

ಪೆಟ್ರೋಲ್, ಡಿಜೈಲ್ ದರ ಏರಿಕೆ ಬಗ್ಗೆ ಸಾರ್ವಜನಿಕರ ವಿರೋಧ ವ್ಯಕ್ತವಾಗುತ್ತಿದೆ. ದೇಶಭಕ್ತಿಯ ಹೆಸರಲ್ಲಿ ರಾಜಕೀಯ ಮಾಡುವವರ ಆರ್ಭಟದ ಪ್ರಚಾರ,ಸ್ವಯಂ ಪ್ರಶಂಸೆಗಳ ಮಧ್ಯೆ ವಿರೋಧ ಪಕ್ಷಗಳು ಕೇಂದ್ರ ಸರ್ಕಾರಗಳ ವಿಫಲತೆಯನ್ನು ಹೇಳಿ ಪ್ರತಿಭಟಿಸಲು ಮುಂದಾಗಿರುವ ಬದಲಾವಣೆ ಪ್ರಾರಂಭವಾಗಿದೆ. ಸಿದ್ಧಾಪುರದಲ್ಲಿ ಜಿಲ್ಲಾ ಕಾಂಗ್ರೆಸ್ ನಿಂದ ಪೆಟ್ರೋಲ್, ಡಿಜೈಲ್ ದರ ಏರಿಕೆ ವಿರೋಧಿಸಿ ಪ್ರತಿಭಟನೆ ನಡೆಸಿ ಮನವಿ ಅರ್ಪಿಸಲಾಯಿತು.

(related) ಸಿದ್ದಾಪುರ ಪಟ್ಟಣದ ವ್ಯಾಪಾರಸ್ತರಿಂದ ಸ್ವಯಂ ಪ್ರೇರಿತ ಬಂದ್ಗೆ ನಿರ್ಧಾರ.
ಕೊರೋನಾ ಕೋವಿಡ್-19 ರೋಗವು ದೇಶಾದ್ಯಂತ ಹರಡುತ್ತಿದ್ದು ಸಿದ್ದಾಪುರ ತಾಲೂಕಿನಲ್ಲೂ ವ್ಯಾಪಕವಾಗಿ ಹರಡದಂತೆ ತಡೆಗಟ್ಟುವ ಸಲುವಾಗಿ ದಿನಾಂಕ: 07-07-2020ರ ಮಂಗಳವಾರದಿಂದ 31-07-2020 ರ ಶುಕ್ರವಾರದ ಸಾಯಂಕಾಲ 5 ಘಂಟೆಯವರೆಗೆ ಮಾತ್ರ ವ್ಯಾಪಾರ ವಹಿವಾಟುಗಳನ್ನು ನಡೆಸಲು ಸಿದ್ದಾಪುರ ಪಟ್ಟಣದ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ವ್ಯಾಪಾರಸ್ಥರು ಸಭೆ ಸೇರಿ ತಿರ್ಮಾನಿಸಿದ್ದು ತಾಲೂಕಿನ ಎಲ್ಲಾ ನಾಗರಿಕರು ಮತ್ತು ವ್ಯಾಪಾರಸ್ಥರು ಇದಕ್ಕೆ ಸಹಕರಿಸಬೇಕಾಗಿ ಕೋರಲಾಗಿದೆ.
ಈ ಸಂದರ್ಭದಲ್ಲಿ ಮಾನ್ಯ ತಹಶೀಲ್ದಾರ್ರವರಿಗೆ ತಾಲೂಕಾ ವರ್ತಕರ ಸಂಘದ ಅಧ್ಯಕ್ಷರಾದ ಪ್ರಕಾಶ ಹುಲೇಕಲ್ ಮನವಿ ಸಲ್ಲಿಸಿದರು. ಪ್ರಮುಖರಾದ ರವಿ ನಾಯ್ಕ ಜಾತಿಕಟ್ಟಾ, ನಂದನ ಬೋರ್ಕರ್, ವಿನಾಯಕ ಶೇಟ್, ಅನಿಲ್ ದೇವನಳ್ಳಿ, ಆರ್. ಎಸ್. ಭಟ್ಟ, ಸಿ.ಎಸ್. ಗೌಡರ್, ಸುನೀಲ್ ಫರ್ನಾಂಡಿಸ್ ಉಪಸ್ಥಿತರಿದ್ದರು.



_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
