news today- ರಾಜ್ಯಾದ್ಯಂತ ಮಾಸ್ಕ್ ದಿನ ಆಚರಣೆ, ಭೂಸುಧಾರಣೆ ಕಾಯಿದೆ ತಿದ್ದುಪಡಿಗೆ ವಿರೋಧ

ಇಂದು ರಾಜ್ಯದಾದ್ಯಂತ ಮಾಸ್ಕ್ ದಿನ ಆಚರಿಸಲಾಗಿದ್ದು ಮುಖಗವಸು ಕಟ್ಟಿ ಸಾರ್ವಜನಿಕ ಪ್ರದೇಶದಲ್ಲಿ ಮಾಸ್ಕ್ ಬಳಕೆಯ ಉಪಯೋಗಗಳನ್ನು ತಿಳಿಸಲಾಯಿತು.

ಉತ್ತರ ಕನ್ನಡ ಜಿಲ್ಲೆಯಲ್ಲೂ ಸ್ಥಳಿಯ ಆಡಳಿತಗಳು ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಈ ಕಾರ್ಯಕ್ರಮ ನಡೆಸಿದವು. ಸಿದ್ಧಾಪುರದಲ್ಲಿ ನಗರದಲ್ಲಿ ಮರವಣಿಗೆ ನಡೆಸಿದ ಕೋವಿಡ್ ಕಾರ್ಯಕರ್ತರು ಚಂದ್ರಗುತ್ತಿ ವೃತ್ತದಿಂದ ಮುಖ್ಯರಸ್ತೆಯಲ್ಲಿ ಮೆರವಣಿಗೆ ನಡೆಸಿ ಮಾಸ್ಕ್ ಪ್ರಯೋಜನ ಮತ್ತು ಮಾಸ್ಕ್ ದಿನದ ಮಹತ್ವ ಸಾರಿದರು.

ಮನವಿ ಅರ್ಪಣೆ- ರಾಜ್ಯ ಸರ್ಕಾರದ ಎಂ.ಪಿ.ಎಂ.ಸಿ. ಕಾಯಿದೆ ತಿದ್ದುಪಡಿ ಮತ್ತು ಭೂಸುಧಾರಣೆ ಕಾಯಿದೆ ತಿದ್ದುಪಡಿ ವಿರುದ್ಧ ಜನಜಾಗೃತಿ ನಡೆಯುತಿದ್ದು ರಾಜ್ಯದ ಅನೇಕ ಕಡೆ ರೈತ ಸಂಘಟನೆಗಳು ವಿರೋಧಿಪಕ್ಷಗಳು ಈ ಕಾಯಿದೆ ತಿದ್ದುಪಡಿ ಪ್ರಸ್ತಾಪ ಹಿಂಪಡೆಯಬೇಕೆಂದು ಹೋರಾಟ ಮಾಡಿವೆ.

ಉತ್ತರಕನ್ನಡ ಜಿಲ್ಲೆಯಲ್ಲೂ ಕೆಲವೆಡೆ ಪ್ರತಿಭಟನೆ, ಮನವಿ ಅರ್ಪಣೆಗಳು ನಡೆದಿವೆ. ಇಂದು ಸಿದ್ಧಾಪುರದಲ್ಲಿ ಜನತಾದಳ ಜಾತ್ಯಾತೀತ ಪಕ್ಷದ ಜಿಲ್ಲಾ ಘಟಕದಿಂದ ರಾಜ್ಯಸರ್ಕಾರ ಕರ್ನಾಟಕ ಭೂಸುಧಾರಣೆಕಾಯಿದೆಗೆ ತರುತ್ತಿರುವ ಬದಲಾವಣೆ, ತಿದ್ದುಪಡಿ ಕ್ರಮವನ್ನು ಖಂಡಿಸಲಾಯಿತು. ಈ ಬಗ್ಗೆ ಸ್ಥಳಿಯ ತಹಸಿಲ್ಧಾರ ಮಂಜುಳಾ ಭಜಂತ್ರಿಯವರ ಮೂಲಕ ರಾಜ್ಯ ರಾಜಪಾಲರಿಗೆ ಮನವಿ ನೀಡಿದ ಮುಖಂಡರು ಈ ಕಾಯಿದೆ ತಿದ್ದುಪಡಿ ಪ್ರಸ್ತಾಪ ಕೈ ಬಿಡುವಂತೆ ಆಗ್ರಹಿಸಿದರು.

1974 ರಲ್ಲಿ ದೇವರಾಜ್ ಅರಸು ಭೂಸುಧಾರಣೆ ಕಾಯಿದೆ ಜಾರಿ ಮಾಡಿ ರಾಜ್ಯದ ಜನತೆಗೆ ಬದುಕು ಕೊಟ್ಟಿದ್ದರು, ಈಗ ಈಗಿನ ಯಡಿಯೂರಪ್ಪ ನೇತೃತ್ವದ ಬಿ.ಜೆ.ಪಿ. ಸರ್ಕಾರ ಊಳುವವನೇ ಒಡೆಯನಾಗಿದ್ದವನಿಂದ ಜಮೀನು ಕಸಿದು ಉಳ್ಳವರನ್ನು ಒಡೆಯನ್ನಾಗಿಸಹೊರಟಿದೆ. ಇದರಿಂದ ಬಡ ರೈತರಿಗೆ ತೊಂದರೆ ಕಪ್ಪು ಹಣ ಇದ್ದವರಿಗೆ ಲಾಭ ಆಗಲಿದೆ. ಜನವಿರೋಧಿಯಾದಂಥ ಅಂಶಗಳನ್ನು ಈ ಕಾನೂನಿನಲ್ಲಿ ಸೇರಿಸಿ, ರಾಜ್ಯದ ರೈತರಿಗೆ ತೊಂದರೆಮಾಡುವ ಈ ಕಾಯಿದೆ ತಿದ್ದುಪಡಿ ಆಗಬಾರದು, ಈ ಬಗ್ಗೆ ಪಕ್ಕ, ಸಂಘ, ಸಂಸ್ಥೆಗಳು, ಜನಸಾಮಾನ್ಯರೂ ಕೂಡಾ ಹೋರಾಟಕ್ಕಿಳಿಯುವ ಅನಿವಾರ್ಯತೆ ಎದುರಾಗಿದೆ.- ಬಿ.ಆರ್. ನಾಯ್ಕ, ಜೆ.ಡಿ.ಎಸ್. ಜಿಲ್ಲಾಧ್ಯಕ್ಷ.

yesardays breaking news-
ವಿಧಾನಸಭಾ ಅಧ್ಯಕ್ಷರ ಬೃಷ್ಟರಾಜಕಾರಣ: ಎಲ್ಲಡೆ ತಕರಾರು! ಛೀ… ಥೂ… ಗೌರವ.
ರಾಜ್ಯ ವಿಧಾನಸಭೆ ಅಧ್ಯಕ್ಷ ಮತ್ತು ಶಿರಸಿ-ಸಿದ್ಧಾಪುರ ಕ್ಷೇತ್ರದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಕ್ಷುಲ್ಲಕ ರಾಜಕಾರಣ ಮತ್ತು ಬೃಷ್ಟಾಚಾರದ ಪೋಷಣೆಯಲ್ಲಿ ತೊಡಗಿದ್ದಾರಾ ಎನ್ನುವ ಪ್ರಶ್ನೆ ರಾಜ್ಯಮಟ್ಟದಲ್ಲಿ ಧುತ್ತನೆ ಎದ್ದಿದ್ದು ಅದಕ್ಕೆ ಅವರ ಕ್ಷೇತ್ರ ಮತ್ತು ಜಿಲ್ಲೆಯಲ್ಲಾಗಿರುವ ಅಪರಾತಪರಾಗಳು ಸಾಕ್ಷಿ ಒದಗಿಸುವಂತಿವೆ.


ಕರೋನಾ ಲಾಕ್ ಔಟ್ ಹಿನ್ನೆಲೆ, ವಲಸೆ ಕಾರ್ಮಿಕರ ನೆಪದಲ್ಲಿ ಉತ್ತರಕನ್ನಡ ಜಿಲ್ಲೆಯಲ್ಲಿ ಅನೇಕ ಅವ್ಯವಹಾರಗಳು ನಡೆದಿವೆ. ಈ ಅವ್ಯವಹಾರ, ಅಕ್ರಮಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ರ ನೇರ ಕೈವಾಡವಿದ್ದರೆ,ಸಭ್ಯತೆ,ಸರಳತೆಗಳ ನಾಟಕದ ವಿಶ್ವೇಶ್ವರ ಹೆಗಡೆ ಕಾಗೇರಿ ಕೂಡಾ ಈ ಅವ್ಯವಹಾರದಲ್ಲಿ ಪಾಲುದಾರರಾಗಿರುವುದು ಈಗ ಚರ್ಚೆಯ ವಿಷಯವಾಗಿದೆ.
ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಕಾರ್ಮಿಕ ಕಲ್ಯಾಣ ಇಲಾಖೆಯ ಹಣದಲ್ಲಿ ತಮ್ಮ ಕ್ಷೇತ್ರದಲ್ಲಿ 5 ಸಾವಿರ ಆಹಾರ ಕಿಟ್ ವಿತರಿಸಿದ್ದು ಸುದ್ದಿಯಾಗಿತ್ತು. ಈ ಕಿಟ್ ಅವ್ಯವಹಾರದ ವಾಸನೆ ಹಿಡಿದ ವಕೀಲ, ಜಿಲ್ಲಾ ಅರಣ್ಯ ಹಕ್ಕು ಹೋರಾಟಸಮೀತಿ ಅಧ್ಯಕ್ಷ ಎ.ರವೀಂದ್ರ ಹೆಬ್ಬಾರರ ಕಿಟ್ ಹಣದ ಧನದ ಮೂಲ ತಿಳಿಸಿ ಎಂದು ಲೆಕ್ಕ ಕೇಳಿದ್ದರು.
ಇದಕ್ಕೂ ಮೊದಲೇ ಕರ್ನಾಟಕ ರಾಷ್ಟ್ರ ಸಮೀತಿ ಅಧ್ಯಕ್ಷ ರೆಡ್ಡಿ ರಾಜ್ಯ ವಿಧಾನಸಭೆ ಅಧ್ಯಕ್ಷರು ಆರೋಗ್ಯ ಇಲಾಖೆಯ ಪರಿಕರಗಳ ಖರೀದಿಯ ಹಗರಣದ ತನಿಖೆಗೆ ತಡೆಯಾಜ್ಞೆ ನೀಡುವ ಮೂಲಕ ಬ್ರಷ್ಟಾ ಚಾರಕ್ಕೆ ಬೆಂಬಲಿಸಿದ್ದಾರೆ. ಈ ವಿಚಾರದಲ್ಲಿ ವಿಶ್ವೇಶ್ವರ ಹೆಗಡೆ ಪ್ರಾಮಾಣಿಕರಾಗಿದ್ದರೆ ಅವರ ಊರ ಮಾರಿಕಾಂಬಾ ದೇವಿಯ ಎದುರು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದ್ದರು.
ಈ ಎರಡೂ ಪ್ರಕರಣಗಳೂ ಬಿಡಿಬಿಡಿ ಸನ್ನಿವೇಶಗಳಾದರೂ ಈ ಘಟನೆಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಹೆಬ್ಬಾರ ಮತ್ತು ವಿಧಾನಸಭಾ ಅಧ್ಯಕ್ಷ ಕಾಗೇರಿ ಹೆಗಡೆಯವರ ಕೈವಾಡವಿರುವುದು ಸ್ಫಷ್ಟ…………….. ಓದಿ-ವಿಧಾನಸಭಾ ಅಧ್ಯಕ್ಷರ ಬೃಷ್ಟರಾಜಕಾರಣ: ಎಲ್ಲಡೆ ತಕರಾರು! ಛೀ… ಥೂ… ಗೌರವ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *