ಇದು ರಾಜ್ಯ ಸರ್ಕಾರದ ದೊಡ್ಡ ಹಗರಣವೊಂದರ ಪೂರ್ವ ಪೀಟಿಕೆ- ವಿಧಾನಸಭಾ ಅಧ್ಯಕ್ಷರ ಬ್ರಷ್ಟರಾಜಕಾರಣ: ಎಲ್ಲಡೆ ತಕರಾರು! ಛೀ… ಥೂ… ಗೌರವ.


ರಾಜ್ಯ ವಿಧಾನಸಭೆ ಅಧ್ಯಕ್ಷ ಮತ್ತು ಶಿರಸಿ-ಸಿದ್ಧಾಪುರ ಕ್ಷೇತ್ರದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಕ್ಷುಲ್ಲಕ ರಾಜಕಾರಣ ಮತ್ತು ಬೃಷ್ಟಾಚಾರದ ಪೋಷಣೆಯಲ್ಲಿ ತೊಡಗಿದ್ದಾರಾ ಎನ್ನುವ ಪ್ರಶ್ನೆ ರಾಜ್ಯಮಟ್ಟದಲ್ಲಿ ಧುತ್ತನೆ ಎದ್ದಿದ್ದು ಅದಕ್ಕೆ ಅವರ ಕ್ಷೇತ್ರ ಮತ್ತು ಜಿಲ್ಲೆಯಲ್ಲಾಗಿರುವ ಅಪರಾತಪರಾಗಳು ಸಾಕ್ಷಿ ಒದಗಿಸುವಂತಿವೆ.

ಕರೋನಾ ಲಾಕ್ ಔಟ್ ಹಿನ್ನೆಲೆ, ವಲಸೆ ಕಾರ್ಮಿಕರ ನೆಪದಲ್ಲಿ ಉತ್ತರಕನ್ನಡ ಜಿಲ್ಲೆಯಲ್ಲಿ ಅನೇಕ ಅವ್ಯವಹಾರಗಳು ನಡೆದಿವೆ. ಈ ಅವ್ಯವಹಾರ, ಅಕ್ರಮಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ರ ನೇರ ಕೈವಾಡವಿದ್ದರೆ,ಸಭ್ಯತೆ,ಸರಳತೆಗಳ ನಾಟಕದ ವಿಶ್ವೇಶ್ವರ ಹೆಗಡೆ ಕಾಗೇರಿ ಕೂಡಾ ಈ ಅವ್ಯವಹಾರದಲ್ಲಿ ಪಾಲುದಾರರಾಗಿರುವುದು ಈಗ ಚರ್ಚೆಯ ವಿಷಯವಾಗಿದೆ.

ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಕಾರ್ಮಿಕ ಕಲ್ಯಾಣ ಇಲಾಖೆಯ ಹಣದಲ್ಲಿ ತಮ್ಮ ಕ್ಷೇತ್ರದಲ್ಲಿ 5 ಸಾವಿರ ಆಹಾರ ಕಿಟ್ ವಿತರಿಸಿದ್ದು ಸುದ್ದಿಯಾಗಿತ್ತು. ಈ ಕಿಟ್ ಅವ್ಯವಹಾರದ ವಾಸನೆ ಹಿಡಿದ ವಕೀಲ, ಜಿಲ್ಲಾ ಅರಣ್ಯ ಹಕ್ಕು ಹೋರಾಟಸಮೀತಿ ಅಧ್ಯಕ್ಷ ಎ.ರವೀಂದ್ರ ಹೆಬ್ಬಾರರ ಕಿಟ್ ಹಣದ ಧನದ ಮೂಲ ತಿಳಿಸಿ ಎಂದು ಲೆಕ್ಕ ಕೇಳಿದ್ದರು.
ಇದಕ್ಕೂ ಮೊದಲೇ ಕರ್ನಾಟಕ ರಾಷ್ಟ್ರ ಸಮೀತಿ ಅಧ್ಯಕ್ಷ ರವಿಕೃಷ್ಣ ರೆಡ್ಡಿ ರಾಜ್ಯ ವಿಧಾನಸಭೆ ಅಧ್ಯಕ್ಷರು ಆರೋಗ್ಯ ಇಲಾಖೆಯ ಪರಿಕರಗಳ ಖರೀದಿಯ ಹಗರಣದ ತನಿಖೆಗೆ ತಡೆಯಾಜ್ಞೆ ನೀಡುವ ಮೂಲಕ ಬೃಷ್ಟಾಚಾರಕ್ಕೆ ಬೆಂಬಲಿಸಿದ್ದಾರೆ. ಈ ವಿಚಾರದಲ್ಲಿ ವಿಶ್ವೇಶ್ವರ ಹೆಗಡೆ ಪ್ರಾಮಾಣಿಕರಾಗಿದ್ದರೆ ಅವರ ಊರ ಮಾರಿಕಾಂಬಾ ದೇವಿಯ ಎದುರು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದ್ದರು.

ಈ ಎರಡೂ ಪ್ರಕರಣಗಳೂ ಬಿಡಿಬಿಡಿ ಸನ್ನಿವೇಶಗಳಾದರೂ ಈ ಘಟನೆಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಹೆಬ್ಬಾರ ಮತ್ತು ವಿಧಾನಸಭಾ ಅಧ್ಯಕ್ಷ ಕಾಗೇರಿ ಹೆಗಡೆಯವರ ಕೈವಾಡವಿರುವುದು ಸ್ಫಷ್ಟ.
ಹೀಗೆ ಎರಡು ಜನ ಅಧಿಕಾರಸ್ಥರು, ಹಿರಿಯ ರಾಜಕಾರಣಿಗಳಾದ ಕಾಗೇರಿ, ಹೆಬ್ಬಾರ್ ಅವ್ಯವಹಾರದ ಬಗ್ಗೆ ಈಗ ರಾಜ್ಯದಾದ್ಯಂತ ಆರೋಪಗಳ ಸುರಿಮಳೆ ಶುರುವಾಗಿದೆ. ಇದಕ್ಕೆ ಪೂರಕವಾಗಿ ಶಿರಸಿ ಕ್ಷೇತ್ರದಲ್ಲಿ ಖರೀದಿಸಿದ ಆಹಾರದ ಕಿಟ್ ಗಳು ಮತ್ತು ವಿತರಿಸಿದ ಫಲಾನುಭವಿಗಳ ಆಯ್ಕೆಯಲ್ಲಿ ಪಕ್ಷಪಾತ, ರಾಜಕಾರಣ ನಡೆದಿರುವ ಬಗ್ಗೆ ಆಕ್ಷೇಪಗಳೆದ್ದಿವೆ.
ಎರಡು-ಮೂರು ಹಂತಗಳಲ್ಲಿ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಮ್ಮ ಕ್ಷೇತ್ರದಲ್ಲಿ ವಿತರಿಸಿದ ಕಿಟ್ ಗಳನ್ನು ಬಿ.ಜೆ.ಪಿ. ಕಾರ್ಯಕರ್ತರಿಗೆ ನೀಡಿ, ಅರ್ಹರಿಗೆ ವಂಚಿಸಲಾಗಿದೆ ಎಂದು ಇಟಗಿ ಗ್ರಾ,ಪಂ ಸದಸ್ಯ ಸುರೇಂದ್ರ ಗೌಡ ಆರೋಪಿಸಿದ್ದಾರೆ.
ಹೀಗೆ ಕರೋನಾ ಕಾರಣದ ಆಹಾರ ಕಿಟ್ ಅವ್ಯವಹಾರ, ಪಕ್ಷಪಾತಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೆಬ್ಬಾರ್ ಮತ್ತು ಕಾಗೇರಿ ಹೆಗಡೆಗಳ ಹೆಸರು ಕೇಳಿ ಬಂದಿದ್ದು ಈ ಬಗ್ಗೆ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸುವ ತಯಾರಿ ಕೂಡಾ ನಡೆದಿರುವುದು ಬಹಿರಂಗವಾಗಿದೆ.
ದೇಶಪ್ರೇಮ, ರಾಷ್ಟ್ರೀಯತೆಯ ಹೆಸರು ಹೇಳುತ್ತಾ ಉತ್ತರ ಕನ್ನಡ ಜಿಲ್ಲೆಯ ಕೋಮುವಾದಿ ರಾಜಕಾರಣಿಗಳು ಮಾಡುತ್ತಿರುವ ಅನ್ಯಾಯ ,ಅಕ್ರಮ, ಅವ್ಯವಹಾರ ಬಯಲಾಗಿದ್ದು ಸಮಾಜಮುಖಿ ಈ ಅವ್ಯವಹಾರದ ಫುಲ್ಡಿಟೇಲ್ಸ್ ಮಾಹಿತಿಯನ್ನು ಇಷ್ಟರಲ್ಲೇ ಪ್ರಕಟಿಸಲಿದೆ.

ದೇಶಪ್ರೇಮ, ರಾಷ್ಟ್ರೀಯತೆ, ಹಿಂದುತ್ವದ ಹೆಸರಲ್ಲಿ ವಂಚಿಸುವುದನ್ನೇ ರಾಜಕಾರಣ ಎಂದುಕೊಂಡಿರುವ ಈ ಗೋಮುಖವ್ಯಾಘ್ರಗಳ ಕರೋನಾ ಕಿಟ್‍ಲೂಟಿ ಬಗ್ಗೆ ಸಾರ್ವಜನಿಕ ವಲಯ ಕೂಡಾ ಛೀ.. ಥೂ… ಎನ್ನತೊಡಗಿದೆ.

(burnning issue) ಭೂಸುಧಾರಣೆ ಕಾಯಿದೆ ತಿದ್ದುಪಡಿ ಯಾರ ಹಿತಕ್ಕಾಗಿ?
ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ವಿರುದ್ಧ ಹೋರಾಡಲು ಡಾ. ಶಶಿಭೂಷಣ ಹೆಗಡೆ ಕರೆ
ಬಲಪಂಥೀಯ ಪಕ್ಷಗಳು ರೈತ ವಿರೋಧಿ ಮತ್ತು ಬಂಡವಾಳಶಾಹಿ ಪರ ಎನ್ನುವುದನ್ನು ಭೂಸುಧಾರಣೆ ಕಾಯಿದೆ ತಿದ್ದುಪಡಿ ಮೂಲಕ ಮತ್ತೊಮ್ಮೆ ಸಾಬೀತು ಮಾಡಿವೆ ಎಂದು ಬಲವಾಗಿ ಆರೋಪಿಸಿರುವ ಜಾತ್ಯಾತೀತ ಜನತಾದಳ ಮುಖಂಡ ಡಾ.ಶಶಿಭೂಷಣ ಹೆಗಡೆ ಈ ಕಾಯಿದೆ ತಿದ್ದುಪಡಿ ಮಾಡುವ ಮೂಲಕ ಬಿ.ಜೆ.ಪಿ. ಸರ್ಕಾರ ಐತಿಹಾಸಿಕ ಪ್ರಮಾದ ಮಾಡುತ್ತಿದೆ ಎಂದು ಆಕ್ಷೇಪಿಸಿದ್ದಾರೆ.

ಸಿದ್ಧಾಪುರದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಈ ಆರೋಪ ಮಾಡಿದ ಅವರು ಕರ್ನಾಟಕದ ಪಂಚಾಯತ್ ರಾಜ್ ಮಸೂದೆ ಮತ್ತು ಭೂಸುಧಾರಣೆ ಕಾಯಿದೆಯನ್ನು ದೇಶದ ಚಾರಿತ್ರಿಕ ಶಾಸನಗಳು ಎನ್ನುತ್ತಾರೆ. ಇಂಥ ಮಹತ್ವದ ಮಸೂದೆಯ ಕೆಲವು ಪರಿಶ್ಚೇಧಗಳನ್ನು ತಿದ್ದುಪಡಿ ಮಾಡುವ ಮೂಲಕ ರಾಜ್ಯ ಸರ್ಕಾರ ರೈತರ ಪಾಲಿಗೆ ಮರಣಶಾಸನ ಬರೆಯುತ್ತಿದೆ ಎಂದರು. ರೈತರ ಹಿತ ಕಾಪಾಡುವ ಶಾಸನವೊಂದನ್ನು ತಿದ್ದುಪಡಿ ಮಾಡುವಾಗ ರೈತರ ಬವಣೆ ಬಗ್ಗೆ ಚಿಂತಿಸದ ಸರ್ಕಾರದ ಆದ್ಯತೆ ಏನು ಎನ್ನುವುದು ಸ್ಫಸ್ಟವಾಗುತ್ತದೆ. ಈ ರೈತವಿರೋಧಿ ತಿದ್ದುಪಡಿ ವಿರುದ್ಧ ಪಕ್ಷ,ಪ್ರಾದೇಶಿಕತೆಗಳ ಬೇಧವಿಲ್ಲದೆ ಎಲ್ಲರೂ ಒಂದಾಗಿ ಹೋರಾಟ ಮಾಡುವ ಕಾಲ ಬಂದಿದೆ ಎಂದರು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *