
ಎದುರು ಮನೆಯಲ್ಲೇ ಕೊರೋನಾ:ರಾಜ್ಯದೆಲ್ಲೆಡೆ ಕೊರೋನಾ ಆತಂಕ ಮನೆ ಮಾಡಿದ್ದು, ಸ್ಯಾಂಡಲ್ ವುಡ್ ಕಲಾವಿದರಿಗೂ ಭೀತಿ ತಪ್ಪಿಲ್ಲ.ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ, ನಟ ರವಿಶಂಕರ್ ಗೌಡ ವಾಸವಿರುವ ಅಪಾರ್ಟ್ ಮೆಂಟ್ ನಲ್ಲಿಯೂ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ.

ರಾಜ್ಯದೆಲ್ಲೆಡೆ ಕೊರೋನಾ ಆತಂಕ ಮನೆ ಮಾಡಿದ್ದು, ಸ್ಯಾಂಡಲ್ ವುಡ್ ಕಲಾವಿದರಿಗೂ ಭೀತಿ ತಪ್ಪಿಲ್ಲ.ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ, ನಟ ರವಿಶಂಕರ್ ಗೌಡ ವಾಸವಿರುವ ಅಪಾರ್ಟ್ ಮೆಂಟ್ ನಲ್ಲಿಯೂ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಹೊಸಕೆರೆಹಳ್ಳಿ ಸಮೀಪ ಇರುವ ಪ್ರೆಸ್ಟೀಜ್ ಅಪಾರ್ಟ್ ಮೆಂಟ್ ನಲ್ಲಿ ನಟ ರವಿಶಂಕರ್ ಗೌಡ ಕುಟುಂಬ ವಾಸವಿದೆ. ರವಿಶಂಕರ್ ಮನೆಯ ಎದುರು ಮನೆಯಲ್ಲಿಯೆ ಕೊರೋನಾ ಸೋಂಕು ಪತ್ತೆಯಾದ ಹಿನ್ನಲೆ ರವಿಶಂಕರ್ ಪತ್ನಿ, ಮಕ್ಕಳಲ್ಲಿ ಆತಂಕ ಮನೆಮಾಡಿದೆ. ಭಯದಲ್ಲಿರುವ ರವಿಶಂಕರ್ ಅವರಿಗೆ ಸ್ನೇಹಿತರು ಧೈರ್ಯ ತುಂಬಿದ್ದಾರೆ.
ಈ ಬಗ್ಗೆ ಸ್ವತಃ ನಟ ರವಿಶಂಕರ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. “ಎದುರು ಮನೆಗೆ ಕೊರೋನಾ ವಕ್ಕರಿಸಿದೆ, 14 ದಿನ ಬಾಗಿಲು ತೆಗೆಯುವಂತಿಲ್ಲ. ಮಕ್ಕಳನ್ನು ದೇವರೆ ಕಾಪಾಡಬೇಕು” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಭಯಗೊಂಡಿರುವ ತಮಗೆ ನಟರಾದ ಸುದೀಪ್, ಗಣೇಶ್, ಸೃಜನ್ ಲೋಕೇಶ್ ಮತ್ತು ರಘುರಾಮ್ ಧೈರ್ಯ ತುಂಬಿದ್ದಾರೆ. ಅಲ್ಲದೆ ಸುದೀಪ್ ಮತ್ತು ಗಣೇಶ್ ಮಕ್ಕಳನ್ನು ಕರೆದುಕೊಂಡು ಮನೆಗೆ ಬಾ ಎಂದು ಕರೆದಿದ್ದಾರೆ ಎಂದು ರವಿಶಂಕರ್ ಹೇಳಿದ್ದಾರೆ.
ಇನ್ನೊಂದೆಡೆ ನಟ ರವಿಶಂಕರ್ ಗೌಡ ಎದುರು ಮನೆಯವರಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ಅದೇ ಅಪಾರ್ಟ್ ಮೆಂಟ್ ನಲ್ಲಿ ವಾಸವಿರುವ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರಿಗೂ ಸೋಂಕು ತಗುಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವದಂತಿ ಹರಿದಾಡಿತ್ತು.
ಇದಕ್ಕೆ ಟ್ವಿಟರ್ ಮೂಲಕ ಸ್ಪಷ್ಟನೆ ನೀಡಿರುವ ಅವರು, “ನನಗೂ ಕೊರೋನಾ ಪಾಸಿಟಿವ್ ಬಂದಿದೆ ಎನ್ನುವ ವದಂತಿ ಹರಿದಾಡುತ್ತಿದೆ. ಇದು ಸುಳ್ಳು. ನಾನು ಕ್ಷೇಮವಾಗಿದ್ದೀನಿ. ಎಲ್ಲರೂ ಈ ಕಷ್ಟದ ಸಮಯದಲ್ಲಿ ಸುರಕ್ಷಿತವಾಗಿರಿ” ಎಂದು ಹೇಳುವ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ.
