

ಕೇಂದ್ರ ಬಿ.ಜೆ.ಪಿ.ಯ ಕೆಲವು ನಿಕಟವರ್ತಿಗಳು ಯಡಿಯೂರಪ್ಪ ನವರ ಬದಲು ತಾವು ಮುಖ್ಯಮಂತ್ರಿಯಾಗಬೇಕೆಂದು ಸಂಚು ಮಾಡುತಿದ್ದು ಅವರ ಸಂಚು ಯಶಸ್ವಿಯಾಗಲು ಯಡಿಯೂರಪ್ಪ ಪದ ಚ್ಯು ತಿಗೆ ಇಂಥ ಕಾರಣಗಳನ್ನು ಮುಂದಿಟ್ಟು ಸಂಘ ತಮ್ಮ ಸ್ವಾರ್ಥಸಾಧನೆಗೆ ಮುಂದಾಗಬಹುದಾಗಿದ್ದು ಆಗ ಇಂಥ ಬಲವಾದ ಕಾರಣಗಳು ಯಡಿಯೂರಪ್ಪ ಪದಚ್ಯುತಿಗೆ ಕಾರಣವಾಗಹುದು ಎನ್ನುವ ವಿಶ್ಲೇಷಣೆಗಳ ಆಧಾರದಲ್ಲಿ ಬೇಳೂರು ಈ ವಿಚಾರ ಮುಂದಿಟ್ಟಿರಬಹುದು ಎನ್ನಲಾಗುತ್ತಿದೆ.
ಮುಂದಿನ ಆರು ತಿಂಗಳೊಳಗಾಗಿ ಮುಖ್ಯಮಂತ್ರಿ ಯಡಿಯೂರಪ್ಪನವರ ಕುರ್ಚಿಗೆ ಕುತ್ತು ಬರಲಿದ್ದು, ಯಡಿಯೂರಪ್ಪ ಪುತ್ರ ವಿಜಯೇಂದ್ರ ಮತ್ತು ಸಂಸದೆ ಶೋಭಾ ಕರಂದ್ಲಾಜೆಯಿಂದಲೇ ಯಡಿಯೂರಪ್ಪ ಇಂಥ ಸಂಕಷ್ಟಕ್ಕೊಳಗಾಗುತ್ತಾರೆ ಎಂದು ಮಾಜಿ ಶಾಸಕ ಗೋಪಾಲಕೃಷ್ಣ ಬೀಳೂರು ಹೇಳಿದ್ದಾರೆ.
ಶಿವಮೊಗ್ಗದಲ್ಲಿ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಈ ಬಗ್ಗೆ ಭವಿಷ್ಯ ನುಡಿದ ಅವರು ಭವಿಷ್ಯ ನುಡಿಯಲು ನಾನು ಕೋಡಿಮಠದ ಸ್ವಾಮಿಯಲ್ಲ. ಕೋಡಿಮಠದ ಸ್ವಾಮಿ ಕೂಡಾ ಯಡಿಯೂರಪ್ಪನವರೊಂದಿಗೆ ಬುಕ್ಕಿಂಗ್ ಆಗಿ ಭವಿಷ್ಯ ನುಡಿಯದೇ ಇರಬಹುದು. ಆದರೆ ಯಡಿಯೂರಪ್ಪ ನೇತೃತ್ವದ ಈಗಿನ ಸರ್ಕಾರದಲ್ಲಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ಮತ್ತು ಶೋಭಾ ಕರಂದ್ಲಾಜೆಯವರ ಹಸ್ತಕ್ಷೇಪ ಮಿತಿಮೀರಿದ್ದು ಇದೇ ಕಾರಣಕ್ಕೆ ಯಡಿಯೂರಪ್ಪ ಅಧಿಕಾರ ಕಳೆದುಕೊಳ್ಳುತ್ತಾರೆ. 6 ತಿಂಗಳೊಳಗಾಗಿ ಅವರ ಕುರ್ಚಿಗೆ ಕುತ್ತು ಬರಲಿದೆ ಎಂದರು.

