- ಈ ಕಾಯಿದೆ ತಿದ್ದುಪಡಿಯಿಂದ ರೈತರ ಅಸ್ಥಿತ್ವವೇ ಅಲುಗಾಡುತ್ತಿದೆ. ಸ್ಥಾನಿಕ ಸಂಘ ಸಂಸ್ಥೆಗಳು, ಸಹಕಾರಿ ಸಂಸ್ಥೆಗಳ ಸದಸ್ಯರು, ಆತ್ಮಸಾಕ್ಷಿಯಿದ್ದರೆ ಬಿ.ಜೆ.ಪಿ. ಕಾರ್ಯಕರ್ತರು, ಸಾಮಾಜಿಕ ಪ್ರಜ್ಞೆಯ ಜನಸಾಮಾನ್ಯರು ಎಲ್ಲರೂ ಸರ್ಕಾರದ ಈ ಕ್ರಮದ ವಿರುದ್ಧ ಸಂಘಟಿತ ಹೋರಾಟ ಮಾಡಬೇಕು.
- ಊಳುವವನೇ ಒಡೆಯನಿಂದ ಉಳ್ಳವನೇ ಒಡೆಯನಾಗುವ ಈ ಕಾಯಿದೆ ತಿದ್ದುಪಡಿಯಿಂದ ರೈತರ ತೆರಿಗೆ ರಿಯಾಯತಿ ತಪ್ಪಲಿದೆ.
*ಶ್ರೀಮಂತರನ್ನೇ ಶ್ರೀಮಂತರನ್ನಾಗಿ ಮಾಡುವ ಕಾರ್ಪೋರೇಟ್ ಹಿತದ ಈ ತಿದ್ದುಪಡಿಯಿಂದ ಸಾಮಾಜಿ ಅಸಮಾನತೆ ಹೆಚ್ಚಿ ನಕ್ಸಲಿಸಂ, ಬಂಡಾಯ, ಸಾಮಾಜಿಕ ಅಶಾಂತಿ ಉಂಟುಮಾಡುವ ಸಾಮಾಜಿಕ ಅವ್ಯವಸ್ಥೆ ತಲೆದೋರಲಿದೆ.
* ಯಾವ ವ್ಯಕ್ತಿಯ ಆರಾಧನೆಯೂ ಒಳ್ಳೆಯದಲ್ಲ, ರೈತರು, ನಾಡಿನ ಹಿತ ಬಲಿಕೊಟ್ಟು ರಾಜ್ಯಸರ್ಕಾರ ಯಾರ ಹಿತ ಕಾಪಾಡುತ್ತಿದೆ.? ಬಂಡವಾಳಶಾಹಿಗಳು, ಶ್ರೀಮಂತರ ಹಿತ ಕಾಯುವ ರೈತರನ್ನು ಪರದೇಶಿಗಳನ್ನಾಗಿಸುವ ಈ ತಿದ್ದುಪಡಿ ವಿರುದ್ಧ ಸಂಘಟಿತ ಹೋರಾಟವೊಂದೇ ಅನಿವಾರ್ಯ
ಬಲಪಂಥೀಯ ಪಕ್ಷಗಳು ರೈತ ವಿರೋಧಿ ಮತ್ತು ಬಂಡವಾಳಶಾಹಿ ಪರ ಎನ್ನುವುದನ್ನು ಭೂಸುಧಾರಣೆ ಕಾಯಿದೆ ತಿದ್ದುಪಡಿ ಮೂಲಕ ಮತ್ತೊಮ್ಮೆ ಸಾಬೀತು ಮಾಡಿವೆ ಎಂದು ಬಲವಾಗಿ ಆರೋಪಿಸಿರುವ ಜಾತ್ಯಾತೀತ ಜನತಾದಳ ಮುಖಂಡ ಡಾ.ಶಶಿಭೂಷಣ ಹೆಗಡೆ ಈ ಕಾಯಿದೆ ತಿದ್ದುಪಡಿ ಮಾಡುವ ಮೂಲಕ ಬಿ.ಜೆ.ಪಿ. ಸರ್ಕಾರ ಐತಿಹಾಸಿಕ ಪ್ರಮಾದ ಮಾಡುತ್ತಿದೆ ಎಂದು ಆಕ್ಷೇಪಿಸಿದ್ದಾರೆ.
ಸಿದ್ಧಾಪುರದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಈ ಆರೋಪ ಮಾಡಿದ ಅವರು ಕರ್ನಾಟಕದ ಪಂಚಾಯತ್ ರಾಜ್ ಮಸೂದೆ ಮತ್ತು ಭೂಸುಧಾರಣೆ ಕಾಯಿದೆಯನ್ನು ದೇಶದ ಚಾರಿತ್ರಿಕ ಶಾಸನಗಳು ಎನ್ನುತ್ತಾರೆ. ಇಂಥ ಮಹತ್ವದ ಮಸೂದೆಯ ಕೆಲವು ಪರಿಶ್ಚೇಧಗಳನ್ನು ತಿದ್ದುಪಡಿ ಮಾಡುವ ಮೂಲಕ ರಾಜ್ಯ ಸರ್ಕಾರ ರೈತರ ಪಾಲಿಗೆ ಮರಣಶಾಸನ ಬರೆಯುತ್ತಿದೆ ಎಂದರು.
https://www.youtube.com/channel/UCTvZUkLGbidUHKd8BHTMJbg/videos
ರೈತರ ಹಿತ ಕಾಪಾಡುವ ಶಾಸನವೊಂದನ್ನು ತಿದ್ದುಪಡಿ ಮಾಡುವಾಗ ರೈತರ ಬವಣೆ ಬಗ್ಗೆ ಚಿಂತಿಸದ ಸರ್ಕಾರದ ಆದ್ಯತೆ ಏನು ಎನ್ನುವುದು ಸ್ಫಸ್ಟವಾಗುತ್ತದೆ. ಈ ರೈತವಿರೋಧಿ ತಿದ್ದುಪಡಿ ವಿರುದ್ಧ ಪಕ್ಷ,ಪ್ರಾದೇಶಿಕತೆಗಳ ಬೇಧವಿಲ್ಲದೆ ಎಲ್ಲರೂ ಒಂದಾಗಿ ಹೋರಾಟ ಮಾಡುವ ಕಾಲ ಬಂದಿದೆ ಎಂದರು.
ಅವರ ಮಾತಿನ ಪ್ರಮುಖಾಂಶಗಳು-ಕೃಷಿಯೇತರ ಆದಾಯದ ವ್ಯಕ್ತಿ ಕೃಷಿಭೂಮಿ ಖರೀದಿಸಲು ಅವಕಾಶ ನೀಡುವ ಈ 63ಎ,79ಎ,ಬಿ, ಭೂಸುಧಾರಣೆ ಮಸೂದೆ ತಿದ್ದುಪಡಿ ಸಾಮಾಜಿಕ ಉದ್ಧೇಶದ ವಿರೋಧಿ………..
another news of the day-
ಎಸ್.ಎಸ್.ಎಲ್.ಸಿ. ಪರೀಕ್ಷೆ ಸಿದ್ಧತೆ ಸಂಪೂರ್ಣ, ಸುರಕ್ಷತೆಗಾಗಿ ಸರ್ಕಾರಕ್ಕೆ ಮನವಿ
ರಾಜ್ಯದಲ್ಲಿ ಇದೇ ತಿಂಗಳು ನಡೆಯುತ್ತಿರುವ ಎಸ್.ಎಸ್. ಎಲ್.ಸಿ. ಪರೀಕ್ಷೆಗೆ ಪೂರ್ವತಯಾರಿ ಸಿದ್ಧತೆಗಳು ಸಂಪೂರ್ಣವಾಗಿದ್ದು ವಿದ್ಯಾರ್ಥಿಗಳ ಸುರಕ್ಷತೆ,ಸುವ್ಯವಸ್ಥೆಗಳಿಗೆ ಆದ್ಯತೆ ನೀಡಲಾಗಿದೆ.ಹೊರ ಜಿಲ್ಲೆಗಳಲ್ಲಿ ವ್ಯಾಸಂಗಮಾಡುತಿದ್ದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೂ ಅವರವರ ತಾಲೂಕು ಕೇಂದ್ರ ಸಮೀಪದ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಅಗತ್ಯ, ಅನಿವಾರ್ಯತೆಗಳಿರುವಲ್ಲಿ ಸಾರಿಗೆ, ತುರ್ತು ವೈದ್ಯಕೀಯ ವ್ಯವಸ್ಥೆ ಸೇರಿದಂತೆ ಸಕಲ ವ್ಯವಸ್ಥೆಗಳ ಏರ್ಪಾಡು ಮಾಡಿರುವ ಶಿಕ್ಷಣ ಇಲಾಖೆ ಈ ತಿಂಗಳಲ್ಲಿ ಮುಖಯ ಪರೀಕ್ಷೆ ನಡೆಸಿ, ಮುಂದಿನ ತಿಂಗಳಲ್ಲಿ ಮತ್ತೆ ಪೂರಕ ಪರೀಕ್ಷೆ ನಡೆಸಲು ಉದ್ದೇಶಿಸಿದ್ದು ಅನಿವಾರ್ಯ ಕಾರಣಗಳಿಂದ ಈಗ ಪರೀಕ್ಷೆ ಬರೆಯಲಾರದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪೂರಕ ಪರೀಕ್ಷೆ ಬರೆದರೂ ಅವರನ್ನು 2019-2020 ರ ಪ್ರೆಶ್ ವಿದ್ಯಾರ್ಥಿಗಳೆಂದು ಪರಿಗಣಿಸುವುದಾಗಿ ಸರ್ಕಾರ ತಿಳಿಸಿದೆ. ಈ ಬಗ್ಗೆ ಇಂದು ಸಿದ್ಧಾಪುರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಸ್ಥಳಿಯ ತಹಸಿಲ್ಧಾರರು ವಿವರ ನೀಡಿದರು. ………. visit-samajamukhi.net