

ರಾಜ್ಯದಲ್ಲಿ ಮೊದಲ ಹಂತದಲ್ಲೇ ಕರೋನಾ ಸೋಂಕಿತರಿಂದಕುಖ್ಯಾತವಾಗಿದ್ದ ಉತ್ತರ ಕನ್ನಡ ಜಿಲ್ಲೆ ಈ ವಾರದ ಕರೋನಾ ನಾಗಾಲೋಟಕ್ಕೆ ಬೆಚ್ಚಿಬಿದ್ದಿದೆ.
ಕಳೆದ ಎರಡು ತಿಂಗಳಲ್ಲಿ ನೂರರ ಲೆಕ್ಕದಲ್ಲಿದ್ದ ಉತ್ತರ ಕನ್ನಡ ಜಿಲ್ಲೆಯ ಕೋವಿಡ್ ಸೋಕಿತರ ಸಂಖ್ಯೆ ಈ ತಿಂಗಳಲ್ಲಿ ನೂರನ್ನು ದಾಟಿ ಈಗ 230 ರ ಗಡಿಯಲ್ಲಿದೆ! ಇದೇ ವಾರ ರವಿವಾರ,ಸೋಮವಾರ, ಮಂಗಳವಾರಗಳ ಮೂರು ದಿವಸಗಳಲ್ಲಿ ಕರೋನಾ ಸೋಂಕಿತರ ಸಂಖ್ಯೆ 70 ರ ದೊಡ್ಡ ಸಂಖ್ಯೆಯನ್ನು ದಾಟಿದೆ.
ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ದೇಶಕ್ಕೆ ದೇಶವೇ ಈ ಕರೋನಾ ಕಾಟಕ್ಕೆ ಬಲಿಯಾಗಿರುವ ಸಂದರ್ಭದಲ್ಲಿ ಪ್ರಧಾನಮಂತ್ರಿ ಮೋದಿ 80 ಕೋಟಿ ಬಡ ಭಾರತೀಯರಿಗೆ ನವೆಂಬರ್ ವರೆಗೆ ಉಚಿತ, ನಿಗದಿತ, ನಿಯಮಿತ ಆಹಾರಧಾನ್ಯ ವಿತರಿಸುವುದಾಗಿ ಘೋಶಿಸಿದ್ದಾರೆ. ಈ ಘೋಷಣೆ ಹಿಂದೆ ಮತ್ತೆ ಲಾಕ್ ಡೌನ್ ಸಾಧ್ಯತೆಯನ್ನು ಊಹಿಸುವಂತಾಗಿದೆ.
