ka.sa.pa. arvind,s interview-ಅರವಿಂದರ ಹಳೆ ಸಂದರ್ಶನ

ಪ್ರಶ್ನೆ ; ಜನ್ಮ ದಿನಾಂಕಸಹಿತ ಸಂಕ್ಷಿಪ್ತ ಪರಿಚಯ,ಸಾಹಿತ್ಯಿಕ ಸಂಘಟನಾತ್ಮಕ ಸಾಧನೆ ತಿಳಿಸುತ್ತೀರಾ ?
ಉತ್ತರ: ನನ್ನ ಜನ್ಮ ದಿನಾಂಕ 06.04.1973.ಹುಟ್ಟಿದ್ದು ಹೊನ್ನಾವರ ಪಟ್ಟಣ ವ್ಯಾಪ್ತಿಯ ಶರಾವತಿ ನದಿ ತೀರದ ಕರ್ಕಿಕೋಡಿಯಲ್ಲಿ. ಹಾಲಿ ವಾಸ್ತವ್ಯ ಹಳದೀಪುರದ ಅಗ್ರಹಾರದಲ್ಲಿ. ಕಾಲೇಜು ದಿನಗಳಿಂದಲೂ ಸಾಹಿತ್ಯದಲ್ಲಿ ಒಲವು. ಮಾನವತಾವಾದದ ಪರ ಖಚಿತ ನಿಲುವು.ಕವನ,ವಿಮರ್ಶೆ ,ಜನಾಂಗಿಕ ಅಧ್ಯಯನ,ಜಾನಪದ,ಪತ್ರಿಕೋದ್ಯಮ, ಸಂಘಟನೆಯತ್ತ ಆಸಕ್ತಿ.
ನಾನು ನನ್ನ ಗೆಳೆಯರೊಟ್ಟಿಗೆ ಸೇರಿ ‘ಹಣತೆ’ ಸಾಹಿತ್ಯಕ ,ಸಾಂಸ್ಕೃ ತಿಕ ಜಗಲಿ ಉತ್ತರ ಕನ್ನಡ ಎಂಬ ಹೆಸರಿನಲ್ಲಿ ಒಂದು ಜಿಲ್ಲಾ ಮಟ್ಟದ ಸಂಘಟನೆ ಕಟ್ಟಿಕೊಂಡಿದ್ದೇನೆ.ಅದರ ಮೂಲಕ ಈ ಜಿಲ್ಲೆಯಾದ್ಯಂತ ನೂರಾರು ಸಾಹಿತ್ಯಕ,ಸಾಂಸ್ಕೃತಿ ಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡ ಸಮಾಧಾನ. ಈ ಸಂಘಟನೆಯಡಿಯೇ ರಾಜ್ಯಮಟ್ಟದ ಪರಿಕ್ಪನೆಯಲ್ಲಿ ‘ಹಣತೆ’ ರಾಜ್ಯಮಟ್ಟದ ದೀಪಾವಳಿ ವಿಶೇಷಾಂಕ,ಬೆಳಕಿನ ಬೀಜ ಜಿ.ಆರ್.ಪಾಂಡೇಶ್ವರ ಅವರ ಜನ್ಮ ಶತಮಾನೋತ್ಸವದ ನಿಮಿತ್ತ ಸಂಸ್ಮರಣ ಕೃತಿ ಮುಂತಾದವುಗಳನ್ನು ಪ್ರಕಟಿಸಿ, ನಾಡಿಗೆ ಕೊಟ್ಟಿದ್ದೇನೆ.ಜೊತೆಗೆ ಕಾಂತಾವರ ಕನ್ನಡ ಸಂಘದ ‘ನಾಡಿಗೆ ನಮಸ್ಕಾರ’ ಮಾಲಿಕೆಯಲ್ಲಿ ಸಾಹಿತಿ ವಿಶುಕುಮಾರ್ ಅವರ ಬದುಕಿನ ಚಿತ್ರಣದ ಬಗ್ಗೆ ಒಂದು ಕೃತಿ ಬರೆದುಕೊಟ್ಟಿದ್ದೇನೆ. ರಾಜ್ಯ ಮಟ್ಟದ ಕಥೆ-ಕವನ ಸ್ಪರ್ಧೆಗಳನ್ನೂ ಏರ್ಪಡಿಸಿ ನಾಡಿನ ವಿವಿಧೆಡೆಯ ಸಶಕ್ತ ಕಥೆಗಾರರನ್ನು, ಕವಿಗಳನ್ನು ತೀರ್ಪುಗಾರರನ್ನಾಗಿ ನೇಮಕ ಮಾಡಿಕೊಂಡು ಪಾರದರ್ಶಕವಾಗಿ ತೀರ್ಪು ನೀಡಿದ್ದೇನೆ.ಜಿಲ್ಲಾ ಮಟ್ಟದ ಹನಿಗವನ ಕಮ್ಮಟ,ವಿಚಾರ ಸಂಕಿರಣ,ನಾಟಕ ಇತ್ಯಾದಿಗಳನ್ನು ಪರಿಣಾಮಕಾರಿಯಾಗಿ ಹಮ್ಮಿಕೊಂಡು ಸಾಹಿತ್ಯಾಸಕ್ತರ ಮೆಚ್ಚುಗೆಗೆ ಪಾತ್ರನಾಗಿದ್ದೇನೆ.ಹೊನ್ನಾವರ ತಾಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ,ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಧಾನ ಸಂಚಾಲಕನಾಗಿ ಪಾರದರ್ಶಕವಾಗಿ ಕೆಲಸ ಮಾಡಿದ್ದೇನೆ.2006 ರಲ್ಲಿ ಗುಣವಂತೆಯಲ್ಲಿ ನಡೆದ ಹೊನ್ನಾವರ ತಾಲೂಕು ಸಾಹಿತ್ಯ ಸಮ್ಮೇಳನದ ಜಮಾ ಖರ್ಚುನ್ನು ರಸೀದಿ ಪುಸ್ತಕ ಸಹಿತ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿ, ಜಿಲ್ಲೆಯ ಸಾಹಿತ್ಯಿಕ ವಲಯದಲ್ಲಿ ಮೊಟ್ಟ ಮೊದಲು ಪಾರದರ್ಶಕತೆ ತರಲು ಪ್ರಯತ್ನಿಸಿದ್ದೇನೆ.ಇವೆಲ್ಲ ಸಾಧನೆ ಖಂಡಿತ ಅಲ್ಲ,ನನ್ನ ಮಿತಿಯಲ್ಲಿ ಕೆಲವು ಚಟುವಟಿಕೆ ಮಾಡಿದ್ದು ಅಷ್ಟೆ.

ಪ್ರಶ್ನೆ; ಕಸಾಪ ಜಿಲ್ಲಾಧ್ಯಕ್ಷ ಚುನಾವಣೆಗೆ ನಿಲ್ಲಲು ನಿಮಗಿರುವ ಅರ್ಹತೆಗಳೇನು ?
ಉತ್ತರ: ನಾಡು ನುಡಿಯ ಬಗೆಗಿನ ಪ್ರೀತಿ ಮತ್ತು ಕಾಳಜಿಯ ಜೊತೆಗೆ ಸಾಹಿತ್ಯಕ ಬರವಣಿಗೆಗಳ ಮೂಲಕ ಚಿಂತನೆಯನ್ನು ಕೈಗೊಳ್ಳುವ ನಾನು,ಕಳೆದ 18 ವರ್ಷಗಳಿಂದ ಈ ಕ್ಷೇತ್ರದಲ್ಲಿ ಕ್ರಿಯಾಶೀಲನಾಗಿರುವುದನ್ನು ಉತ್ತರ ಕನ್ನಡ ಜಿಲ್ಲೆ ಗಮನಿಸಿದೆ.ಜಿಲ್ಲಾಧ್ಯಕ್ಷ ಚುನಾವಣೆಗೆ ಇವು ಗುರುತಿಸಬಹುದಾದ ಅರ್ಹತೆಗಳಾಗಬಹುದು ಎಂಬುದು ನನ್ನ ಅಂಬೋಣ.
ಪ್ರಶ್ನೆ : ಜೀವನೋಪಾಯಕ್ಕಾಗಿ ನೀವು ಯಾವ ವೃತ್ತಿಯನ್ನು ಅವಲಂಬಿಸಿದ್ದೀರಿ?ನಿಮ್ಮ ಮಾಸಿಕ ಆದಾಯ ಎಷ್ಟು?
ಉತ್ತರ : ಬದುಕು ಕಟ್ಟಿಕೊಳ್ಳಲು ನನ್ನದೇ ಸಂಪಾದಕತ್ವದಲ್ಲಿ ‘ಕನ್ನಡ ಹಣತೆ’ ವಾರಪತ್ರಿಕೆ ಮಾಡಿಕೊಂಡಿದ್ದೇನೆ.ಜೊತೆಗೆ ಚಿಕ್ಕ ಪ್ರಮಾಣದಲ್ಲಿ ಸಿರಾಮಿಕ್ಸ್ ವ್ಯವಹಾರವಿದೆ.ಬದುಕು ನಿರ್ವಹಣೆಗೆ ಸಾಲುವಷ್ಟು ಆದಾಯವಿದೆ.

ಪ್ರಶ್ನೆ; ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಮುಂದಿರುವ ಪ್ರಸ್ತುತ ಸಮಸ್ಯೆ-ಸವಾಲುಗಳೇನು?
ಉತ್ತರ: ಜಿಲ್ಲೆಯ ಸಾಹಿತ್ಯ ಪರಿಷತ್ತಿನಲ್ಲಿ ಅವಕಾಶ ನೀಡಿಕೆಯ ದೃಷ್ಟಿಯಿಂದ ಪ್ರಾದೇಶಿಕ ತಾರತಮ್ಯ ಇದೆ. ಹಣಕಾಸು ನಿರ್ವಹಣೆಯಲ್ಲಿ ಪಾರದರ್ಶಕತೆಯ ಕೊರತೆ ಢಾಳಾಗಿ ಎದ್ದು ಕಾಣುತ್ತದೆ.ಗುಂಪು ರಾಜಕಾರಣ ಮಾಡುತ್ತ ಅರ್ಹ ಪ್ರತಿಭೆಗಳಿಗೆ ಮಣೆ ಇಲ್ಲದೇ ಮೂಲೆ ಗಂಪಾಗುತ್ತಿದ್ದಾರೆ.ಸರಕಾರ ನೀಡಿದ ಲಕ್ಷಾಂತರ ಹಣವನ್ನು ಬೇಕಾಬಿಟ್ಟಿ ಫೋಲು ಮಾಡಿ ಪರಿಷತ್ತು ಕೇವಲ ಸಾಹಿತ್ಯ ಸಮ್ಮೇಳನಕ್ಕಷ್ಟೇ ಸೀಮಿತವಾಗಿದೆ.ಇಂಥ ಅವ್ಯವಸ್ಥೆ,ದುರವಸ್ಥೆಯನ್ನು ಇಲ್ಲವಾಗಿಸಲು ಹಿರಿಯ ಸಾಹಿತಿಗಳ ಸಲಹೆ,ಯುವ ಸಮುದಾಯದ ಹೊಸ ದೃಷ್ಟಿಕೋನ ಎಲ್ಲವನ್ನು ಪರಿಗಣಿಸಿ,ನಿಜದಲ್ಲಿ ಕನ್ನಡದ ಪರಿಷತ್ತನ್ನು ಕಟ್ಟುವುದು ಬಹು ದೊಡ್ಡ ಸವಾಲು.ಜಿಲ್ಲಾಧ್ಯಕ್ಷನಾದವ ಕೇವಲ ರುಮಾಲು ಕಟ್ಟಿಕೊಂಡು ಕುಳಿತುಕೊಳ್ಳದೇ ಇಂಥ ಗಂಭೀರ ಸವಾಲುಗಳನ್ನು ಗೌರವಪೂರ್ವಕವಾಗಿ ನಿಭಾಯಿಸುವುದೇ ಸಧ್ಯದ ತುರ್ತು.

ಪ್ರಶ್ನೆ: ನಿಮ್ಮ ದೃಷ್ಠಿಯಲ್ಲಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ಮುಂದಿರುವ ಗುರಿ ಏನು ? ಅದನ್ನು ತಲುಪಲು ದಾರಿ ಯಾವುದು ?
ಉತ್ತರ: ಜಿಲ್ಲೆಯ ಎಲ್ಲಾ ಕನ್ನಡ ಮನಸ್ಸುಗಳನ್ನು ಒಂದುಗೂಡಿಸುವುದು.ಹಿಂದಿನ ಕಹಿ ಘಟನೆಯನ್ನು ಮರೆತು.ಸಿಹಿ ಘಟನೆಯನ್ನಷ್ಟೇ ಮೆಲಕು ಹಾಕುತ್ತ ಹೊಸ ಪರಿಕಲ್ಪನೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತನ್ನು ಕಟ್ಟುವುದು ನನ್ನ ಮುಂದಿರುವ ಗುರಿ.ಪೂರ್ವಗ್ರಹವನ್ನಿಟ್ಟುಕೊಳ್ಳದೇ ಒಟ್ಟಾಗಿ ಪರಿಷತ್ತಿನ ನೆಲಗಟ್ಟನ್ನು ಭದ್ರಗೊಳಿಸುವುದರಿಂದ ನನ್ನ ಮುಂದಿರುವ ಗುರಿಯನ್ನು ತಲುಪಬಹುದೆಂಬುದು ನನ್ನ ನಂಬಿಕೆ.
ಪ್ರಶ್ನೆ; ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಭ್ಯರ್ಥಿಯ ಅರ್ಹತೆಗಳೇನಿರಬೇಕು?
ಉತ್ತರ; ಇಡೀ ಜಿಲ್ಲೆಯನ್ನು ಕಣ್ಣೆದುರು ಹರಡಿಕೊಳ್ಳುವಷ್ಟರ ಮಟ್ಟಿಗೆ ಸಂಯಮವಿರಬೇಕು. ಅಂದಾಗ ಮಾತ್ರ ಉತ್ತರ ಕನ್ನಡದ ಸಾಹಿತ್ಯಕ ವಲಯಕ್ಕೆ ಮತ್ತು ಸಾಹಿತ್ಯ ಪರಿಷತ್ತಿಗೆ ನ್ಯಾಯ ಒದಗಿಸಲು ಸಾಧ್ಯ. ಇಲ್ಲಿ ತುಂಬ ಸೂಕ್ಷ್ಮಮನಸ್ಸಿನವರೊಟ್ಟಿಗೆ ಒಡನಾಟವಿರುತ್ತದೆ. ಎಲ್ಲರನ್ನು ಗೌರವದಿಂದ, ಸಮಭಾವದಿಂದಕಾಣುವ ದೊಡ್ಡತನವಿರಬೇಕು.

ಪ್ರಶ್ನೆ; ಜಿಲ್ಲಾ ಸಾಹಿತ್ಯ ಸಮ್ಮೇಳನ ಅಥವಾ ತಾಲೂಕು ಸಾಹಿತ್ಯ ಸಮ್ಮೇಳನಗಳಿಗೆ ಅಧ್ಯಕ್ಷರನ್ನು ನೀವು ಜಿಲ್ಲಾಧ್ಯಕ್ಷರಾದರೆ ಯಾವ ಮಾನದಂಡದಲ್ಲಿ ಆಯ್ಕೆ ಮಾಡಬಯಸುತ್ತೀರಿ?
ಉತ್ತರ; ಜಿಲ್ಲಾ ಮತ್ತು ತಾಲೂಕು ಸಾಹಿತ್ಯ ಸಮ್ಮೇಳನಾಧ್ಯಕ್ಷತೆಗೆ ಕಾರ್ಯಕಾರಿ ಸಮಿತಿ ಸಭೆ ಕರೆದು ಒಂದು ಆಯ್ಕೆ ಸಮಿತಿಯನ್ನು ರಚಿಸುವುದರ ಜೊತೆಗೆ ಆಯ್ಕೆ ಪ್ರಕ್ರಿಯೆಯಲ್ಲಿ ಆಯಾ ವ್ಯಾಪ್ತಿಗೊಳಪಟ್ಟ ಸಾಹಿತಿಯೊಬ್ಬರ ಸಾಹಿತ್ಯ ಕೃತಿ ಮಾತ್ರವಲ್ಲ, ಅವರ ಸಾಹಿತ್ಯ ಪರಿಚಾರಿಕೆಯ ಬಗ್ಗೂ ಗಮನ ನೀಡಲು ಸೂಚನೆ ನೀಡಿರುತ್ತೇನೆ. ಯಾಕೆಂದರೆ ಈ ಹಿಂದೆ ಕೆಲ ತಾಲೂಕುಗಳಲ್ಲಿ ಬೆರಳೆಣಿಕೆಯ ಜೊಳ್ಳು ಕೃತಿಗಳನ್ನೇ ಲೆಕ್ಕ ಹಾಕಿ ಸಮ್ಮೇಳನಾಧ್ಯಕ್ಷತೆಯ ಕುರ್ಚಿಯಲ್ಲಿ ಆಸೀನರಾದವರಿದ್ದಾರೆ. ಈ ಮಹತ್ವದ ಸ್ಥಾನ ಅಲಂಕರಿಸಲು ವಶೀಲಿ ಬಾಜಿ ತಪ್ಪಿಸಲು ಆಯ್ಕೆ ಸಮಿತಿಯ ಸದಸ್ಯರಹೆಸರನ್ನು ಸಮ್ಮೇಳನಾಧ್ಯಕ್ಷರ ಆಯ್ಕೆ ಆಗುವವರೆಗೂ ರಹಸ್ಯವಾಗಿಡುತ್ತೇನೆ.

ಪ್ರಶ್ನೆ; ಜಿಲ್ಲಾ ಸಾಹಿತ್ಯ ಪರಿಷತ್ತಿನಲ್ಲಿರುವ ಜಾತೀಯತೆ ಮತ್ತು ಗುಂಪುಗಾರಿಕೆಯನ್ನು ನೀವು ಹೇಗೆ ಎದುರಿಸುತ್ತೀರಿ?
ಉತ್ತರ; ಚಿಕ್ಕಂದಿನಿಂದಲೂ ಜಾತ್ಯಾತೀತ ಮನೋಭಾವದಿಂದಲೇ ಬೆಳೆದುಬಂದ ನನಗೆ, ಜಾತೀಯತೆ ಹೋಗಲಾಡಿಸುವುದು ಕಷ್ಟವೇನಲ್ಲ. ನನ್ನ ಆಡಳಿತದಲ್ಲಿ ಜಾತೀಯತೆಗೆ ಅವಕಾಶವಿರದಂತೆ ಪರಿಷತ್ತಿನ ಆಡಳಿತ ಪ್ರಕ್ರಿಯೆ ಪಾದರಸದಷ್ಟು ಚುರುಕಿನಿಂದ ಮುನ್ನಡೆಸಲು ಜಿಲ್ಲೆಯ ಪ್ರತಿಭೆಗಳಿಗೆ ಕೆಲವು ಹೊಣೆ ವಹಿಸುತ್ತೇನೆ. ಇನ್ನು ನನ್ನ ಆಡಳಿತದ ಅವಧಿಯಲ್ಲಿ ಗುಂಪುಗಾರಿಕೆಯ ಕ್ಯಾನ್ಸರ್ ಇರಲ್ಲ ಸರ್. ಹಾಗಿದ್ದಮೇಲೆ ಅದನ್ನು ಎದುರಿಸುವ ಸಮಸ್ಯೆ ಇರಲ್ಲ ಅಂದುಕೊಳ್ಳುತ್ತೇನೆ.
ಪ್ರಶ್ನೆ; ನೀವು ಈಗಾಗಲೇ ಜಿಲ್ಲಾ ಸಾಹಿತ್ಯ ಪರಿಷತ್ತಿನಲ್ಲಿರುವ ಪಟ್ಟಭದ್ರರಗುಂಪೊಂದರ ಕೈಗೊಂಬೆ ಎಂಬ ಆರೋಪ ಇದೆ. ನಿಜವೇ?
ಉತ್ತರ; ನೀವು ಹೇಳುತ್ತಿರುವ ಪಟ್ಟಭದ್ರ ಗುಂಪು ಜಿಲ್ಲೆಯಲ್ಲಿ ಬಿತ್ತಿ ಹೋದ ಕೆಟ್ಟ ವ್ಯವಸ್ಥೆಯನ್ನೇ ಕಿತ್ತೊಗೆಯಲು ನಾನು ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಸ್ವಾಮಿ. ಹಾಗಿದ್ದ ಮೇಲೆ ನಾನೇ ಅಂಥವರ ಕೈಗೊಂಬೆ, ಕೀಲಿಗೊಂಬೆ ಅನ್ನುವ ಪ್ರಶ್ನಯೇ ಉದ್ಭವಿಸುವುದಿಲ್ಲ.

ಪ್ರಶ್ನೆ; ನೀವು ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದರೆ ನಿಮ್ಮ ಮುಂದೆ ಸೋತ ಅಭ್ಯರ್ಥಿಯನ್ನು ಪರಿಷತ್ತಿನ ಗೌರವಕಾರ್ಯದರ್ಶಿಯಾಗಿ ಮಾಡಿಕೊಂಡು ಅವರ ಜೊತೆ ಸೇರಿ ಪರಿಷತ್ತಿನ ನುಡಿತೇರನ್ನು ಎಳೆಯಲು ಸಾಧ್ಯವಿದೆಯೇ?
ಉತ್ತರ; ಸರ್, ಸೋತ ಅಭ್ಯರ್ಥಿ ಅನ್ನುವುದಕ್ಕಿಂತ ಸಹ ಅಭ್ಯರ್ಥಿ ಅಂತ ಕರೆಯೋಣ. ನಾನು ಜಿಲ್ಲಾಧ್ಯಕ್ಷನಾದರೆ ಚುನಾವಣೆಯಲ್ಲಿ ನನ್ನ ಜೊತೆಗಿದ್ದ ಸಹ ಅಭ್ಯರ್ಥಿಯನ್ನು ಪರಿಷತ್ತಿನ ಗೌರವಕಾರ್ಯದರ್ಶಿಯನ್ನಾಗಿ ಮಾಡಿಕೊಳ್ಳುವುದು ಕಷ್ಟಸಾಧ್ಯ. ಯಾಕೆಂದರೆ, ನಾನು ಶೋಕಿಗಾಗಿ ಜಿಲ್ಲಾಧ್ಯಕ್ಷನಾಗುವವನಲ್ಲ. ಮೂರು ವರ್ಷದ ಆವಧಿಯಲ್ಲಿ ಮಾಡಬೇಕಾದ ಕೆಲಸಗಳು ಬಹಳಷ್ಟು ಇವೆ. ಹಿಂದಿನ ಜಿಲ್ಲಾಧ್ಯಕ್ಷರು ವಿವಿಧ ಕುಂಟು ನೆಪ ಹೇಳಿ ಜಾರಿಕೊಳ್ಳುತ್ತಾ ಜಿಲ್ಲೆಗೆ ತರದ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ನನ್ನ ಅವಧಿಯಲ್ಲಿ ತಂದೇ ತರುತ್ತೇನೆ. ಸಾಹಿತ್ಯ ಕಮ್ಮಟಗಳನ್ನು ಮಾಡಬೇಕಾಗಿದೆ. ಪುಸ್ತಕ ಪ್ರಕಟಣೆಗಳನ್ನು ಮಾಡಬೇಕಾಗಿದೆ. ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳಬೇಕಾಗಿದೆ. ಪ್ರತಿ ತಿಂಗಳು ಜಿಲ್ಲೆಯ ಒಂದೊಂದು ಸಾಹಿತಿಗಳ ಸಾಹಿತ್ಯ ಸಮೀಕ್ಷೆ – ಸಂವಾದವನ್ನು ನಡೆಸಬೇಕಾಗಿದೆ. ಕನ್ನಡವನ್ನು ಉಳಿಸುವ ಭರವಸೆಯ ಕಲೆಯಾದ ಯಕ್ಷಗಾನದ ಪ್ರಸಂಗಗಳ ಅಧ್ಯಯನಕ್ಕೆ ಸಂಬಂಧಪಟ್ಟಂತೆ ಸರಣಿ ವಿಚಾರ ಸಂಕಿರಣ ಹಮ್ಮಿಕೊಳ್ಳಬೇಕೆಂದಿದ್ದೇನೆ ಇಂಥ ಮಹಾತ್ವಾಕಾಂಕ್ಷೆಯನ್ನೆಲ್ಲ ಪರಿಣಾಮಕಾರಿಯಾಗಿ ಮಾಡಬೇಕಾದರೆ ಗೌರವ ಕಾರ್ಯದರ್ಶಿ ಆದವರು ಪರಿಷತ್ತಿಗೆ ಅಗತ್ಯವಿದ್ದ ತಕ್ಷಣ ಲಭ್ಯವಿರುವವರಾಗಬೇಕಾಗುತ್ತದೆ. ಪರಿಷತ್ತಿನ ಕಾರ್ಯಾಲಯದ ಕಾರ್ಯನಿರ್ವಹಣೆಯ ಜವಾಬ್ಧಾರಿಯನ್ನು ಕಾಲ ಕಾಲಕ್ಕೆ ನಿರ್ವಹಿಸಬೇಕಾಗುತ್ತದೆ. ನನ್ನ ಎದುರು ನಿಂತ ಅಭ್ಯರ್ಥಿ ನನ್ನ ಪ್ರೀತಿಯ ಗೆಳೆಯನೂ ಹೌದು.ಆದರೆ ಗೌರವ ಕಾರ್ಯದರ್ಶಿ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ.ಅವರ ಉತ್ಸಾಹವನ್ನು ಖಂಡಿತ ನನ್ನ ಕಾರ್ಯಕಾರಿ ಸಮಿತಿಯಲ್ಲಿ ಬಳಸಿಕೊಳ್ಳುತ್ತೇನೆ.ಅವರು ಮಾತ್ರವಲ್ಲ,ನಾನು ಹಿಂದಿನ ಅವಧಿಯ ಚುನಾವಣೆಗೆ ಸ್ಪರ್ಧಿಸಿದಾಗಲೂ ಕೂಡ ಸಹ ಅಭ್ಯರ್ಥಿಗಳಾದವರ ಉತ್ಸಾಹ ಹಾಗೂ ಅನುಭವಗಳನ್ನು ನನ್ನ ಕಾರ್ಯಕಾರಿ ಸಮಿತಿಯಲ್ಲಿ ಬಳಸಿಕೊಳ್ಳುತ್ತೇನೆ.ಎಲ್ಲರೂ ಒಟ್ಟಾದಾಗ ಮಾತ್ರ ನಮ್ಮ ಜಿಲ್ಲೆಯಲ್ಲಿ ಕನ್ನಡ ಕಟ್ಟಲು ಸಾಧ್ಯ.
ಪ್ರಶ್ನೆ; ಸಾಹಿತ್ಯ ಪರಿಷತ್ತಿನ ಜಿಲ್ಲೆ,ತಾಲೂಕು ಸಾಹಿತ್ಯ ಸಮ್ಮೇಳನಗಳಿಗೆ ಕೇಂದ್ರ ಪರಿಷತ್ತಿನಿಂದ ಅನುದಾನ ಹಣ ಬರದಿದ್ದರೂ ನೀವು ಈ ಸ್ಥಾನಕ್ಕೆ ಸ್ಪರ್ಧಿಸುತ್ತಿದೀರಾ?
ಉತ್ತರ: ನಾನು ಸರಕಾರದ ಕೇಂದ್ರ ಪರಿಷತ್ತಿನ ಲಕ್ಷಾಂತರ ರೂಪಾಯಿಗಳ ಅನುದಾನ ನಂಬಿಕೊಂಡು ಈ ಸ್ಥಾನಕ್ಕೆ ಸ್ಪರ್ಧಿಸುತ್ತಿಲ್ಲ.ಬದಲಾಗಿ, ಉತ್ತರ ಕನ್ನಡಿಗರನ್ನು, ಪರಿಷತ್ತಿನ ಆಜೀವ ಸದಸ್ಯರನ್ನು ,ಜೊತೆಗೆ ನನಗಿರುವ ಆತ್ಮಸ್ಥೈರ್ಯವನ್ನು ನಂಬಿಕೊಂಡು ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ.ಅನುದಾನವಿಲ್ಲದಿದ್ದರೂ ಜಿಲ್ಲಾ ಸಾಹಿತ್ಯ ಪರಿಷತ್ತನ್ನು ಅತ್ಯಂತ ಯಶಸ್ವಿಯಾಗಿ ಹೇಗೆ ನಡೆಸಿಕೊಂಡು ಹೋಗಬೇಕೆಂದು ನನಗೆ ಗೊತ್ತು..

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *