
ಇಂದು ಉತ್ತರಕನ್ನಡದಲ್ಲಿ ಮತ್ತೆ 6 ಜನರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದ್ದು ಭಟ್ಕಳದ ಇಬ್ಬರು, ಕುಮಟಾದ ಮೂವರು,ಹಳಿಯಾಳದ ಒಬ್ಬರು ಸೇರಿದ್ದಾರೆ. ಇವರೆಲ್ಲಾ ಹೊರರಾಜ್ಯಗಳಿಂದ ಮರಳಿದವರಾಗಿದ್ದಾರೆ.
ಹಳಿಯಾಳದಲ್ಲಿ ಇಬ್ಬರ ಕಿಡ್ನ್ಯಾಪ್?
ಬುಧವಾರ ಹಳಿಯಾಳದ ಕೃಷಿಉತ್ಪನ್ನ ಮಾರುಕಟ್ಟೆ ಅಧ್ಯಕ್ಷತೆಗೆ ಚುನಾವಣೆ ನಡೆಯುತಿದ್ದು ಈ ಕಾರಣಕ್ಕಾಗಿ ಬಿ.ಜೆ.ಪಿ. ಮತ್ತು ಕಾಂಗ್ರೆಸ್ ನ ತಲಾ ಒಬ್ಬೊಬ್ಬರು ಸದಸ್ಯರನ್ನು ಅಪಹರಿಸಿದ್ದಾರೆಂದು ಹಳಿಯಾಳದಲ್ಲಿ ಪೊಲೀಸ್ ದೂರು ದಾಖಲಾಗಿವೆ.
ಹೆಚ್ಚು ಸ್ಥಾನಗಳಿರುವ ಕಾಂಗ್ರೆಸ್ ನಿಂದ ಶ್ರೀಕಾಂತ್ ಘೊಟ್ನೇಕರ್ ಪುತ್ರ ಅಧ್ಯಕ್ಷತೆಗೆ ಪ್ರಯತ್ನ ನಡೆಸಿದ್ದಾರೆ. ಈ ಹಿಂದೆ ಕೂಡಾ ಅವರೇ ಅಧ್ಯಕ್ಷರಾಗಿದ್ದರು. ಆದರೆ ಬಿ.ಜೆ.ಪಿ. ತನ್ನ ಸದಸ್ಯರೊಂದಿಗೆ ನಾಮಕರಣವಾದ ಸದಸ್ಯರ ಬಲದಿಂದ ಎ.ಪಿ.ಎಂ.ಸಿ. ಅಧ್ಯಕ್ಷತೆಗೇರುವ ಪ್ರಯತ್ನ ಮಾಡುತ್ತಿದೆ.
ಒಂದು ಮತದಿಂದ ಪರಿಸ್ಥಿತಿ, ಲೆಕ್ಕಾಚಾರ ಬದಲಾಗುವ ಅವಕಾಶದ ಹಿನ್ನೆಲೆಯಲ್ಲಿ ಈ ಪ್ರಹಸನ ನಡೆದಿದ್ದು, ಕಾಂಗ್ರೆಸ್ ಮತ್ತು ಬಿ.ಜೆ.ಪಿ.ಗಳು ತಲಾ ಒಬ್ಬೊಬ್ಬರನ್ನು ಅಪಹರಿಸಿರುವ ಶಂಕೆಯ ಆಧಾರದಲ್ಲಿ ಪೊಲೀಸ್ ದೂರುಗಳು ದಾಖಲಾಗಿವೆ.
(ನಿನ್ನೆಯ ವರದಿ)
ಯಲ್ಲಾಪುರದ ಕಂಡಕ್ಟರ್ ನಿಂದ ಆತಂಕ
ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು ಒಟ್ಟೂ 5 ಜನರಲ್ಲಿ ಕೋವಿಡ್ 19 ದೃಢಪಟ್ಟಿದ್ದು ಯಲ್ಲಾಪುರದ ಇಬ್ಬರು,ಜೊಯಡಾ, ಹೊನ್ನಾವರ,ಸಿದ್ಧಾಪುರ ರ ತಲಾ ಒಬ್ಬೊಬ್ಬರಲ್ಲಿ ಕರೋನಾ ದೃಢ ಪಟ್ಟಿದೆ. ಯಲ್ಲಾಪುರದ ಕಂಡಕ್ಟರ್ ಜೂನ್ 11 ರಂದು ಯಲ್ಲಾಪುರದಿಂದ ಬೆಂಗಳೂರು ಬಸ್ ನಲ್ಲಿ ತೆರಳಿ ನಂತರ ಜೂನ್ 13 ರಂದು ಯಲ್ಲಾಪುರಕ್ಕೆ ಮರಳಿದ್ದರು. ಈತ ತೆರಳಿದ್ದ ಬಸ್ ಸಂಖ್ಯೆ ಕೆ.ಎ.31ಎಫ್-1577 ಸಂಖ್ಯೆಯ ಬಸ್ ನಲ್ಲಿ ಪ್ರಯಾಣಿಸಿದವರು ಸಂಬಂಧಿಸಿದ ತಾಲೂಕಾ ಆಸ್ಫತ್ರೆ, ಪೊಲೀಸ್ ಠಾಣೆ ಮೂಲಕ ಪರೀಕ್ಷೆಗೆ ಒಳಪಡಬೇಕಿದೆ. ಉಳಿದಂತೆ ನಾಲ್ಕು ಜನರು ಕಾರಂಟೈನ್ ನಲ್ಲಿ ಇದ್ದವರು ಎನ್ನಲಾಗಿದೆ.
ಯಲ್ಲಾಪುರದ ಕಂಡಕ್ಟರ್ ಜೂನ್ 14 ರಿಂದ ಕಾರಂಟೈನ್ ಆಗಿ 18 ರಂದು ಸ್ವಾಬ್ ಪರಿಕ್ಷೆಗೆ ಒಳಪಟ್ಟಿದ್ದರು. ಇವರಲ್ಲಿ ಕರೋನಾ ದೃಢವಾಗುತ್ತಲೇ ರಾಜ್ಯ ಸಾರಿಗೆ ಸಂಸ್ಥೆ ಸಿಬ್ಬಂದಿಗಳು, ಇವರು ನಾಲ್ಕುಜನರೊಂದಿಗೆ ಮಾಡಿಕೊಂಡಿದ್ದ ಬಾಡಿಗೆ ಮನೆಯ ಸಹವರ್ತಿಗಳು,ಜೊತೆಗೆ ಅಕ್ಕಪ್ಪದವರು……….. ಹೆಚ್ಚಿನ ಮಾಹಿತಿಗೆ ಸಮಾಜಮುಖಿ ನೋಡಿ @#samajamukhi.net#
