

ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು ಒಟ್ಟೂ 5 ಜನರಲ್ಲಿ ಕೋವಿಡ್ 19 ದೃಢಪಟ್ಟಿದ್ದು ಯಲ್ಲಾಪುರದ ಇಬ್ಬರು,ಜೊಯಡಾ, ಹೊನ್ನಾವರ,ಸಿದ್ಧಾಪುರ ರ ತಲಾ ಒಬ್ಬೊಬ್ಬರಲ್ಲಿ ಕರೋನಾ ದೃಢ ಪಟ್ಟ ಸುದ್ದಿ ವರದಿಯಾಗಿದೆ..
ಯಲ್ಲಾಪುರದ ಕಂಡಕ್ಟರ್ ಜೂನ್ 11 ರಂದು ಯಲ್ಲಾಪುರದಿಂದ ಬೆಂಗಳೂರು ಬಸ್ ನಲ್ಲಿ ತೆರಳಿ ನಂತರ ಜೂನ್ 13 ರಂದು ಯಲ್ಲಾಪುರಕ್ಕೆ ಮರಳಿದ್ದರು. ಈತ ತೆರಳಿದ್ದ ಬಸ್ ಸಂಖ್ಯೆ ಕೆ.ಎ.31ಎಫ್-1577 ಸಂಖ್ಯೆಯ ಬಸ್ ನಲ್ಲಿ ಪ್ರಯಾಣಿಸಿದವರು ಸಂಬಂಧಿಸಿದ ತಾಲೂಕಾ ಆಸ್ಫತ್ರೆ, ಪೊಲೀಸ್ ಠಾಣೆ ಮೂಲಕ ಪರೀಕ್ಷೆಗೆ ಒಳಪಡಬೇಕಿದೆ.
ಉಳಿದಂತೆ ನಾಲ್ಕು ಜನರು ಕಾರಂಟೈನ್ ನಲ್ಲಿ ಇದ್ದವರು ಎನ್ನಲಾಗಿದೆ.
ಯಲ್ಲಾಪುರದ ಕಂಡಕ್ಟರ್ ಜೂನ್ 14 ರಿಂದ ಕಾರಂಟೈನ್ ಆಗಿ 18 ರಂದು ಸ್ವಾಬ್ ಪರಿಕ್ಷೆಗೆ ಒಳಪಟ್ಟಿದ್ದರು. ಇವರಲ್ಲಿ ಕರೋನಾ ದೃಢವಾಗುತ್ತಲೇ ರಾಜ್ಯ ಸಾರಿಗೆ ಸಂಸ್ಥೆ ಸಿಬ್ಬಂದಿಗಳು, ಇವರು ನಾಲ್ಕುಜನರೊಂದಿಗೆ ಮಾಡಿಕೊಂಡಿದ್ದ ಬಾಡಿಗೆ ಮನೆಯ ಸಹವರ್ತಿಗಳು,ಜೊತೆಗೆ ಅಕ್ಕಪ್ಪದವರು ಎಲ್ಲರ ಮಾದರಿ ಪರೀಕ್ಷೆ ನಡೆಸಲಾಗಿದೆ.
ಕರೋನಾ ಪೀಡಿತರ ಚಿಕಿತ್ಸೆಗೆ ಸರ್ಕಾರ ಖಾಸಗಿ ಆಸ್ಪತ್ರೆಗಳಿಗೂ ಅವಕಾಶ ನೀಡಿದ್ದು, ಕನಿಷ್ಟ5 ಸಾವಿರ ದಿನದ ವೆಚ್ಚದಿಂದ 12 ಸಾವಿರದ ವರೆಗೆ ಒಬ್ಬ ರೋಗಿಗೆ ಚಿಕಿತ್ಸೆಯ ವೆಚ್ಚ ವಿಧಿಸಬಹುದು ಅದಕ್ಕಿಂತ ಹೆಚ್ಚು ಬಿಲ್ ಮಾಡುವ ಆಸ್ಫತ್ರೆಗಳ ಮೇಲೆ ಕ್ರಮ ಕೈಗೊಳ್ಳಲು ಅವಕಾಶ ನೀಡಲಾಗಿದೆ.
