

ಉತ್ತರಕನ್ನಡದಲ್ಲಿ ಇಂದು ಮೊದಲ ಕರೋನಾ ಸಾವು ಸಂಭವಿಸಿದ್ದು ಮಹಾರಾಷ್ಟ್ರದಿಂದ ಮರಳಿದ್ದ ಮಹಿಳೆಯೊಬ್ಬರಲ್ಲಿ ಕರೋನಾ ಇರುವುದು ಮರಣದ ನಂತರ ದೃಢಪಟ್ಟಿದೆ.
ಹೊನ್ನಾವರದ ದಂಪತಿಗಳಿಬ್ಬರಲ್ಲಿ ಪತಿ ಮಹಾರಾಷ್ಟ್ರದಲ್ಲಿ ನಿಧನ ಹೊಂದಿದ್ದರು. ಪತಿಯ ಮರಣದ ನಂತರ ಹುಟ್ಟೂರಿಗೆ ಮರಳುತಿದ್ದ ಮಹಿಳೆಯನ್ನು ಯಲ್ಲಾಪುರದಲ್ಲಿ ತಡೆದು ಕಾರಂಟೈನ್ ಮಾಡಲಾಗಿತ್ತು. ಈ ಮಹಿಳೆಯ ಗಂಟಲು ದ್ರವ ಪರೀಕ್ಷೆಯ ಮೊದಲ ಮಾದರಿಯಲ್ಲಿ ಕರೋನಾ ದೃಢಪಟ್ಟಿರಲಿಲ್ಲ. ಮಂಗಳವಾರ ನಿಧನರಾದ ಇವರ ಮರಣಾನಂತರದ ಮಾದರಿ ಪರೀಕ್ಷೆಯಲ್ಲಿ ಈ ಮಹಿಳೆಯಲ್ಲಿ ಕರೋನಾ ಸೋಂಕಿರುವುದು ದೃಢಪಟ್ಟಿದೆ.
ಶಿರಸಿ ಕಳ್ಳ ಮತ್ತೆ ಪರಾರಿಯಾಗಿ ಸಿಕ್ಕ-
ಶಿರಸಿಯಿಂದ ಕಾರವಾರಕ್ಕೆ ರವಾನೆಯಾಗಿದ್ದ ಕರೋನಾ ರೋಗಿ ಎರಡುದಿವಸಗಳ ಹಿಂದೆ ಪರಾರಿಯಾಗಿ ಸೆರೆಸಿಕ್ಕಂತೆ ಇಂದು ಮತ್ತೆ ತಲೆಮರೆಸಿಕೊಂಡು ಕಾರವಾರದ ಶಿರವಾಡದಲ್ಲಿ ಸೆರೆಸಿಕ್ಕಿದ್ದಾನೆ.
ಈ ಕರೋನಾ ರೋಗಿಯ ಹುಚ್ಚಾಟ ಮತ್ತು ಕರೋನಾದಿಂದಾದ ಮೊದಲ ಸಾವು ಇಂದಿನ ಬಹುಚರ್ಚೆಯ ವಿಷಯಗಳಾಗಿವೆ.
