

ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಶ್ರೀ ಮಾರಿಕಾಂಬಾ ದೇವಸ್ಥಾನವನ್ನು ಒಂದು ವಾರದ ವರೆಗೆ ಶೀಲ್ಡೌನ್ ಮಾಡಲಾಗಿದೆ. ದೇವಸ್ಥಾನದ ಎದುರಿನ ಮನೆಯ ವ್ಯಕ್ತಿಯೊಬ್ಬರಿಗೆ ಕೋವಿಡ್ ಪಾಸಿಟಿವ್ ಹಿನ್ನೆಲೆಯಲ್ಲಿ ಈ ಮುಂಜಾಗೃತೆ ವಹಿಸಲಾಗಿದೆ. ಈ ಪ್ರದೇಶದ ಕರೋನಾ ಸೋಂಕಿತ ವ್ಯಕ್ತಿ ಪ್ರತಿದಿನ ಮಾರಿಕಾಂಬಾ ದೇವಸ್ಥಾನಕ್ಕೆ ಭೇಟಿ ನಿಡುತಿದ್ದ ಹಿನ್ನೆಲೆಯಲ್ಲಿ ಇಂದಿನಿಂದ ಒಂದು ವಾರದ ವೆರೆಗೆ ದೇವಸ್ಥಾನ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಕರೋನಾದಿಂದ ತತ್ತರಿಸಲಿದೆ ಮಲೆನಾಡು?
ಬೆಂಗಳೂರಿನಿಂದ ಬಂದವರ ಬಗ್ಗೆಯೂ ಜಾಗೃತೆ ವಹಿಸಿ
ಕರೋನಾ ವಾರದಿಂದ ವಾರಕ್ಕೆ ದಿನದಿಂದ ದಿನಕ್ಕೆ ವಿಸ್ತರಿಸುತ್ತಿದೆ. ಈ ವರೆಗೆ 6.5 ಲಕ್ಷ ಕರೋನಾ ಪೀಡಿತರನ್ನು ಹೊಂದಿರುವ ಭಾರತಕ್ಕೆ ಕರೋನಾ ಸೋಂಕಿತರ ಸಂಖ್ಯೆಯ ಏರಿಕೆ ಕ್ರಮ ಭಾರವಾಗುವ ಅಪಾಯ ಸಮೀಪಿಸುವಂತಿದೆ. ಜುಲೈ 4 ರ ಶನಿವಾರ ಉತ್ತರಕನ್ನಡ ಜಿಲ್ಲೆಯಲ್ಲಿ 35 ಜನರಲ್ಲಿ, ಪಕ್ಕದ ಶಿವಮೊಗ್ಗ ಜಿಲ್ಲೆಯಲ್ಲಿ 25 ಜನರಲ್ಲಿ ಕರೋನಾ ಸೋಕು ದೃಢವಾಗುವ ಸಾಧ್ಯತೆ ನಿಚ್ಚಳವಾಗಿದೆ. ಈ ಮಾಹಿತಿಯ ಆಧಾರದಲ್ಲಿ ಮಳೆಯಿಂದ ತತ್ತರಿಸಲಿರುವ ಮಲೆನಾಡು, ಕರಾವಳಿಯನ್ನು ಕರೋನಾ ಕಾಡುವುದು ನಿಶ್ಚಿತವಾಗಿದೆ
