

ಇಂದುದೃಢಪಟ್ಟ ಭಟ್ಕಳದ 11ಕೋವಿಡ್ ಪ್ರಕರಣಗಳು,ಈವರೆಗೆ ಗುಣಮುಖರಾದ ಉತ್ತರಕನ್ನಡದ 142 ಕರೋನಾ ರೋಗಿಗಳು,ಈಗ ಸಕ್ರೀಯ ಕೋವಿಡ್ ಪ್ರಕರಣಗಳಾಗಿರುವ 147 ಕೇಸುಗಳು ಇವು ಸಹಜವಾಗಿ ಕರಾವಳಿ, ಭಟ್ಕಳ ಮಂಗಳೂರುಗಳನ್ನು ಆತಂಕಕ್ಕೀಡುಮಾಡಿವೆ. ವಿಶೇಶವೆಂದರೆ….
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಹರೀಶೆಯ ಮಂಗಳೂರಿನಲ್ಲಿ ಇಂದು ವ್ಯಕ್ತಿಯೊಬ್ಬರಲ್ಲಿ ಕರೋನಾ ದೃಢಟ್ಟಿದೆ. ಶಿರಸಿ-ಸಿದ್ಧಾಪುರಗಳೊಂದಿಗೆ ಹೆಚ್ಚಿನ ಸಂಪರ್ಕ,ಬಾಂಧವ್ಯ ಹೊಂದಿರುವ ಈ ಮಂಗಳೂರಿನ ಜನ ಈಗ ಭಯಪಡುವಂತಾಗಿದೆ. ಈ ಮಧ್ಯೆ ಹೊರಜಿಲ್ಲೆ, ಬೆಂಗಳೂರುಗಳಿಂದ ಸ್ವ ಊರಿಗೆ ಮರಳುತ್ತಿರುವ ಜನರಿಂದ ಈ ಭಾಗದ ಜನರು ಭಯಪಡುತ್ತಿರುವ ವಿದ್ಯಮಾನಗಳು ವರದಿಯಾಗುತ್ತಿವೆ.
ಹೊರ ದೇಶ, ಹೊರ ರಾಜ್ಯಗಳಿಂದ ಬಂದವರಿಂದ ಕರೋನಾ ವ್ಯಾಪಕವಾದ ಹಿನ್ನೆಲೆಯಲ್ಲಿ ಹೊರಪ್ರದೇಶಗಳಿಂದ ಬರುತ್ತಿರುವ ಜನರು ತಮ್ಮ ಸ್ವಂತ: ಊರು ಮೂಲಸ್ಥಾನಕ್ಕೆ ಬರುವ ಬಗ್ಗೆ ಕೂಡಾ ಸ್ಥಳೀಯರು ವಿರೋಧಿಸುವಂತಾಗುತ್ತಿರುವುದು ವಿಚಿತ್ರವಾಗಿದೆ.
ಸಿದ್ಧಾಪುರದ ಲಂಬಾಪುರದ ಬಳಿ ಮೃತ ತಂದೆಯನ್ನು ನೋಡಲು ಬಿಡದ ಜನರು, ಬಿಳಗಿಯಲ್ಲಿ ಇದೇ ಭಾಗದ ವ್ಯಕ್ತಿಯೊಬ್ಬನನ್ನು ಇಂಟರ್ ನೆಟ್ ಬಳಕೆಗೆ ಬಿಡದೆ ಮನೆಯನ್ನೇ ಖಾಲಿ ಮಾಡಿಸಿದ ಜನರು ಇವೆಲ್ಲಾ ಜನರಲ್ಲಿನ ತಿಳುವಳಿಕೆ ಕೊರತೆ ಮತ್ತು ಸ್ವಯಂ ಜಾಗೃತಿಯ ಉದಾಹರಣೆಗಳು. ಇವ್ಯಾವೂ ಅತಿಯಾಗದಂತೆ ಸ್ಥಳಿಯರಿಗೂ ತೊಂದರೆಯಾಗದಂತೆ ಪರ ಊರುಗಳಿಂದ ಬರುವವರು ಸ್ವಯಂ ನಿಯಂತ್ರಣ, ನಿಬಂಧನೆಗಳ ಶಿಸ್ತನ್ನು ಪಾಲಿಸುವುದು ಕೂಡಾ ಈ ಸಂಕಟದ ಕಾಲದ ನಿವಾರ್ಯತೆಯಾಗಿದೆ.

