ಕರೋನಾ ಹಿನ್ನೆಲೆಯಲ್ಲಿ ಲಾಕ್ ಡೌನ್ ಅನಿವಾರ್ಯ ಎನ್ನುವ ಜನಾಭಿಪ್ರಾಯವಿದ್ದರೂ ಸರ್ಕಾರ ಜನರು, ಜನಾಭಿಪ್ರಾಯವನ್ನು ಮನ್ನಿಸದ ಹಿನ್ನೆಲೆಯಲ್ಲಿ ಸಾರ್ವಜನಿಕರು ಸ್ವಯಂ ತೀರ್ಮಾನ, ಅಭಿಪ್ರಾಯ ಗಳ ಮೂಲಕ ಸರ್ಕಾರಕ್ಕೇ ಸವಾಲು ಹಾಕುತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ನಾನಾ ಸಂಘ ಸಂಸ್ಥೆಗಳು ಕರೋನಾ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ತಾವೇ ಸ್ವಯಂ ನಿಯಂತ್ರಣ,ಶಿಸ್ತು ಪಾಲನೆ ಮೂಲಕ ಕರೋನಾ ನಿಯಂತ್ರಣಕ್ಕೆ ಸಿದ್ಧರಾಗಿದ್ದಾರೆ. ಕರಾವಳಿ, ಮಲೆನಾಡು, ಅರೆಮಲೆನಾಡಿನ ಉತ್ತರ ಕನ್ನಡದಲ್ಲಿ ಆಯಾ ತಾಲೂಕುಗಳ ಸಂಘ-ಸಂಸ್ಥೆಗಳು ತಮ್ಮ ಕೆಲಸ, ಸೇವೆಗಳ ಸಮಯ ನಿಗದಿ ಮಾಡಿಕೊಳ್ಳುತಿದ್ದಾರೆ. ಸಿದ್ಧಾಪುರದ ಸರಾಪ ಸಂಘ ಜುಲೈ 6 ರ ಸೋಮವಾರದಿಂದ ಮುಂಜಾನೆ 9ರಿಂದ ಮಧ್ಯಾಹ್ನ 2.30 ರ ವರೆಗೆ ಮಾತ್ರ ಬಂಗಾರದ ಅಂಗಡಿಗಳ ವ್ಯವಹಾರ ನಿಗದಿ ಮಾಡಿದೆ. ಸೋಮವಾರದಿಂದ ಸಿದ್ಧಾಪುರದ ಬಂಗಾರದ ಅಂಗಡಿಗಳು ಬೆಳಿಗ್ಗೆ 9 ರಿಂದ ಮಧ್ಯಾಹ್ನ 2.30 ರವರೆಗೆ ಮಾತ್ರ ಕಾರ್ಯನಿರ್ವಹಿಸಲಿವೆ.
ತಾಳಮದ್ದಳೆ
ಕರೋನಾ ಹಾವಳಿಯಿಂದಾಗಿ ಇಡೀ ಜಗತ್ತಿಗೆ ಮುಂದೇನು ಎಂಬ ಪ್ರಶ್ನೆ ಕಾಡುತ್ತಿದೆ. ದೇಶ ಮುಂದೆ ಹೋಗುವ ಬದಲು ಹಿಂದೆ ಸಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಾಂಸ್ಕೃತಿಕ ಕ್ಷೇತ್ರವೇ ಜೀವ ಶಕ್ತಿಯನ್ನು ಕೊಡುವುದಾಗಿದೆ ಎಂದು ಜೈರಾಂ ಕೆ.ಆರ್ ತಲವಾಟ ಹೇಳಿದರು.
ಅವರು ತಾಲ್ಲೂಕಿನ ಹೇಮಗಾರ ಕಶಿಗೆಯ ಕೇಶವ ನಾರಾಯಣ ಸಭಾಗೃಹದಲ್ಲಿ ಭುವನೇಶ್ವರೀ ತಾಳಮದ್ದಲೆ ಕೂಟದ 33 ನೇ ವರ್ಷದ ಚಾತುರಮಾಸ್ಯ ಸರಣಿ ತಾಳಮದ್ದಲೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
3 ದಶಕಗಳ ಕಾಲ ತಾಳಮದ್ದಲೆ ಕೂಟವನ್ನು ನಡೆಸಿಕೊಂಡು ಬರುತ್ತಿರುವ ಭುವನೇಶ್ವರೀ ತಾಳಮದ್ದಲೆ ಕೂಟದ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ. ಅನ್ಯರ ಪ್ರೋತ್ಸಾಹಕ್ಕಿಂತ ನಮ್ಮ ಮಣ್ಣಿನ ಕಲಾ ಪ್ರಕಾರವನ್ನು ರಕ್ಷಿಶಿಕೊಂಡು ಹೋಗುವುದು ಈ ಸಂದರ್ಭದಲ್ಲಿ ಮಹತ್ವದ್ದಾಗಿದೆ.
ಕೂಟ ಇದೆ ರೀತಿ ಮುಂದುವರೆದಾಗ ಯುವ ಜನಾಂಗ ಯಕ್ಷಗಾನದ ದತ್ತ ಆಕರ್ಷಿತರಾಗಲು ಸಾಧ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಮುಖ್ಯ ಅಭ್ಯಾಗತರಾಗಿದ್ದ ಹಿರಿಯ ನ್ಯಾಯವಾಧಿ ಜೆ.ಪಿ.ಎನ್ ಹೆಗಡೆ ಮಾತನಾಡಿ ಸಂಪರ್ಕ ಸಾಧನಗಳಿಲ್ಲದ ಕಾಲದಲ್ಲೇ ಯಕ್ಷಗಾನ ಕಲೆಯನ್ನು ಪೋಶಿಸಿಕೊಂಡು ಬಂದ ಕಶಿಗೆಯಲ್ಲಿ ನಂತರದ ತಲೆಮಾರಿನವರು ಮುಂದುವರೆಸಿರುವುದು ಖುಷಿಯ ಸಂಗತಿಯಾಗಿದೆ. ಸಂಸ್ಕೃತಿಯ ಬೆಳವಣಿಗೆ ಈ ಮೂಲಕ ಸಾಧ್ಯವಾಗುತ್ತದೆ ಎಂದರು.
ಹಿರಿಯ ವೇದಾಂತ ವಿದ್ವಾಂಸ ಕೃಷ್ಣ ಭಟ್ಟ ಅಡವಿತೋಟ ಅಧ್ಯಕ್ಷತೆ ವಹಿಸಿದ್ದರು. ಜಿ.ಕೆ ಭಟ್ಟ ಕಶಿಗೆ ಸ್ವಾಗತಿಸಿ ಪ್ರಸ್ತಾವನೆ ಮಾಡಿದರು. ಗಣಪತಿ ಹೆಗಡೆ ಗುಂಜಗೋಡ ನಿರೂಪಿಸಿದರೆ ಪ್ರೀತಿವರ್ಧನ ಭಟ್ಟ ವಂದಿಸಿದರು. ನಂತರ ಪಟ್ಟಾಭಿಷೇಕ ಆಖ್ಯಾನ ಪ್ರದರ್ಶನಗೊಂಡಿತು. ಹಿಮ್ಮೇಳದಲ್ಲಿ ಕೊಳಗಿ ಕೇಶವ ಹೆಗಡೆ ಹಾಗೂ ಮಾಧವ ಭಟ್ಟ (ಭಾಗವತ) ಮಂಜುನಾಥ ಹೆಗಡೆ ಕಂಚಿಮನೆ (ಮದ್ದಳೆ) ಪಾಲ್ಗೊಂಡಿದ್ದರು. ಮುಮ್ಮೇಳನದಲ್ಲಿ ಜಿ.ಕೆ ಭಟ್ಟ ಕಶಿಗೆ, (ದಶರಥ) ಜಯರಾಮ ತಲವಾಟ (ಕೈಕೆಯಿ) ಶೇಷಗಿರಿ ಭಟ್ಟ (ಶ್ರೀರಾಮ) ಗ.ನಾ ಹೆಗಡೆ (ಲಕ್ಷ್ಮಣ) ಜಯರಾಮ ಭಟ್ಟ (ಮಂಥರೆ) ಎಂ.ಕೆ ಹೆಗಡೆ (ಸೀತೆ) ದಿನೇಶ ಹೆಗಡೆ (ಕೌಸಲ್ಯೆ) ಟಿ.ಎಂ ರಮೇಶ (ಗುಹಾ) ಪಾತ್ರಗಳನ್ನು ನಿರ್ವಹಿಸುವ ಮೂಲಕ ರಂಜಿಸಿದರು. ಭಾಗವತಿಕೆಯ ಅಭ್ಯಾಸ ಮಾಡುತ್ತಿರುವ ಸಾಪ್ಟೇವೆರ್ ಇಂಜನಿಯರ್ ಮಹೇಶ ಹೆಗಡೆ ಕೊಳಗಿ ಆರಂಭದಲ್ಲಿ ಪದ್ಯ ಹೇಳಿ ರಂಜಿಸಿದರು.