

ಸಿದ್ದಾಪುರ ಪಟ್ಟಣದ ವ್ಯಾಪಾರಸ್ತರಿಂ ದ ಸ್ವಯಂ ಪ್ರೇರಿತ ಬಂದ್‍ಗೆ ನಿರ್ಧಾರ.
ಕೊರೋನಾ ಕೋವಿಡ್-19 ರೋಗವು ದೇಶಾದ್ಯಂತ ಹರಡುತ್ತಿದ್ದು ಸಿದ್ದಾಪುರ ತಾಲೂಕಿನಲ್ಲೂ ವ್ಯಾಪಕವಾಗಿ ಹರಡದಂತೆ ತಡೆಗಟ್ಟುವ ಸಲುವಾಗಿ ದಿನಾಂಕ: 07-07-2020ರ ಮಂಗಳವಾರದಿಂದ 31-07-2020 ರ ಶುಕ್ರವಾರದ ಸಾಯಂಕಾಲ 5 ಘಂಟೆಯವರೆಗೆ ಮಾತ್ರ ವ್ಯಾಪಾರ ವಹಿವಾಟುಗಳನ್ನು ನಡೆಸಲು ಸಿದ್ದಾಪುರ ಪಟ್ಟಣದ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ವ್ಯಾಪಾರಸ್ಥರು ಸಭೆ ಸೇರಿ ತಿರ್ಮಾನಿಸಿದ್ದು ತಾಲೂಕಿನ ಎಲ್ಲಾ ನಾಗರಿಕರು ಮತ್ತು ವ್ಯಾಪಾರಸ್ಥರು ಇದಕ್ಕೆ ಸಹಕರಿಸಬೇಕಾಗಿ ಕೋರಲಾಗಿದೆ.
ಈ ಸಂದರ್ಭದಲ್ಲಿ ಮಾನ್ಯ ತಹಶೀಲ್ದಾರ್‍ರವರಿಗೆ ತಾಲೂಕಾ ವರ್ತಕರ ಸಂಘದ ಅಧ್ಯಕ್ಷರಾದ ಪ್ರಕಾಶ ಹುಲೇಕಲ್ ಮನವಿ ಸಲ್ಲಿಸಿದರು. ಪ್ರಮುಖರಾದ ರವಿ ನಾಯ್ಕ ಜಾತಿಕಟ್ಟಾ, ನಂದನ ಬೋರ್ಕರ್, ವಿನಾಯಕ ಶೇಟ್, ಅನಿಲ್ ದೇವನಳ್ಳಿ, ಆರ್. ಎಸ್. ಭಟ್ಟ, ಸಿ.ಎಸ್. ಗೌಡರ್, ಸುನೀಲ್ ಫರ್ನಾಂಡಿಸ್ ಉಪಸ್ಥಿತರಿದ್ದರು.
ಮತ್ತೊಂದು ಸುದ್ದಿ-
ಇವರಿಗೆ.
ಮಾನ್ಯ ಮುಖ್ಯಮಂತ್ರಿಗಳು,
ಕರ್ನಾಟಕ ರಾಜ್ಯ ಸರ್ಕಾರ.
ಬೆಂಗಳೂರು.
ಮಾನ್ಯ ಜಿಲ್ಲಾಧಿಕಾರಿಯವರು, ಉತ್ತರ ಕನ್ನಡ ಜಿಲ್ಲೆ ಇವರ ಮೂಲಕ.
ಮಾನ್ಯರೇ,
ವಿಷಯ :- ಸ್ತ್ರೀಶಕ್ತಿ, ಸ್ವ-ಸಹಾಯ ಸಂಘಗಳು ರಾಷ್ಟ್ರೀಕೃತ/ಸಹಕಾರ ಬ್ಯಾಂಕುಗಳು, ಸಹಕಾರ ಸಂಘಗಳು, ಧರ್ಮಸ್ಥಳ, ಕಿರುಸಾಲ ಸಂಸ್ಥೆಗಳು ಮುಂತಾದವುಗಳಿಂದ ಪಡೆದ ಸಾಲಗಳಿಗೆ ಬಡ್ಡಿ ಸಹಿತ ಮನ್ನಾ ಮಾಡಲು ಒತ್ತಾಯಿಸಿ ಸಿ.ಐ.ಟಿ.ಯು. ಮತ್ತು ಜೆ.ಎಮ್.ಎಸ್. ಜಂಟಿ ಮನವಿ.
