

ಇಂದು ರಾಜ್ಯದಲ್ಲಿ ನಡೆದ ಕರ್ನಾಟಕ ಪ್ರದೇಶ ಕಾಂಗ್ರೆಸ್ ನೂತನ ಅಧ್ಯಕ್ಷ ಡಿ.ಕೆ. ಶಿವಕುಮಾರ ಪದಗ್ರಹಣ ಕಾರ್ಯಕ್ರಮ ರಾಜ್ಯದಲ್ಲಿ ಸಂಚಲನ ಉಂಟುಮಾಡಿದೆ. ಕರೋನಾ ತೊಂದರೆ ಕಾಂಗ್ರೆಸ್ ಅವ್ಯವಸ್ಥೆ ಗಳಿಂದ ಬೇಸತ್ತ ಸಾಮಾನ್ಯ ಕಾರ್ಯಕರ್ತರು ಇಂದು ಬೂತ್ ಮಟ್ಟ,ವಾರ್ಡ್,ಪಂಚಾಯತ್ ಹಂತಗಳಲ್ಲಿ ಕೆ.ಪಿ.ಸಿ.ಸಿ. ಅಧ್ಯಕ್ಷರ ಪದಗ್ರಹಣ ನೋಡಿ ಅಲ್ಲಲ್ಲಿ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಉತ್ಸಾಹ ವೃದ್ಧಿಸಿಕೊಂಡರು.


ಉತ್ತರಕನ್ನಡ ಜಿಲ್ಲೆಯಲ್ಲಿ 500 ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಈ ಕಾರ್ಯಕ್ರಮವನ್ನು ವೀಕ್ಷಿಸಲಾಯಿತು. ಈ ಕಾರ್ಯಕ್ರಮವನ್ನು ವೀಕ್ಷಿಸಿದವರು7676366666 ಈ ಸಂಖ್ಯೆಗೆ ಮಿಸ್ಡ್ ಕಾಲ್ ಕೊಡಲು ಕಾಂಗ್ರೆಸ್ ಸೂಚಿಸಿದ ಮೇರೆಗೆ ಕೋಟ್ಯಾಂತರ ಜನರು ಮಿಸ್ಡ್ ಕಾಲ್ ಕೊಟ್ಟು ಪ್ರತಿಕ್ರೀಯಿಸಿದ ಮಾಹಿತಿ ನೀಡಲಾಗಿದೆ. ಸಿದ್ಧಾಪುರದಲ್ಲಿ ನಗರದ ಅನೇಕ ಕಡೆ, ಗ್ರಾಮೀಣ ಭಾಗಗಳಲ್ಲಿ ಕೆಲವೆಡೆ 2-3 ಗುಂಪುಗಳು ಪ್ರತ್ಯೇಕವಾಗಿಯೇ ಈ ಕಾರ್ಯಕ್ರಮ ವೀಕ್ಷಿಸಿ, ಸಿಹಿಹಂಚಿದ ಬಗ್ಗೆ ವರದಿಯಾಗಿದೆ.


