Income Tax Returns 2019-20-ಆದಾಯ ತೆರಿಗೆ ರಿಟರ್ನ್ 2019-20 : ಹೊಸ ನಿಯಮಗಳ ಬಗ್ಗೆ ಎಚ್ಚರವಿರಲಿ.

Income Tax Returns 2019-20
ಹಣಕಾಸು ವರ್ಷ 2019-20 ಕೊನೆಗೊಂಡಿದೆ. ಕೊವಿಡ್ 19 ಪರಿಣಾಮವಾಗಿ ದೇಶಾದ್ಯಂತ ಜಾರಿಯಲ್ಲಿದ್ದ ಲಾಕ್ ಡೌನ್ ಹಿನ್ನೆಲೆಯಲ್ಲಿ 2019-20ನೇ ಸಾಲಿನ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಯ ಪ್ರಕ್ರಿಯೆ ತಡವಾಗಿ ಆರಂಭಗೊಂಡಿದೆ. ಈಗಾಗಲೇ ಸದರಿ ಹಣಕಾಸು ವರ್ಷದ ರಿಟರ್ನ್ ಸಲ್ಲಿಕೆಯ ಅಂತಿಮ ದಿನಾಂಕವನ್ನು ನವೆಂಬರ್ 30, 2020ರ ವರೆಗೆ ವಿಸ್ತರಿಸಲಾಗಿದೆ. ಆದಾಯ ತೆರಿಗೆ ಇಲಾಖೆ ಈಗಾಗಲೇ ರಿಟರ್ನ್ ಫಾರ್ಮ್ ಗಳನ್ನು ನೋಟಿಫೈ ಮಾಡಿದ್ದರೂ ರಿಟರ್ನ ಸಲ್ಲಿಕೆಗೆ ಇನ್ನೂ ಅನುಮತಿಸಬೇಕಿದೆ.

ಪ್ರತಿ ವರ್ಷ ತಮ್ಮ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ತೆರಿಗೆದಾರರಿಗೆ ರಿಟರ್ನ ಸಲ್ಲಿಸುವ ಪ್ರಕ್ರಿಯೆಯ ಸಾಮಾನ್ಯ ಮಾಹಿತಿ ಇದ್ದೇ ಇರುತ್ತದೆ. ಆದರೆ ಪ್ರಸಕ್ತ ಹಣಕಾಸು ವರ್ಷ ಅಂದರೆ 2019-20ಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಕೆಲವು ಮಹತ್ವದ ಬದಲಾವಣೆಯನ್ನು ಜಾರಿಗೆ ತಂದಿದೆ. ಇದಕ್ಕೆ ಸಂಬಂಧಿಸಿದಂತೆ ದಿನಾಂಕ 31-01-2020 ರಂದು ಮೊದಲ ನೋಟಿಫಿಕೇಶನ್

Notification No. 01/2020 https://www.incometaxindia.gov.in/communications/notification/notification_01_2020.pdf  ಮತ್ತು ದಿನಾಂಕ 29-05-2020 ರಂದು ಎರಡನೇ  ನೋಟಿಫಿಕೇಶನ್ Notification No. 31/2020 https://www.incometaxindia.gov.in/communications/notification/notification31_2020.pdf


ಪ್ರಕಟಿಸಿದ್ದು ಪ್ರಸ್ತಾವಿತ ಬದಲಾವಣೆಗಳನ್ನು ಸಮಗ್ರವಾಗಿ ವಿವರಿಸಿದೆ.
ಪ್ರಸಕ್ತ ಸಾಲಿನಲ್ಲಿ ಆದಾಯ ತೆರಿಗೆ ರಿಟರ್ನ ಸಲ್ಲಿಸುವ ಪ್ರತಿಯೊಬ್ಬ ತೆರಿಗೆದಾರರು ಬದಲಾದ ನಿಯಮಾವಳಿಗಳ ಬಗ್ಗೆ ತಿಳಿದುಕೊಳ್ಳುವುದು ಅಪೇಕ್ಷಣೀಯ. ಈ ಹಿನ್ನೆಲೆಯಲ್ಲಿ ಬದಲಾದ ನಿಯಮಗಳ ಬಗ್ಗೆ ಮತ್ತು ಹೊಸ ತೆರಿಗೆ ಫಾರ್ಮ್ ಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಪರಿಶೀಲನೆ ಪ್ರಕ್ರಿಯೆ

(Verification Process of ITR)


ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಪ್ರತಿಯೊಬ್ಬರಿಗೂ ರಿಟರ್ನ್ ಪರಿಶೀಲನೆ ಪ್ರಕ್ರಿಯೆಯ ಬಗ್ಗೆ ಮಾಹಿತಿ ಇರುತ್ತದೆ. ಅಂದರೆ, ನೀವು ರಿಟರ್ನ್ ಸಲ್ಲಿಸಿದ ಮೇಲೆ ನಿಮ್ಮ ರಿಟರ್ನ್ ಅನ್ನು ಪರಿಶೀಲನೆಗೆ ಒಳಪಡಿಸಲಾಗುತ್ತದೆ. ಈ ಪ್ರಕ್ರಿಯೆಯ ಭಾಗವಾಗಿ ರಿಟರ್ನ್ ಸಲ್ಲಿಸಿದ ಪ್ರತಿಯೊಬ್ಬರೂ ರಿಟರ್ನಿನ ಒಂದು ಪ್ರತಿಯನ್ನು ಸಹಿ ಮಾಡಿ Centralized Processing Centre ಕಛೇರಿಗೆ ರಿಟರ್ನ್ ಸಲ್ಲಿಸಿದ 120 ದಿನಗಳ ಒಳಗೆ ತಲುಪುವ ವ್ಯವಸ್ಥೆಯನ್ನು ಮಾಡಬೇಕಾಗುತ್ತದೆ. ಈ ಪರಿಶೀಲನೆ ಪ್ರಕ್ರಿಯೆಯನ್ನು ಆಧಾರ ಒಟಿಪಿ, ನೆಟ್ ಬ್ಯಾಂಕಿಂಗ್ ಅಥವಾ ಡಿ ಎಸ್ ಸಿ (ಡಿಜಿಟಲ್ ಸಿಗ್ನೇಚರ್) ಮೂಲಕವೂ ಮಾಡಬಹುದಾಗಿದೆ. ಒಂದೊಮ್ಮೆ ಈ ಪರಿಶೀಲನೆ ಪ್ರಕ್ರಿಯೆಯನ್ನು ಮಾಡಲು ತಪ್ಪಿದರೆ ನಿಗದಿತ 120 ದಿನಗಳ ನಂತರ ನಿಮ್ಮ ರಿಟರ್ನ್ ಅನ್ನು ಅನೂರ್ಜಿತಗೊಳಿಸಲಾಗುತ್ತದೆ. ಅಂದರೆ ನೀವು ರಿಟರ್ನ್ ಸಲ್ಲಿಸಿದ್ದರೂ ಪರಿಶೀಲನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸದ ಕಾರಣಗಳಿಂದ ರಿಟರ್ನ್ ಸಲ್ಲಿಸಲಿಲ್ಲವೆಂದೇ ಪರಿಗಣಿಸಲಾಗುತ್ತದೆ. 120 ದಿನಗಳ ನಂತರ ನೀವು ನಿಮ್ಮ ಆದಾಯ ತೆರಿಗೆ ಖಾತೆಗೆ ಲಾಗ್ ಇನ್ ಆಗಿ ಸಲ್ಲಿಸಿದ ರಿಟರ್ನ್ ಅನ್ನು ಡೌನ್ ಲೋಡ್ ಮಾಡಿದಾಗ ರಿಟರ್ನಿನಲ್ಲಿ

ರಿಟರ್ನಿನಲ್ಲಿ INVALID ಎಂದು ವಾಟರ್ ಮಾರ್ಕ್ ನಮೂದಾಗಿರುತ್ತದೆ. ಹಣಕಾಸು ವರ್ಷ 2018-19ರ ವರೆಗೆ ಇದೇ ಪ್ರಕ್ರಿಯೆ ಜಾರಿಯಲ್ಲಿ ಇರುವುದನ್ನು ಕಾಣಬಹುದು.

ಆದರೆ, ಹಣಕಾಸು ವರ್ಷ 2019-20ಕ್ಕೆ ಈ ಪ್ರಕ್ರಿಯೆಯಲ್ಲಿ ಬದಲಾವಣೆಯನ್ನು ಮಾಡಲಾಗಿದೆ. ಇಲ್ಲಿಯವರೆಗೆ ತೆರಿಗೆದಾರರು ರಿಟರ್ನ್ ಸಲ್ಲಿಸಿದ ತತ್ ಕ್ಷಣದಲ್ಲಿ ರಿಟರ್ನಿನ ಪ್ರತಿಯನ್ನು ಪಡೆಯಬಹುದಾಗಿತ್ತು ಮತ್ತು ಅಲ್ಲಿ ಘೋಷಣೆ ಮಾಡಿದ ಆದಾಯದ ವಿವರಗಳು ನಮೂದಾಗಿರುತ್ತಿತ್ತು. ಇನ್ನು ಮುಂದೆ ರಿಟರ್ನ್ ಸಲ್ಲಿಸಿದ ನಂತರ ತೆರಿಗೆದಾರರು ’INDIAN INCOME TAX RETURN VERIFICATION FORM’ ಎಂಬ ತಲೆಬರಹ ಇರುವ ಮತ್ತು “Not Verified” ಎಂಬ ವಾಟರ್ ಮಾರ್ಕ್ ಇರುವ ಸ್ವೀಕೃತಿ ದಾಖಲೆಯನ್ನು ಮಾತ್ರ ಪಡೆಯುತ್ತಾರೆ. ಈ ದಾಖಲೆಯಲ್ಲಿ ಆದಾಯದ ಯಾವುದೇ ಮಾಹಿತಿಯನ್ನೂ ನಮೂದಿಸಿರುವುದಿಲ್ಲ. ಇಲ್ಲಿ ಕೇವಲ ತೆರಿಗೆದಾರರ ಪ್ರಾಥಮಿಕ ಮಾಹಿತಿಯನ್ನು ಮಾತ್ರ ನಮೂದಿಸಲಾಗುತ್ತದೆ. ರಿಟರ್ನ್ ಸಲ್ಲಿಸಿ ಪರಿಶೀಲನೆ ಪ್ರಕ್ರಿಯೆಯನ್ನು ಪೂರ್ಣಗೊಳಿದ ನಂತರವಷ್ಟೇ ತೆರಿಗೆದಾರರು ಅಂತಿಮ ‘INDIAN INCOME TAX RETURN ACKNOWLEDGEMENT’ ಪ್ರತಿಯನ್ನು ಪಡೆಯಲು ಸಾಧ್ಯ.

ಪ್ರತಿಯೊಬ್ಬ ತೆರಿಗೆದಾರರೂ ಗಮನಿಸಬೇಕಾದ ಅಂಶವೇನೆಂದರೆ, ರಿಟರ್ನ್ ಸಲ್ಲಿಸುವ ಪ್ರಕ್ರಿಯೆಯಲ್ಲಿ ಪರಿಶೀಲನೆ (Verification) ಅತೀ ಮಹತ್ವದ್ದಾಗಿರುತ್ತದೆ. ಇನ್ನು ಮುಂದೆ ಪರಿಶಿಲನೆಯ ದಿನಾಂಕವನ್ನೇ ರಿಟರ್ನ್ ಸಲ್ಲಿಸಿದ ದಿನಾಂಕವೆಂದು ಪರಿಗಣಿಸಲಾಗುತ್ತದೆ.

ಈ ನಿಯಮ ಸರಳವೆನಿಸಿದರೂ ಪರಿಣಾಮಗಳು ಮಾತ್ರ ಸರಳವಾಗಿಲ್ಲ. ಇದನ್ನು ಒಂದು ಉದಾಹರಣೆಯ ಮೂಲಕ ನೋಡೋಣ, 2019-20ನೇ ಸಾಲಿನ ರಿಟರ್ನ್ ಸಲ್ಲಿಕೆಯ ಕೊನೆಯ ದಿನಾಂಕ 30-11-2020 ಆಗಿರುತ್ತದೆ. ಈ ನಿಗದಿತ ದಿನಾಂಕದ ನಂತರ ರಿಟರ್ನ್ ಸಲ್ಲಿಸಿದಲ್ಲಿ ದಂಡ, ಬಡ್ಡಿ ಇತ್ಯಾದಿಗಳು ಅನ್ವಯವಾಗುತ್ತದೆ. ಒಬ್ಬ ತೆರಿಗೆದಾರ 28-11-2020ಕ್ಕೆ ರಿಟರ್ನ್ ಸಲ್ಲಿಸುತ್ತಾನೆ ಎಂದಿಟ್ಟುಕೊಳ್ಳಿ ಮತ್ತು ರಿಟರ್ನ್ ಸಲ್ಲಿಸಿದ ದಾಖಲೆಯನ್ನು ಸಹಿ ಮಾಡಿ CPC ಕಛೇರಿಗೆ ಕಳುಹಿಸಿದ ಪ್ರತಿ 01-12-2020ಕ್ಕೆ ತಲುಪಿ ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಆಗ ತೆರಿಗೆದಾರನು ರಿಟರ್ನ್ ಸಲ್ಲಿಸಿದ ದಿನಾಂಕವನ್ನು 01-12-2020 ಎಂದೇ ಪರಿಗಣಿಸಲಾಗುತ್ತದೆ ಮತ್ತು ನಿಗದಿತ ದಿನಾಂಕ ನಂತರ ರಿಟರ್ನ್ ಸಲ್ಲಿಸಿದ ಕಾರಣದಿಂದ ದಂಡ, ಬಡ್ಡಿ ಇತ್ಯಾದಿಗಳನ್ನು ಭರಿಸಲು ಬಾಧ್ಯಸ್ಥನಾಗುತ್ತಾನೆ. ಸಾಮಾನ್ಯವಾಗಿ ಆಧಾರ ಒಟಿಪಿಯ ಮೂಲಕ ಸುಲಭವಾಗಿ ಮತ್ತು ತ್ವರಿತವಾಗಿ ಪರಿಶೀಲನೆಯನ್ನು ಮಾಡಲಾಗುತ್ತದೆ. ಆದರೆ ತೆರಿಗೆದಾರನ ಆಧಾರ್ ನಂಬರಿನೊಂದಿಗೆ ಅವರ ಮೊಬೈಲ್ ಸಂಖ್ಯೆ ಲಿಂಕ್ ಆಗಿರದೇ ಇದ್ದಲ್ಲಿ ಪರಿಶೀಲನೆಯನ್ನು ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಪ್ರತಿಯೊಬ್ಬ ತೆರಿಗೆದಾರರೂ ತಮ್ಮ ಆಧಾರ್ ಪ್ರತಿಯಲ್ಲಿರುವ ಯಾವುದೇ ದೋಷಗಳನ್ನು ಸರಿಪಡಿಸಿಕೊಂಡು ರಿಟರ್ನ್ ಸಲ್ಲಿಸುವುದು ಸೂಕ್ತ.

ಆದಾಯ ತೆರಿಗೆ ಫಾರ್ಮ್ ITR 1 – 7 : ಆಯ್ಕೆ ಹೇಗೆ..?

ITR 1 ರಿಂದ ITR 7ರ ವರೆಗೆ ವಿವಿಧ ನಮೂನೆಗಳು ಲಭ್ಯವಿದ್ದು ತೆರಿಗೆದಾರರ ಆದಾಯದ ಸ್ವರೂಪಕ್ಕೆ ಅನುಗುಣವಾಗಿ ಸೂಕ್ತವಾದ ಆದಾಯ ತೆರಿಗೆ ರಿಟರ್ನ್ ಫಾರ್ಮ್ (ITR) ಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಹಾಗಾದರೆ ಯಾರಿಗೆ ಯಾವ ನಮೂನೆಗಳು ಅನ್ವಯವಾಗುತ್ತವೆ. ಕೆಳಗಿನ ವಿವರಣೆಯನ್ನು ನೋಡಿ.

ಆದಾಯ ತೆರಿಗೆ ರಿಟರ್ನ್ ನಮೂನೆ 1 (ITR – 1 SAHAJ)

50 ಲಕ್ಷ ರೂಗಳಿಗಿಂತ ಕಡಿಮೆ ಆದಾಯವನ್ನು ಹೊಂದಿರುವ ಈ ಕೆಳಗಿನ ವ್ಯಕ್ತಿ/ಹಿಂದೂ ಅವಿಭಕ್ತ ಕುಟುಂಬ ಈ ನಮೂನೆಯಲ್ಲಿ ರಿಟರ್ನ್ ಸಲ್ಲಿಸಬಹುದಾಗಿದೆ.

  • ವೇತನ ಅಥವಾ ಪಿಂಚಣಿ ಆದಾಯವನ್ನು ಹೊಂದಿರುವ ತೆರಿಗೆದಾರರು
  • ಇತರೇ ಆದಾಯವನ್ನು ಹೊಂದಿರುವ ತೆರಿಗೆದಾರರು
  • ಕೇವಲ ಒಂದು ಮನೆಯ ಆಸ್ತಿಯಿಂದ ಆದಾಯವನ್ನು ಹೊಂದಿರುವ ತೆರಿಗೆದಾರರು
  • ಮೇಲಿನ ಆದಾಯದೊಂದಿದೆ ರೂ 5000/-ಕ್ಕೆ ಮೀರದ ಕೃಷಿ ಆದಾಯವನ್ನು ಹೊಂದಿರುವ ತೆರಿಗೆದಾರರು
  • ಮನೆ ಆಸ್ತಿಯಿಂದ ನಷ್ಟವನ್ನು ಘೋಷಿಸುವಂತಿದ್ದರೆ (Loss from House Property), ಉದಾ: ಗೃಹ ಸಾಲದ ಮೇಲಿನ ಬಡ್ಡಿ, ಈ ನಮೂನೆಯಲ್ಲಿ ರಿಟರ್ನ್ ಸಲ್ಲಿಸಲು ಸಾಧ್ಯವಿಲ್ಲ.

ಆದಾಯ ತೆರಿಗೆ ರಿಟರ್ನ್ ನಮೂನೆ 2 (ITR – 2)

50 ಲಕ್ಷ ರೂಗಳಿಗಿಂತ ಹೆಚ್ಚು ಆದಾಯವನ್ನು ಹೊಂದಿರುವ ಮೇಲಿನ ತೆರಿಗೆದಾರರನ್ನೂ ಒಳಗೊಂಡು ಈ ಕೆಳಗಿನ ವ್ಯಕ್ತಿ/ಹಿಂದೂ ಅವಿಭಕ್ತ ಕುಟುಂಬ ITR – 2 ನಮೂನೆಯಲ್ಲಿ ರಿಟರ್ನ್ ಸಲ್ಲಿಸಬಹುದಾಗಿದೆ.

  • ಒಂದಕ್ಕಿಂತ ಹೆಚ್ಚು ಮನೆಯ ಆಸ್ತಿಯಿಂದ ಆದಾಯವನ್ನು ಹೊಂದಿರುವ ತೆರಿಗೆದಾರರು
  • ಹೂಡಿಕೆಯ (ದೀರ್ಘಾವಧಿ/ಅಲ್ಪಾವಧಿ) ಮಾರಾಟದಿಂದ ಆದಾಯವನ್ನು ಹೊಂದಿರುವ ತೆರಿಗೆದಾರರು
  • ಜೂಜು, ಲಾಟರಿ ಅಥವಾ ರೇಸ್ ಇತ್ಯಾದಿ ಇತರೇ ಮೂಲದ ಆದಾಯವನ್ನು ಹೊಂದಿರುವ ತೆರಿಗೆದಾರರು
  • ವಿದೇಶದಲ್ಲಿರುವ ಆಸ್ತಿಯಿಂದ ಆದಾಯವನ್ನು ಹೊಂದಿರುವ ತೆರಿಗೆದಾರರು
  • ಪಾಲುದಾರ ಸಂಸ್ಥೆಯಲ್ಲಿನ ಪಾಲುದಾರರು (Partners)
  • ಮೇಲಿನ ಆದಾಯದೊಂದಿದೆ ರೂ 5000/-ಕ್ಕೂ ಹೆಚ್ಚು ಕೃಷಿ ಆದಾಯವನ್ನು ಹೊಂದಿರುವ ತೆರಿಗೆದಾರರು

ಆದಾಯ ತೆರಿಗೆ ರಿಟರ್ನ್ ನಮೂನೆ 3 (ITR – 3)

ವ್ಯವಹಾರ/ವೃತ್ತಿ ಮೂಲದ ಆದಾಯವನ್ನು ಹೊಂದಿರುವ ಮತ್ತು ನಮೂನೆ 2 ರಲ್ಲಿ ರಿಟರ್ನ್ ಸಲ್ಲಿಸಲು ಅರ್ಹರಿರುವ ವ್ಯಕ್ತಿ/ಹಿಂದೂ ಅವಿಭಕ್ತ ಕುಟುಂಬ ನಮೂನೆ 3ನ್ನು ಆಯ್ಕೆ ಮಾಡಿಕೊಳ್ಳಬೇಕು.

ನಮೂನೆ 1, 2 ಮತ್ತು 3 ರಲ್ಲಿ ಬದಲಾವಣೆಗಳು –Changes in ITR 1, 2 and 3

ಹಣಕಾಸು ವರ್ಷ 2018-19ಕ್ಕೆ ಹೋಲಿಸಿದರೆ ಈ ನಮೂನೆಗಳಲ್ಲಿ ಕೆಲವು ಪ್ರಮುಖ ಬದಲಾವಣೆಯನ್ನು ಮಾಡಲಾಗಿದೆ.

  • ಪ್ರಸಕ್ತ ಹಣಕಾಸು ವರ್ಷದಲ್ಲಿ ತೆರಿಗೆದಾರನು ಒಂದು ಕೋಟಿಗಿಂತ ಹೆಚ್ಚು ಮೊತ್ತವನ್ನು ಒಂದು ಅಥವಾ ಹೆಚ್ಚು ಬ್ಯಾಂಕ್ ಚಾಲ್ತಿ ಖಾತೆಗೆ ಜಮಾಮಾಡಿದ್ದಲ್ಲಿ ವಿವರಗಳನ್ನು ನೀಡುವುದು. (ನೋಡಿ ಕಲಂ 139(1) proviso 7)
  • ಸ್ವಂತ ಅಥವಾ ಬೇರೊಬ್ಬರ ವಿದೇಶಿ ಪ್ರಯಾಣಕ್ಕೆ ರೂ 2 ಲಕ್ಷಕ್ಕಿಂತ ಹೆಚ್ಚು ವೆಚ್ಚವನ್ನು ಮಾಡಿದ್ದರೆ ವೆಚ್ಚದ ಒಟ್ಟೂ ವಿವರಗಳನ್ನು ನೀಡುವುದು.
  • ಒಂದು ಲಕ್ಷಕ್ಕಿಂತ ಹೆಚ್ಚಿನ ವಿದ್ಯುತ್ ವೆಚ್ಚವನ್ನು ಭರಿಸಿದ್ದರೆ ವೆಚ್ಚದ ಒಟ್ಟೂ ವಿವರಗಳನ್ನು ನೀಡುವುದು.
  • ಶೆಡ್ಯೂಲ್ ಡಿ1 ರಲ್ಲಿ ದಿನಾಂಕ 01.04.2020 ರಿಂದ 30.06.2020ರ ಅವಧಿಯ ನಡುವೆ ಮಾಡಲಾದ ತೆರಿಗೆ ಉಳಿತಾಯದ ಹೂಡಿಕೆಯ ಬಗ್ಗೆ ಮಾಹಿತಿಯನ್ನು ನೀಡುವುದು.
  • ತೆರಿಗೆಯನ್ನು ಮರಳಿ ಪಡೆಯಲು ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಯ ವಿವರಗಳನ್ನು ನೀಡಲು ಅವಕಾಶ.

ಆದಾಯ ತೆರಿಗೆ ರಿಟರ್ನ್ ನಮೂನೆ 4 (ITR – 4)

  • ವ್ಯವಹಾರ/ವೃತ್ತಿ ಮೂಲದ ಆದಾಯವನ್ನು ಹೊಂದಿರುವ ತೆರಿಗೆದಾರರು ಕಲಂ 44ಎಡಿ, 44ಎಇ ಮತ್ತು 44ಎಡಿಎ ಅಡಿಯಲ್ಲಿ ಆದಾಯವನ್ನು ಘೋಷಣೆ ಮಾಡಿದ್ದಲ್ಲಿ
  • 50 ಲಕ್ಷ ರೂ ವರೆಗೆ ವೇತನ/ಪಿಂಚಣಿ ಆದಾಯವನ್ನು ಹೊಂದಿರುವವರು

ಇನ್ನುಳಿದಂತೆ ನಮೂನೆ 5 ಸಂಘ ಸಂಸ್ಥೆಗಳಿಗೆ ಮತ್ತು ನಮೂನೆ 6 ಕಂಪನಿಗಳಿಗೆ ಮತ್ತು ನಮೂನೆ 7 ಟ್ರಸ್ಟ್, ನ್ಯೂಸ್ ಎಜೆನ್ಸಿ, ಯುನಿವರ್ಸಿಟಿಗಳು ಇತ್ಯಾದಿಗಳಿಗೆ ಅನ್ವಯವಾಗುತ್ತದೆ.

ಅಡ್ಮಿನ್ : ಲಾ ಛೇಂಬರ್ ಶಿರಸಿ

+91 90083 65740

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

ಸಮಾಜಮುಖಿ ಡಾಟ್‌ ನೆಟ್‌ ಬ್ರೇಕಿಂಗ್……‌ ಅವರಗುಪ್ಪಾದ ಮಹಿಳೆ ಸೊರಬಾದಲ್ಲಿ ಆತ್ಮಹತ್ಯೆ

ಸೊರಬಾದ ವಸತಿನಿಲಯದ ಮುಖ್ಯ ಅಡುಗೆ ಸಿಬ್ಬಂದಿ ಮಹಿಳೆ ವಸತಿ ನಿಲಯದಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಸಿದ್ಧಾಪುರದ ಅವರಗುಪ್ಪಾ ಮೂಲದ ನೇತ್ರಾವತಿ ನಾಯ್ಕ ಆತ್ಮಹತ್ಯೆಗೆ...

ಹೋರಾಟಗಳ ಮೂಲಕ ಸುಧಾರಣೆ ಇಂದಿನ ಅನಿವಾರ್ಯತೆ

ಬಹುಜನ ಚಳವಳಿಗಳಿಗೆ ನಾರಾಯಣ ಗುರುಗಳು ಮತ್ತು ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಚಿಂತನೆಗಳು ಪೂರಕ ಎಂದಿರುವ ಯುವ ಚಿಂತಕ ಲೋಹಿತ್‌ ನಾಯ್ಕ ಈಗಲೂ ಸೈದ್ಧಾಂತಿಕ...

ಅಕ್ರಮ ಮದ್ಯ ಮಾರಾಟ, ಮದ್ಯ ಸೇವಿಸಿ ವಾಹನ ಚಾಲನೆ ನಿಯಂತ್ರಣಕ್ಕೆ ಭೀಮಣ್ಣ ಆದೇಶ

ಶಿರಸಿ-ಸಿದ್ಧಾಪುರಗಳಲ್ಲಿ ಸಾಮಾಜಿಕ ಪಿಡುಗಾಗಿ ಜನರ ಜನಜೀವನಕ್ಕೆ ತೊಂದರೆ ಕೊಡುತ್ತಿರುವ ಅಕ್ರಮ ಮದ್ಯ ಮತ್ತು ಮದ್ಯ ಸೇವಿಸಿ ವಾಹನ ಚಲಾಯಿಸುವ ಬಗ್ಗೆ ಸ್ಥಳೀಯ ಶಾಸಕ ಭೀಮಣ್ಣ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *