ಸಿಗಂದೂರಿಗೆ ನಾಳೆ ಜೂನ್ 17 ರಿಂದಲೇ ಒಂದು ಹೆಚ್ಚುವರಿ ಬಾರ್ಜ್ ಬಿಡುತ್ತಿರುವುದಾಗಿ ಸಾಗರ ಶಾಸಕ ಹೆಚ್.ಹಾಲಪ್ಪ ತಿಳಿಸಿದ್ದಾರೆ. ಕರೋನಾ,ಲಾಕ್ ಡೌನ್ ಹಿನ್ನೆಲೆಯಲ್ಲಿ ಕಳೆದ ಕೆಲವು ತಿಂಗಳುಗಳ ವರೆಗೆ ಸಿಗಂದೂರಿಗೆ ಬಾರ್ಜ್ ವ್ಯವಸ್ಥೆ ಇರಲಿಲ್ಲ, ಈಗಿರುವ ಏಕೈಕ ಬಾರ್ಜ್ ನಲ್ಲಿ ದೈಹಿಕ ಅಂತರ ಕಾಯ್ದುಕೊಳ್ಳುವುದು ಕಷ್ಟಸಾಧ್ಯವಾದ ಹಿನ್ನೆಲೆಯಲ್ಲಿ ಪ್ರವಾಸಿಗರು,ಸ್ಥಳಿಯರು ಮತ್ತೊಂದು ಬಾರ್ಜ್ ವ್ಯವಸ್ಥೆ ಮಾಡುವಂತೆ ಶಾಸಕ ಹಾಲಪ್ಪನವರಿಗೆ ಮನವಿ ಮಾಡಿದ್ದರು.
ಈ ಮನವಿ ಹಿನ್ನೆಲೆಯಲ್ಲಿ ಕಾರವಾರದ ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆ ಅಧಿಕಾರಿ ಕ್ಯಾ.ಸ್ವಾಮಿಯವರೊಂದಿಗೆ ಮಾತನಾಡಿ ನಾಳೆಯಿಂದಲೇ ಹೆಚ್ಚುವರಿ ಬಾರ್ಜ್ ಗೆ ವ್ಯವಸ್ಥೆ ಮಾಡಿದ್ದಾರೆ. ಈ ಬಗ್ಗೆ ಸ್ವತ: ಹಾಲಪ್ಪ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಗಿರೀಶ್,ಸುರೇಂದ್ರ ದಫೇದಾರ್ ಸೇರಿದ ಕೆಲವರು ಹಾಲಪ್ಪನವರ ಪ್ರಯತ್ನದಿಂದ ರಾಜ್ಯದ ಪ್ರವಾಸಿಗರು ಸಿಗಂದೂರು ಭಕ್ತರಿಗೆ ಅನುಕೂಲವಾಗಿದೆ ಎಂದು ಹಾಲಪ್ಪನವರ ಪ್ರಯತ್ನಕ್ಕೆ ಕೃತಜ್ಞತೆ ತಿಳಿಸಿದ್ದಾರೆ.