

ಕರಾವಳಿ, ಮಲೆನಾಡಿನಲ್ಲಿ ಪ್ರಾರಂಭವಾಗಿರುವ ಮಳೆ ಅನೇಕ ತೊಂದರೆಗಳಿಗೆ ಕಾರಣವಾಗಿದೆ. ಶಿರಸಿಯ ಯಲ್ಲಾಪುರ ರಸ್ತೆಯ ಆಶಾಪ್ರಭು ಆಸ್ಫತ್ರೆ ಎದುರು ಪ್ರತಿವರ್ಷದಂತೆ ಈ ವರ್ಷಕೂಡಾ ಮಳೆ ನೀರು ತುಂಬಿ ತೊಂದರೆಯಾಗಿದೆ.
ಶಿರಸಿ ಶಾಸಕರು ಮತ್ತು ಉತ್ತರ ಕನ್ನಡ ಜಿಲ್ಲಾ ಸಂಸದರು ಇದೇ ಮಾರ್ಗದಲ್ಲಿ ಪ್ರತಿದಿನ ಸಂಚರಿಸಿದರೂ ಈ ಸಮಸ್ಯೆಯ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಯಾಕೆಂದರೆ ಉತ್ತರ ಕನ್ನಡ ಜಿಲ್ಲೆಯ ಜನರು ಜಾತಿ-ಧರ್ಮದ ಕಾರಣಕ್ಕೆ ಮತದಾನ ನೀಡುತ್ತಾರೆಯೆ ವಿನ: ಅಭಿವೃದ್ಧಿಗಲ್ಲ ಎನ್ನುವುದನ್ನು ಈ ಎಂಎಲ್ಲೆ, ಎಂ.ಪಿ.ಗಳು ಅರಿತಿದ್ದಾರೆ ಎಂದು ಆ ಭಾಗದ ಜನರಿಗೆ, ಜನಪ್ರತಿನಿಧಿಗಳಿಗೆ ಸ್ಥಳಿಯರು ವಿರೋಧಿಸಿದ್ದಾರೆ.
ಸಾಯಿನಗರ-
ಸಿದ್ಧಾಪುರದ ಹೊಸ ಬಡಾವಣೆ ಸಾಯಿನಗರದ ರಸ್ತೆಗಳು ಕೆಸರು ತುಂಬಿದ ಹೊಂಡಗಳಾಗಿದ್ದು ಇದರಿಂದ ಸ್ಥಳಿಯರು ಇತರರಿಗಾಗುತ್ತಿರುವ ತೊಂದರೆ ಬಗ್ಗೆ ಸ್ಥಳಿಯ,ಜನಪ್ರತಿನಿಧಿಗಳು, ಶಾಸಕರು, ಸಂಸದರು ಕೇಳುತ್ತಿಲ್ಲ ಎಂದು ಇಲ್ಲಿಯ ನಿವಾಸಿಗಳು ದೂರಿ ಶಾಪಹಾಕುತಿದ್ದಾರೆ.
ಅಕಾಲಿಕ ಸಾವು-
ಸಿದ್ಧಾಪುರದ ಹಸ್ವಂತೆಯ ಉಪನ್ಯಾಸಕ ಎಲ್.ಎಂ. ನಾಯ್ಕ ಅಕಾಲಿಕ ನಿಧನಕ್ಕೆ ಸಾಗರ ಮತ್ತು ಸಿದ್ಧಾಪುರದ ಜನತೆ ಮರುಗಿದ್ದಾರೆ. ಎಲ್.ಎಂ.ಎನ್. ಮೊದಲು ಸಿದ್ಧಾಪುರದಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿ ನಂತರ ಸಾಗರ ತಾಳಗುಪ್ಪಾದ ನಳಂದ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸುತಿದ್ದರು. ಸಿದ್ಧಾಪುರ ಎಂ.ಜಿ.ಸಿ ಕಾಲೇಜಿನಲ್ಲಿ ಕಲಿತು, ಅಲ್ಲಿಯೇ ಉಪನ್ಯಾಸಕರಾಗಿ ಅನೇಕರ ಸ್ನೇಹ-ಸಂಪರ್ಕ, ಸಂಬಂಧ ಹೊಂದಿದ್ದ ಅವರು ಸಾಗರದ ರಾಜಕಾರಣಿ ಭೀಮನೇರಿ ಶಿವಪ್ಪನವರ ಅಳಿಯನಾಗಿದ್ದರು.
ಹುಟ್ಟೂರು ಸಿದ್ಧಾಪುರ, ಮಾವನ ಊರು ಸಾಗರ, ಕೆಲಸದ ಸ್ಥಳ ತಾಳಗುಪ್ಪಗಳಲ್ಲಿ ಜನಪ್ರೀಯರಾಗಿದ್ದ ನಾಯ್ಕರ 51 ನೇ ವರ್ಷದ ಅಕಾಲಿಕ ಸಾವಿಗೆ ಅವರ ಶಿಷ್ಯವೃಂದ,ಸ್ನೇಹಿತ ವಲಯ ಮರುಕ ಪಟ್ಟಿದೆ. ಸಮಾಜಮುಖಿ ಹಿತೈಶಿ ಸ್ನೇಹಿತ ಬಳಗದ ಸದಸ್ಯರಂತಿದ್ದ ಇವರ ಸಾವಿಗೆ ಅವರ ಸಹೋದ್ಯೋಗಿಗಳಾದ ರತ್ನಾಕರ ನಾಯ್ಕ, ಎನ್.ಟಿ.ನಾಯ್ಕ, ಖಾಸಾ ಸ್ನೇಹಿತರಾಗಿದ್ದ ಡಿ.ಎಂ. ನಾಯ್ಕ ಹಸ್ವಂತೆ, ಮಮತಾ ಮತ್ತು ಶ್ಯಾಮಸುಂದರ್ ಜಿ.ಎಲ್..ಜಿಪಂ. ಸದಸ್ಯೆ ಮತ್ತು ಅವರ ಪತಿ ಸುಮಂಗಲಾ ಮತ್ತು ವಸಂತ ನಾಯ್ಕ ಮಳಲವಳ್ಳಿ, ಸ್ವಾಮಿಪಿ.,ವೀರಭದ್ರ ಮತ್ತು ಗೋಪಾಲ ನಾಯ್ಕ, ಡಾ. ನಾಗೇಂದ್ರಪ್ಪ, ಕೃಷ್ಣಮೂರ್ತಿ ಮಂಡಗಳಲೆ, ಜಗದೀಶ್ ನಾಯ್ಕ ಹೊಸೂರು, ಎಸ್.ಕೆ.ಕೋಲಶಿರ್ಸಿ ಸೇರಿದಂತೆ ಅನೇಕರು ಅವರ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಕರೋನಾ-
ಉತ್ತರಕನ್ನಡದಲ್ಲಿ ಇಂದು 6 ಜನರಲ್ಲಿ ಕರೋನಾ ದೃಢಪಟ್ಟಿದ್ದು ಯಲ್ಲಾಪುರದ ಮೂವರು, ಹೊನ್ನಾವರ, ದಾಂಡೇಲಿ, ಭಟ್ಕಳಗಳ ತಲಾಒಬ್ಬೊಬ್ಬರು ಸೇರಿದ್ದಾರೆ. ಇವರೆಲ್ಲರೂ ಹೊರರಾಜ್ಯದಿಂದ ಬಂದವರು ಮತ್ತು ಅಂಥವರೊಂದಿಗೆ ನಿಕಟ ಸಂಪರ್ಕ ಹೊಂದಿದವರು ಎನ್ನಲಾಗಿದೆ.



