

ಕರೋನಾ ನಾಗಾಲೋಟ ಮುಂದುವರಿದಿದೆ. ಉತ್ತರಕನ್ನಡ,ಶಿವಮೊಗ್ಗ ಸೇರಿದಂತೆ ರಾಜ್ಯದಾದ್ಯಂತ ಕರೋನಾ ಸೋಂಕಿತರ ಪ್ರಮಾಣ ಹೆಚ್ಚುತ್ತಿದೆ. ಈ ವಾಸ್ತವದ ಜೊತೆ ಶಿರಸಿಯನ್ನು ಆತಂಕಕ್ಕೀಡುಮಾಡಿದ್ದು ಆ ಎರಡು ಪ್ರಕರಣಗಳು.

ಮೊದಲ ಪ್ರಕರಣ ಶಿರಸಿಯ ಸುಗಾವಿ ಪ್ರಾ.ಆ. ಕೇಂದ್ರದ ಸಿಬ್ಬಂದಿಯೊಬ್ಬರಲ್ಲಿ ಕರೋನಾ ಪತ್ತೆಯಾಗಿರುವುದು ಮತ್ತು ವಿಶಾಲನಗರದ ಬೆಂಗಳೂರಿನಿಂದ ಮರಳಿದ ವ್ಯಕ್ತಿಯಲ್ಲಿ ಕೋವಿಡ್ ದೃಢಪಟ್ಟಿರುವುದು.
ವಿಶಾಲನಗರದ ವ್ಯಕ್ತಿ ಚಿಕಿತ್ಸೆಗಾಗಿ ತೆರಳಿದ್ದ ಎರಡು ಖಾಸಗಿ ಆಸ್ಫತ್ರೆಗಳು ಮತ್ತು ವಿಶಾಲನಗರದ ನಾಲ್ಕು ಮನೆಗಳನ್ನು ಕಂಟೇನ್ಮೆಂಟ್ ಪ್ರದೇಶ ಎಂದು ಘೋಶಿಸಲಾಗಿದೆ. ಶಿರಸಿಯ ಗ್ರಾಮೀಣ ಪ್ರದೇಶ ಸುಗಾವಿ ಸರ್ಕಾರಿ ಆಸ್ಫತ್ರೆಯ ಸಿಬ್ಬಂದಿಯಲ್ಲಿ ಕರೋನಾ ದೃಢಪಟ್ಟಿರುವುದರಿಂದ ಆ ಪ್ರಾ.ಆ.ಕೇಂದ್ರವನ್ನು ಶೀಲ್ ಡೌನ್ ಮಾಡಲಾಗಿದೆ.
(related) ಕರೋನಾದಿಂದ ತತ್ತರಿಸಲಿದೆ ಮಲೆನಾಡು?
ಬೆಂಗಳೂರಿನಿಂದ ಬಂದವರ ಬಗ್ಗೆಯೂ ಜಾಗೃತೆ ವಹಿಸಿ
ಕರೋನಾ ವಾರದಿಂದ ವಾರಕ್ಕೆ ದಿನದಿಂದ ದಿನಕ್ಕೆ ವಿಸ್ತರಿಸುತ್ತಿದೆ. ಈ ವರೆಗೆ 6.5 ಲಕ್ಷ ಕರೋನಾ ಪೀಡಿತರನ್ನು ಹೊಂದಿರುವ ಭಾರತಕ್ಕೆ ಕರೋನಾ ಸೋಂಕಿತರ ಸಂಖ್ಯೆಯ ಏರಿಕೆ ಕ್ರಮ ಭಾರವಾಗುವ ಅಪಾಯ ಸಮೀಪಿಸುವಂತಿದೆ. ಜುಲೈ 4 ರ ಶನಿವಾರವಾದ ಇಂದು ಉತ್ತರಕನ್ನಡ ಜಿಲ್ಲೆಯಲ್ಲಿ 34 ಜನರಲ್ಲಿ, ಪಕ್ಕದ ಶಿವಮೊಗ್ಗ ಜಿಲ್ಲೆಯಲ್ಲಿ 25 ಜನರಲ್ಲಿ ಕರೋನಾ ಸೋಂಕು ದೃಢವಾಗುವ ಸಾಧ್ಯತೆ ನಿಚ್ಚಳವಾಗಿದೆ. ಈ ಮಾಹಿತಿಯ ಆಧಾರದಲ್ಲಿ ಮಳೆಯಿಂದ ತತ್ತರಿಸಲಿರುವ ಮಲೆನಾಡು, ಕರಾವಳಿಯನ್ನು ಕರೋನಾ ಕಾಡುವುದು ನಿಶ್ಚಿತವಾಗಿದೆ.
ಬೆಂಗಳೂರಿಗರಿಂದ ಅಪಾಯ-
ಇಲ್ಲಿಯವರೆಗೆ ಹೊರರಾಜ್ಯ ವಿಶೇಶವಾಗಿ ಮಹಾರಾಷ್ಟ್ರದವರಿಂದ ಬಳಲಿದ ನಮಗೆ ಈಗ ಬೆಂಗಳೂರು ಅಪಾಯದ ಮೂಲವಾಗಿದೆ. ಕಳೆದ ತಿಂಗಳು ಮಹಾರಾಷ್ಟ್ರದಿಂದ ಮರಳಿದವರಲ್ಲಿ ಸರಣಿಯಲ್ಲಿ ಪತ್ತೆಯಾದ ಕರೋನಾ ಈ ತಿಂಗಳು ಬೆಂಗಳೂರಿನಿಂದ ಮರಳಿದವರ ಬೆನ್ನುಬಿದ್ದಿದೆ. ಮಹಾರಾಷ್ಟ್ರ, ಬೆಂಗಳೂರು ಅಥವಾ ಪರ ಊರು, ಹೊರ ಜಿಲ್ಲೆ, ಹೊರರಾಜ್ಯಗಳಿಂದ ಬರುವವರು ಸ್ವಯಂ ಜಾಗೃತಿ, ನಿಯಂತ್ರಣ ಮಾಡಿಕೊಳ್ಳುವುದು, ಸ್ಥಳಿಯರೂ ಹೊರ ಪ್ರದೇಶಗಳಿಂದ ಬರುವವರನ್ನು ನಿಗದಿತ ಅಂತರದಲ್ಲಿಡುವುದು, ಸೂಕ್ತ ಮುನ್ನೆಚ್ಚರಿಕೆ,ತಪಾಸಣೆ,ಶೀಘ್ರ ಚಿಕಿತ್ಸೆ ಈ ಉಪಕ್ರಮಗಳ ಮೂಲಕವೂ ಕೋವಿಡ್ ನಿಂದ ರಕ್ಷಿಸಿಕೊಳ್ಳಬಹುದಾಗಿದೆ.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
