

ಕೆಲಕಾಲದ ಮಾನಸಿಕ ಅಸ್ವಸ್ಥ ತೆಯಿಂದ ಬಳಲುತಿದ್ದರು ಎನ್ನಲಾದ ಮಹಿಳೆಯೊಬ್ಬರು ತನ್ನ ಮಗುವನ್ನೂ ಸಾಯಿಸಿ, ತಾನೂ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸಿದ್ಧಾಪುರದ ಹೊಸಪೇಟೆಯಲ್ಲಿ ನಡೆದಿದೆ. ಮೃತ ಮಹಿಳೆ ಅಶ್ವಿನಿಗೆ ಮೂರು ಜನ ಹೆಣ್ಣು ಮಕ್ಕಳಿದ್ದು ಅವರಲ್ಲಿ ಹಿರಿಯ ಎರಡು ಜನರು ಅಜ್ಜಿಯ ಮನೆಗೆ ಹೋದ ಸಂದರ್ಭದಲ್ಲಿ ಗಂಡ ಅಶೋಕ್ ಕಾಮತ್ ಪಿಗ್ಮಿ ಸಂಗ್ರಹಿಸಲು ಹೋಗಿದ್ದಾಗ ಈ ಘಟನೆ ನಡೆದಿದೆ.
ಮಾನಸಿಕ ಅಸ್ವಸ್ಥತೆಯ ಮಹಿಳೆ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಇಂಥ ಕೃತ್ಯಕ್ಕೆ ಮುಂದಾಗಿರುವ ಸಾಧ್ಯತೆ ಇದೆ ಎಂದು ಸಿದ್ಧಾಪುರ ಪಿ.ಆಯ್. ಪ್ರಕಾಶ್ ತಿಳಿಸಿದ್ದಾರೆ. 8 ವರ್ಷದ ಮಗು ಅರ್ಪಿತಾ ಕಾಮತ್ ತಾಯಿಯ ಕುಕೃತ್ಯಕ್ಕೆ ಬಲಿಯಾದ ಬಾಲಕಿಯಾಗಿದ್ದಾಳೆ.


today news-
ಸಿದ್ಧಾಪುರ ಯಲ್ಲಾಪುರ, ಜೊಯಡಾ, ಹೊನ್ನಾವರಗಳಲ್ಲಿ ಒಂದೊಂದು ಪ್ರಕರಣ
ಯಲ್ಲಾಪುರದ ಕಂಡಕ್ಟರ್ ನಿಂದ ಆತಂಕ
ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು ಒಟ್ಟೂ 5 ಜನರಲ್ಲಿ ಕೋವಿಡ್ 19 ದೃಢಪಟ್ಟಿದ್ದು ಯಲ್ಲಾಪುರದ ಇಬ್ಬರು,ಜೊಯಡಾ, ಹೊನ್ನಾವರ,ಸಿದ್ಧಾಪುರ ರ ತಲಾ ಒಬ್ಬೊಬ್ಬರಲ್ಲಿ ಕರೋನಾ ದೃಢ ಪಟ್ಟಿದೆ.
ಯಲ್ಲಾಪುರದ ಕಂಡಕ್ಟರ್ ಜೂನ್ 11 ರಂದು ಯಲ್ಲಾಪುರದಿಂದ ಬೆಂಗಳೂರು ಬಸ್ ನಲ್ಲಿ ತೆರಳಿ ನಂತರ ಜೂನ್ 13 ರಂದು ಯಲ್ಲಾಪುರಕ್ಕೆ ಮರಳಿದ್ದರು. ಈತ ತೆರಳಿದ್ದ ಬಸ್ ಸಂಖ್ಯೆ ಕೆ.ಎ.31ಎಫ್-1577 ಸಂಖ್ಯೆಯ ಬಸ್ ನಲ್ಲಿ ಪ್ರಯಾಣಿಸಿದವರು ಸಂಬಂಧಿಸಿದ ತಾಲೂಕಾ ಆಸ್ಫತ್ರೆ, ಪೊಲೀಸ್ ಠಾಣೆ ಮೂಲಕ ಪರೀಕ್ಷೆಗೆ ಒಳಪಡಬೇಕಿದೆ.
ಉಳಿದಂತೆ ನಾಲ್ಕು ಜನರು ಕಾರಂಟೈನ್ ನಲ್ಲಿ ಇದ್ದವರು ಎನ್ನಲಾಗಿದೆ.
ಯಲ್ಲಾಪುರದ ಕಂಡಕ್ಟರ್ ಜೂನ್ 14 ರಿಂದ ಕಾರಂಟೈನ್ ಆಗಿ 18 ರಂದು ಸ್ವಾಬ್ ಪರಿಕ್ಷೆಗೆ ಒಳಪಟ್ಟಿದ್ದರು. ಇವರಲ್ಲಿ ಕರೋನಾ ದೃಢವಾಗುತ್ತಲೇ ರಾಜ್ಯ ಸಾರಿಗೆ ಸಂಸ್ಥೆ ಸಿಬ್ಬಂದಿಗಳು, ಇವರು ನಾಲ್ಕುಜನರೊಂದಿಗೆ ಮಾಡಿಕೊಂಡಿದ್ದ ಬಾಡಿಗೆ ಮನೆಯ ಸಹವರ್ತಿಗಳು,ಜೊತೆಗೆ ಅಕ್ಕಪ್ಪದವರು ಎಲ್ಲರ ಮಾದರಿ ಪರೀಕ್ಷೆ ನಡೆಸಲಾಗಿದೆ.
ಕರೋನಾ ಪೀಡಿತರ ಚಿಕಿತ್ಸೆಗೆ ಸರ್ಕಾರ ಖಾಸಗಿ ಆಸ್ಪತ್ರೆಗಳಿಗೂ ಅವಕಾಶ ನೀಡಿದ್ದು, ಕನಿಷ್ಟ5 ಸಾವಿರ ದಿನದ ವೆಚ್ಚದಿಂದ 12 ಸಾವಿರದ ವರೆಗೆ ಒಬ್ಬ ರೋಗಿಗೆ ಚಿಕಿತ್ಸೆಯ ವೆಚ್ಚ ವಿಧಿಸಬಹುದು ಅದಕ್ಕಿಂತ ಹೆಚ್ಚು ಬಿಲ್ ಮಾಡುವ ಆಸ್ಫತ್ರೆಗಳ ಮೇಲೆ ಕ್ರಮ ಕೈಗೊಳ್ಳಲು ಅವಕಾಶ ನೀಡಲಾಗಿದೆ.
