ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಸೋಂಕುಮುಕ್ತರಾದ 7 ಜನ ಕೋವಿಡ್ ಪೀಡಿತರು ಸೇರಿ ಒಟ್ಟೂ 132 ಜನರಲ್ಲಿ 108 ಜನರು ಕರೋನಾ ಮುಕ್ತರಾದಂತಾಗಿದೆ.
ಭಟ್ಕಳದಿಂದ ಪ್ರಾರಂಭವಾದ ಕರೋನಾ ಪೀಡಿತರ ಪಟ್ಟಿ ಜಿಲ್ಲೆಯ ಎಲ್ಲಾ ತಾಲೂಕುಗಳೂ ಸೇರಿ ಒಟ್ಟೂ 132 ಜನರ ದೊಡ್ಡ ಲೀಸ್ಟ್ ಆಗಿತ್ತು. ಆದರೆ ಇಂದು ರೋಗಮುಕ್ತರಾದ 7 ಜನರು ಸೇರಿ ಒಟ್ಟೂ 108 ಜನರು ಈ ವರೆಗೆ ಉತ್ತರಕನ್ನಡದಲ್ಲಿ ಕರೋನಾ ದಿಂದ ಗುಣಮುಖರಾದಂತಾಗಿದೆ. 132 ರಲ್ಲಿ 25 ಜನರು ಮಾತ್ರ ಈಗ ಚಿಕಿತ್ಸೆ ಪಡೆಯುತಿದ್ದು 108 ಜನರು ರೋಗಮುಕ್ತರಾಗುವ ಮೂಲಕ ಜಿಲ್ಲೆ ಕರೋನಾ ಕ್ಕೆ ಸೆಡ್ಡು ಹೊಡೆದಂತಾಗಿದೆ.
ಕೃಷ್ಣಮೂರ್ತಿ ಹೆಗಡೆ ನಿಧನ-
ಸಿದ್ಧಾಪುರ ತಾಲೂಕಿನಲ್ಲಿ ಗ್ರಾಮ ಸಹಾಯಕರಾಗಿ ಕೆಲಸ ಮಾಡುತ್ತಾ, ಸರ್ಕಾರಿ ಪುರೋಹಿತರಂತಿದ್ದ ಕೃಷ್ಣಮೂರ್ತಿ ಹೆಗಡೆ ಇಂದು ಹೃದಯಾಘಾತದಿಂದ ಕೊನೆಯ ಉಸಿರೆಳೆದಿದ್ದಾರೆ. ಸಜ್ಜನರೂ, ಸಾತ್ವಿಕರೂ, ಶ್ರಮಜೀವಿಯೂ ಆಗಿದ್ದ ಈ ಕೆಳಹಂತದ ನೌಕರ ಕೃಷ್ಣಮೂರ್ತಿ ಸಾವಿಗೆ ಕಂದಾಯ ಇಲಾಖೆ, ಸಿದ್ಧಾಪುರದ ಜನತೆ ಮರುಗಿದ್ದಾರೆ.
ಸಿದ್ಧಾಪುರ ತಾಲೂಕಾ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಸಂಪಗೋಡ್ ಕಲ್ಮನೆಯ ಸೀಮಾ ಹೆಗಡೆ ನೇಮಕವಾಗಿದ್ದಾರೆ. ಜಿಲ್ಲಾ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಸುಜಾತಾ ಗಾಂವಕರ್ ಅಂಕೋಲಾ ಈ ನೇಮಕದ ಆದೇಶ ಮಾಡಿದ್ದಾರೆ.
ಕಾಡುಪಾಣಿಗಳ ಹಾವಳಿ ತಡೆಗೆ ಮನವಿ
ಸಿದ್ಧಾಪುರದ ಬಾಳೇಸರದ ಕೃಷಿ ವಿನಿಮಯ ಕೇಂದ್ರ ಕಾಡುಪ್ರಾಣಿಗಳ ಹಾವಳಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಸೂಚಿಸಲು ವಿಧಾನಸಭಾಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಮನವಿ ಮಾಡಿದೆ. ಕಾಡುಕೋಣ, ಕಾಡುಹಂದಿ ಹಾಗೂ ಮಂಗಗಳ ಹಾವಳಿಯಿಂದ ರೈತರಿಗೆ ತೊಂದರೆಯಾಗಿದ್ದು ಇವುಗಳ ನಿಯಂತ್ರಣ, ಸಂತಾನ ಹರಣಕ್ಕೆ ಯೋಜನೆ ರೂಪಿಸಬೇಕು. ಈ ಕಾಡುಪ್ರಾಣಿಗಳ ಹಾವಳಿ ನಿಯಂತ್ರಿಸಲು ನರೇಗಾ ಯೋಜನೆಯಲ್ಲಿ ಅವಕಾಶ ನೀಡಿ ಸಹಕರಿಸಬೇಕೆಂದು ಮನವಿ ನೀಡಿ ವಿನಂತಿಸಿದೆ.
ಸಂತಾಪ ಸಭೆ- ತಾಲೂಕಿನ ಹಸ್ವಂತೆಯ ಉಪನ್ಯಾಸಕ ಎಲ್.ಎಂ. ನಾಯ್ಕ ಅಕಾಲಿಕ ಮರಣ ಹೊಂದಿದ್ದು ಅವರ ಸಂತಾಪ ಸಭೆ ಸೋಮುವಾರ ಬೆಳಿಗ್ಗೆ 11 ಗಂಟೆಗೆ ಸಿದ್ಧಾಪುರ ಲಯನ್ಸ ಕ್ಲಬ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಹೋಮ್ ಗಾರ್ಡ್‍ರಿಂದ ಮನವಿ-
ಸಿದ್ಧಾಪುರದ ಪೊಲೀಸ್ ಸೇವೆಯಲ್ಲಿದ್ದ ಕೆಲವು ಗೃಹರಕ್ಷಕ ದಳದ ಸಿಬ್ಬಂದಿಗಳನ್ನು ಸೇವೆಯಿಂದ ತೆಗೆದಿದ್ದು ಅವರನ್ನು ಮರುನೇಮಕ ಮಾಡಿಕೊಳ್ಳು ಒತ್ತಾಯಿಸುವ ಮನವಿಯೊಂದನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ರಾಜ್ಯಮಟ್ಟದ ವಿಚಾರವಿರುವುದರಿಂದ ಈ ಬಗ್ಗೆ ಪರಿಶೀಲಿಸಿ, ಸರ್ಕಾರದ ಗಮನಕ್ಕೆ ತರುವುದಾಗಿ ಜಿಲ್ಲಾಧಿಕಾರಿ ಹರೀಶ್ ಕುಮಾರ ಕೆ. ತಿಳಿಸಿದ್ದಾರೆ.
(ನಿನ್ನೆ-ಮೊನ್ನೆ ಸುದ್ದಿ) ವಿ ಧಾನಸಭಾ ಅಧ್ಯಕ್ಷರ ಬೃಷ್ಟರಾಜಕಾರಣ: ಎಲ್ಲಡೆ ತಕರಾರು! ಛೀ… ಥೂ… ಗೌರವ.
ರಾಜ್ಯ ವಿಧಾನಸಭೆ ಅಧ್ಯಕ್ಷ ಮತ್ತು ಶಿರಸಿ-ಸಿದ್ಧಾಪುರ ಕ್ಷೇತ್ರದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಕ್ಷುಲ್ಲಕ ರಾಜಕಾರಣ ಮತ್ತು ಬ್ರಷ್ಟಾಚಾರದ ಪೋಷಣೆಯಲ್ಲಿ ತೊಡಗಿದ್ದಾರಾ ಎನ್ನುವ ಪ್ರಶ್ನೆ ರಾಜ್ಯಮಟ್ಟದಲ್ಲಿ ಧುತ್ತನೆ ಎದ್ದಿದ್ದು ಅದಕ್ಕೆ ಅವರ ಕ್ಷೇತ್ರ ಮತ್ತು ಜಿಲ್ಲೆಯಲ್ಲಾಗಿರುವ ಅಪರಾತಪರಾಗಳು ಸಾಕ್ಷಿ ಒದಗಿಸುವಂತಿವೆ.
ಕರೋನಾ ಲಾಕ್ ಔಟ್ ಹಿನ್ನೆಲೆ, ವಲಸೆ ಕಾರ್ಮಿಕರ ನೆಪದಲ್ಲಿ ಉತ್ತರಕನ್ನಡ ಜಿಲ್ಲೆಯಲ್ಲಿ ಅನೇಕ ಅವ್ಯವಹಾರಗಳು ನಡೆದಿವೆ. ಈ ಅವ್ಯವಹಾರ, ಅಕ್ರಮಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ರ ನೇರ ಕೈವಾಡವಿದ್ದರೆ,ಸಭ್ಯತೆ,ಸರಳತೆಗಳ ನಾಟಕದ ವಿಶ್ವೇಶ್ವರ ಹೆಗಡೆ ಕಾಗೇರಿ ಕೂಡಾ ಈ ಅವ್ಯವಹಾರದಲ್ಲಿ ಪಾಲುದಾರರಾಗಿರುವುದು ಈಗ ಚರ್ಚೆಯ ವಿಷಯವಾಗಿದೆ.
ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಕಾರ್ಮಿಕ ಕಲ್ಯಾಣ ಇಲಾಖೆಯ ಹಣದಲ್ಲಿ ತಮ್ಮ ಕ್ಷೇತ್ರದಲ್ಲಿ 5 ಸಾವಿರ ಆಹಾರ ಕಿಟ್ ವಿತರಿಸಿದ್ದು ಸುದ್ದಿಯಾಗಿತ್ತು. ಈ ಕಿಟ್ ಅವ್ಯವಹಾರದ ವಾಸನೆ ಹಿಡಿದ ವಕೀಲ, ಜಿಲ್ಲಾ ಅರಣ್ಯ ಹಕ್ಕು ಹೋರಾಟಸಮೀತಿ ಅಧ್ಯಕ್ಷ ಎ.ರವೀಂದ್ರ ಹೆಬ್ಬಾರರ ಕಿಟ್ ಹಣದ ಧನದ ಮೂಲ ತಿಳಿಸಿ ಎಂದು ಲೆಕ್ಕ ಕೇಳಿದ್ದರು.
ಇದಕ್ಕೂ ಮೊದಲೇ ಕರ್ನಾಟಕ ರಾಷ್ಟ್ರ ಸಮೀತಿ ಅಧ್ಯಕ್ಷ ರೆಡ್ಡಿ ರಾಜ್ಯ ವಿಧಾನಸಭೆ ಅಧ್ಯಕ್ಷರು ಆರೋಗ್ಯ ಇಲಾಖೆಯ ಪರಿಕರಗಳ ಖರೀದಿಯ ಹಗರಣದ ತನಿಖೆಗೆ ತಡೆಯಾಜ್ಞೆ ನೀಡುವ ಮೂಲಕ ಬ್ರ ಷ್ಟಾಚಾರಕ್ಕೆ ಬೆಂಬಲಿಸಿದ್ದಾರೆ. ಈ ವಿಚಾರದಲ್ಲಿ ವಿಶ್ವೇಶ್ವರ ಹೆಗಡೆ ಪ್ರಾಮಾಣಿಕರಾಗಿದ್ದರೆ ಅವರ ಊರ ಮಾರಿಕಾಂಬಾ ದೇವಿಯ ಎದುರು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದ್ದರು.
ಈ ಎರಡೂ ಪ್ರಕರಣಗಳೂ ಬಿಡಿಬಿಡಿ ಸನ್ನಿವೇಶಗಳಾದರೂ ಈ ಘಟನೆಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಹೆಬ್ಬಾರ ಮತ್ತು ವಿಧಾನಸಭಾ ಅಧ್ಯಕ್ಷ ಕಾಗೇರಿ ಹೆಗಡೆಯವರ ಕೈವಾಡವಿರುವುದು ಸ್ಫಷ್ಟ…………….. ಓದಿ-ವಿಧಾನಸಭಾ ಅಧ್ಯಕ್ಷರ ಬೃಷ್ಟರಾಜಕಾರಣ: ಎಲ್ಲಡೆ ತಕರಾರು! ಛೀ… ಥೂ… ಗೌರವ. visit-samajamukhi.net