

ಚಿರಂಜೀವಿ ಅವರಿಗೂ ನಮ್ಮಗಳಿಗೂ ಯಾವುದೇ ರೀತಿಯ ಸಂಬಂಧವಿಲ್ಲ.. ಅವರ ಸಿನಿಮಾಗಳನ್ನು ಕಡ್ಡಾಯವಾಗಿ ಥಿಯೇಟರ್ ನಲ್ಲಿಯೇ ನೋಡುತ್ತಿದ್ದೆವು ಎನ್ನುವುದು ಖಂಡಿತ ಸತ್ಯವಲ್ಲ.. ಆದರೆ ಅದ್ಯಾಕೋ ಅತಿ ಹೆಚ್ಚು ಕಾಡಿದ ಸಂಬಂಧವಿಲ್ಲದ ಸಾವು ಎಂದರೆ ಅದು ಚಿರು ಸರ್ಜಾ ಅವರದ್ದೇ.. ಚಿಕ್ಕ ವಯಸ್ಸಿಗೆ ಹೋದರು ಎಂಬ ಕಾರಣಕ್ಕೋ.. ಅಥವಾ ಒಳ್ಳೆಯ ಮನುಷ್ಯ ಇಷ್ಟು ಬೇಗ ಹೋದರೆನ್ನುವ ಕಾರಣಕ್ಕೋ.. ಅಥವಾ ಮೇಘನಾರನ್ನು ನೋಡಿಯೋ.. ಅವರು ಹೆಂಡತಿಯನ್ನು ಕುಟುಂಬವನ್ನು ಅತಿಯಾಗಿ ಪ್ರೀತಿಸುತ್ತಿದ್ದ ರೀತಿಗೋ ಕಾರಣ ಮಾತ್ರ ತಿಳಿಯದು.. ದೂರದಲ್ಲಿ ಇರುವ.. ಒಮ್ಮೆಯೂ ಚಿರು ಅವರನ್ನು ಭೇಟಿಯಾಗದ ನಮಗೇ ಅವರ ಸಾವೇಕೊ ಬಹಳಷ್ಟು ಕಾಡುತ್ತಿದೆ ಎಂದರೆ ಆ ಕುಟುಂಬದ ನೋವು.. ನಿಜಕ್ಕೂ ಯಾರಿಗೂ ಬೇಡಪ್ಪಾ ದೇವರೆ..

ಅತ್ತ ಅಣ್ಣನನ್ನು ನೆನೆದು ಕೊರಗಿ ಊಟ ಬಿಟ್ಟಿರುವ ತಮ್ಮ.. ಇತ್ತ ಹುಟ್ಟುವ ಕಂದನನ್ನು ತನ್ನನ್ನು ಯಾಕೆ ಬಿಟ್ಟು ಹೋದಿರೆಂಬ ಪ್ರಶ್ನೆಯನ್ನು ದೇವರ ಮುಂದಿಟ್ಟಿರುವ ಮೇಘನಾ.. ಭಗವಂತ ಬಂದರೂ ಸರಿಪಡಿಸಲು ಸಾಧ್ಯವೇ ಆಗದ ಭಗವಂತನೇ ಮಾಡಿರುವ ತಪ್ಪಿದು..

ಇನ್ನು ಅಣ್ಣ ಹೋದ 5 ದಿನಗಳ ಬಳಿಕ ಧೃವ ಸಾಮಾಜಿಕ ಜಾಲತಾಣದಲ್ಲಿ ಅಣ್ಣನ ಬಗ್ಗೆ ಪೋಸ್ಟ್ ಹಾಕಿಕೊಂಡಿದ್ದರು.. ಅತ್ತ ಅಣ್ಣನ ಸಮಾಧಿ ಮಳೆಯಲ್ಲಿ ನೆನೆಯುತ್ತಿದೆ ಎಂಬ ಕಾರಣಕ್ಕೆ ತಾತ್ಕಾಲಿಕವಾಗಿ ಮರ ಹಾಗೂ ತಾರ್ಪಲ್ ಬಳಸಿ ಮಂಟಪ ನಿರ್ಮಿಸಲಾಗಿದೆ..
ಇದೀಗ ವಾರದ ಬಳಿಕ ಮೇಘನಾ ಅವರು ಚಿರಂಜೀವಿ ಅವರ ಡ್ರೈವರ್ ಬಳಿ ಮಾತನಾಡಿದ್ದಾರೆ.. ಹೌದು ಚಿರು ಅವರ ಬಳಿ ಬಹಳಷ್ಟು ವರ್ಷಗಳಿಂದ ಕೆಲಸ ಮಾಡುತ್ತಿರುವ ಡ್ರೈವರ್ ಬಳಿ ಮೇಘನಾ ಅವರು ಕಣ್ಣೀರಿಟ್ಟು ಮಾತನಾಡಿದ್ದಾರೆ.. ಹೌದು “ಅವರಿಲ್ಲ ಅಂತ ನೀನು ಕೂಡ ನಮ್ಮನ್ನ ಬಿಟ್ಟು ಹೋಗ್ಬಿಡ್ತೀಯಾ ಅಲ್ವಾ.. ಕೆಲಸ ಬಿಟ್ಟು ಬಿಡ್ತೀಯಾ ಅಲ್ವಾ ಎಂದು ಕಣ್ಣೀರಿಡುತ್ತಾ ಕೇಳಿದರಂತೆ..”
ಅದಕ್ಕೆ “ಇಲ್ಲಾ ಅಕ್ಕಾ.. ಅಣ್ಣನ ಜೊತೆ ಹೇಗೆ ಇದ್ದನೋ ಅದೇ ರೀತಿ ಇನ್ನು ಮುಂದೆಯೂ ಇಲ್ಲೆ ಇರ್ತೀನಿ.. ನಾನೆಲ್ಲಿಗೆ ಹೋಗ್ಲಿ? ನಾನ್ ಎಲ್ಲಾದರೂ ಹೋದರೆ ನನ್ನನ್ನ ಯಾರ್ ನೋಡ್ಕೋತಾರೆ.. ನಾನು ಎಲ್ಲೂ ಹೋಗಲ್ಲ.. ಇಲ್ಲೇ ಇರ್ತೀನಿ” ಎಂದು ಡ್ರೈವರ್ ಕೂಡ ಕಣ್ಣೀರಿಟ್ಟರಂತೆ..

ಈ ಮುನ್ನವೂ ಕೂಡ ಡ್ರೈವರ್ ರಜೆ ಕೇಳಿದರೆ.. ನಿನಗ್ಯಾಕೋ ರಜ? ನಾನೇನು ಊಟ ಕೊಡಲ್ವಾ? ನಿನ್ನ ಚನಾಗ್ ನೋಡ್ಕೋತಿಲ್ವಾ ಅಂತ ಚಿರು ಕೇಳುತ್ತಿದ್ದರಂತೆ.. ಅಷ್ಟೇ ಅಲ್ಲದೆ ಹೊರಗೆ ಹೋದಾಗ ಚಿರು ಅವರು ಒಂದು ಬಿರಿಯಾನಿ ತಿಂದರೆ, ನನಗೆ ಎರಡು ಬಿರಿಯಾನಿ ಕೊಡಿಸಿ ಹೊಟ್ಟೆ ತುಂಬಾ ತಿನ್ನು ಎನ್ನುತ್ತಿದ್ದರು.. ನಿಜಕ್ಕೂ ಒಳ್ಳೆಯ ಮನುಷ್ಯ ಅವರಿಗೆ ಹೀಗಾಗಬಾರದಿತ್ತು ಎಂದು ಡ್ರೈವರ್ ಕಣ್ಣೀರಿಟ್ಟರು.. ಡ್ರೈವರ್ ಅನ್ನೇ ಅಷ್ಟು ಪ್ರೀತಿಯಿಂದ ನೋಡಿಕೊಂಡಿರುವ ಚಿರು ಇನ್ನು ಪತ್ನಿಯನ್ನು ತನ್ನ ಕುಟುಂಬವನ್ನು ಅದೆಷ್ಟು ಪ್ರೀತಿಸಿರಬೇಕು.. ಮತ್ತೆ ಮಗುವಾಗಿ ಬಂದು ಮೇಘನಾರಿಗೆ ಅದೇ ಪ್ರೀತಿ ನೀಡಿ ಚಿರು..cor- by Team Star News .in
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
