎಲ್ಲರಿಗೂ ಸಿಗದ ಅಪರೂಪದ ಹುದ್ದೆ ಶಿಕ್ಷಕ ವೃತ್ತಿ.. ಸಿಕ್ಕರೂ ಅದನ್ನ ಕೇವಲ ವೃತ್ತಿಯಾಗಿ ಸ್ವೀಕರಿಸಿದರೆ ಸಾಲದು ಬೋಧನೆಯಲ್ಲಿ ಸಂಪೂರ್ಣ ನಿವೇದನೆ, ನಿಸ್ವಾರ್ಥ ಸೇವಾ ಮನೋಭಾವ, ನಿರಂತರ ಅಧ್ಯಯನಶೀಲ ಹವ್ಯಾಸಗಳು ಈ ವೃತ್ತಿಯ ಅಗತ್ಯತೆಗಳು. ಅಂತೆಯೇ ಇಲ್ಲೊಬ್ಬ ಶಿಕ್ಷಕಿ ಈ ಎಲ್ಲಾ ಅಗತ್ಯ ಗುಣಗಳ ಜೊತೆಯಲ್ಲಿ ಶಿಕ್ಷಕ ವೃತ್ತಿಯನ್ನೇ ತನ್ನ ಜೀವನದ ಅನನ್ಯ ಭಾಗವಾಗಿ ಸ್ವೀಕರಿಸಿ ಸಹೋದ್ಯೋಗಿಗಳನ್ನು ತನ್ನ ಕುಟುಂಬದ ಸದಸ್ಯರಂತೆ ಕಾಣುತ್ತಾ, ಶಾಲಾ ಮಕ್ಕಳನ್ನು ತನ್ನ ಸ್ವಂತ ಮಕ್ಕಳೋಪಾದಿಯಲ್ಲಿ ಉಪಚರಿಸುತ್ತಾ, ಊರ ಜನರೊಂದಿಗೆ ಉತ್ತಮ ಬಾಧವ್ಯ ಹೊಂದುವ ಮೂಲಕ ಅಜಾತ ಶತ್ರುವಿನ ರೀತಿಯಲ್ಲಿ ತೀರಾ ಗ್ರಾಮೀಣ ಭಾಗದ ಶಾಲೆಯಲ್ಲಿ 21 ವರ್ಷಗಳ ಕಾಲ ಸಾರ್ಥಕ ಸೇವೆಸಲ್ಲಿಸಿದ ಶಿಕ್ಷಕಿ ಸಿದ್ದಾಪುರ ತಾಲ್ಲೂಕಿನ ಹಳ್ಳಿಬೈಲ್ ಪ್ರೌಢಶಾಲೆಯ ವನಿತಾ ಟೀಚರ್. …….visit-samajamukhi.net