
ಕಾರವಾರದ ಕೋವಿಡ್ ಚಿಕಿತ್ಸಾ ಕೇಂದ್ರದಿಂದ ಪರಾರಿಯಾಗಿದ್ದ ಕರೋನಾ ಸೋಂಕಿತನೊಬ್ಬ ಪೊಲೀಸರು, ಅಧಿಕಾರಿಗಳನ್ನು ಕಾಡಿಸಿ ಹೈರಾಣಾಗಿಸಿದ ಘಟನೆ ಈಗ ರಾಜ್ಯದಾದ್ಯಂತ ಚರ್ಚೆ ಯ ವಿಷಯವಾಗಿದೆ.
ಶಿರಸಿಯಲ್ಲಿ ಕಳ್ಳತನದ ಆರೋಪದ ಮೇಲೆ ಬಂಧಿತನಾಗಿ ಪೊಲೀಸರು,ನ್ಯಾಯಾಧೀಶರು,ಎ.ಪಿ.ಪಿ.ಗಳನ್ನುಕಾರಂಟೈನ್ ಮಾಡಿದ್ದ ಭೂಪ ಧಾರವಾಡದವನು, ಇವನನ್ನು ಬಂಧಿಸಿ ಫಜೀತಿಗೊಳಗಾಗಿದ್ದ ಪೊಲೀಸರು, ನ್ಯಾಯಾಧೀಶರುಕಾರಂಟೈನ್ ಆಗುತ್ತಲೇ ಈತನನ್ನು ಕಾರವಾರದ ಕೋವಿಡ್ ಚಿಕಿತ್ಸಾ ಕೇಂದ್ರಕ್ಕೆ ರವಾನಿಸಲಾಗಿತ್ತು. ಇದು ಒಂದು ಅಧ್ಯಾಯವಾದರೆ,
ಇದೇ ಭೂಪ ಕಾರವಾರದಲ್ಲಿ ಕರೋನಾ ಚಿಕಿತ್ಸೆ ಪಡೆಯುತಿದ್ದ ಸಂದರ್ಭದಲ್ಲಿ ಮತ್ತೆ ಎರಡು ಮೊಬೈಲ್ಗಳನ್ನು ಕದ್ದು ಇಂದು ಮುಂಜಾನೆ ಕಾರವಾರದಿಂದ ಪರಾರಿಯಾಗಿ ಆತಂಕ ಹೆಚ್ಚಿಸಿದ್ದ, ಕೂಡಲೇ ಎಚ್ಚೆತ್ತ ಆಡಳಿತ ಆತನನ್ನು ಕಾರವಾರದ ಕದ್ರಾ ಬಳಿ ಬಂಧಿಸಿ, ಮರಳಿ ಕಾರವಾರಕ್ಕೆ ತಂದಿದೆ. ಧಾರವಾಡದ 38 ವರ್ಷದ ಈ ಕಳ್ಳ ಕಳ್ಳತನ ಮಾಡಿ, ಕರೋನಾ ವಿಸ್ತರಿಸಿಪೊಲೀಸರು, ಜಿಲ್ಲಾಡಳಿತದ ಆತಂಕ ಹೆಚ್ಚಿಸಿದ್ದಾನೆ. ಇವನ ವರ್ತನೆ ಸಾರ್ವಜನಿಕರೊಂದಿಗೆ ಅಧಿಕಾರಿಗಳ ತಲೆಬಿಸಿ ಹೆಚ್ಚಿಸಿದೆ.
-02-
ಭಾರತಕ್ಕೆ ಕೊರೋನಾಘಾತ: 24 ಗಂಟೆಗಳಲ್ಲಿ ದೇಶಾದ್ಯಂತ 19,459 ಹೊಸ ಸೋಂಕು ಪ್ರಕರಣ ದಾಖಲು
ದೇಶಾದ್ಯಂತ ಮಾರಕ ಕೊರೋನಾ ವೈರಸ್ ಆರ್ಭಟ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 19,459 ಹೊಸ ಸೋಂಕು ಪ್ರಕರಣಗಳು ದಾಖಲಾಗಿವೆ.
- ತಮಿಳುನಾಡು: ಒಂದೇ ದಿನ 3,940 ಹೊಸ ಕೊರೋನಾ ಸೋಂಕು ಪ್ರಕರಣಗಳ ದಾಖಲು, 54 ಸಾವು!
- ಕೇರಳಕ್ಕೆ ಮತ್ತೆ ಕೊರೋನಾಘಾತ; ಒಂದೇ ದಿನ 118 ಸೋಂಕು ಪ್ರಕರಣ ದಾಖಲು
- ಮುಂಬೈನಲ್ಲಿ ಮತ್ತೆ 1,460 ಹೊಸ ಕೊರೋನಾ ಸೋಂಕು ಪ್ರಕರಣ, ಸೋಂಕಿತರ ಸಂಖ್ಯೆ 80,188 ಕ್ಕೆ ಏರಿಕೆ
- ಮಹಾರಾಷ್ಟ್ರ: 24 ಗಂಟೆಗಳಲ್ಲಿ 5493 ಹೊಸ ಸೋಂಕಿತರ ದಾಖಲು, 156 ಸೋಂಕಿತರ ಸಾವು!
- ದೆಹಲಿ: ಒಂದೇ ದಿನ 2889 ಹೊಸ ಸೋಂಕು ಪ್ರಕರಣ, 83 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ
ನವದೆಹಲಿ: ದೇಶಾದ್ಯಂತ ಮಾರಕ ಕೊರೋನಾ ವೈರಸ್ ಆರ್ಭಟ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 19,459 ಹೊಸ ಸೋಂಕು ಪ್ರಕರಣಗಳು ದಾಖಲಾಗಿವೆ.
ಆ ಮೂಲಕ ದೇಶದಲ್ಲಿ ಒಟ್ಟಾರೆ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 5,48,318ಕ್ಕೆ ಏರಿಕೆಯಾಗಿದ್ದು, ಈ ಪೈಕಿ 3,21,723 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಅಂತೆಯೇ ದೇಶದಲ್ಲಿ ಪ್ರಸ್ತುತ 2,10,120 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಇನ್ನು ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 380 ಮಂದಿ ಸೋಂಕಿತರು ಸಾವನ್ಮಪ್ಪಿದ್ದು, ಆ ಮೂಲಕ ದೇಶದಲ್ಲಿ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 16,475ಕ್ಕೆ ಏರಿಕೆಯಾಗಿದೆ.
