ರವಿವಾರ ಬೆಂಗಳೂರಿನಿಂದ ಹುಟ್ಟೂರು ಶಿರಸಿಗೆ ಮರಳಿ ರಾತ್ರಿ ಅಲ್ಲಿಯ ಖಾಸಗಿ ಆಸ್ಫತ್ರೆಗೆ ದಾಖಲಾಗಿ, ಬೆಳಿಗ್ಗೆ ಕರೋನಾ ದೃಢವಾದ ನಂತರ ಚಿಕಿತ್ಸೆಗೆ ಕಾರವಾರದ ಕಿಮ್ಸ್ ಗೆ ರವಾನಿಸಿದ್ದ 42 ವರ್ಷದ ವ್ಯಕ್ತಿ ಇಂದು ಅಪರಾಹ್ನ ಕಾರವಾರದಲ್ಲಿ ಮೃತರಾಗಿದ್ದಾರೆ.
ಈ ವ್ಯಕ್ತಿ ಕೆಲವು ದಿವಸಗಳಿಂದ ಕರೋನಾಕ್ಕೆ ತುತ್ತಾಗಿದ್ದ ಲಕ್ಷಣಗಳಿದ್ದು ಪರೀಕ್ಷೆ ನಡೆಸದೆ ಚಿಕಿತ್ಸೆ ಪಡೆದಿರುವ ಸಾಧ್ಯತೆಗಳಿವೆ. ಈ ಶಿರಸಿ ಮೂಲದ ಬೆಂಗಳೂರು ನಿವಾಸಿ ಮೃತರಾದದ್ದು ಮತ್ತು ಭಟ್ಕಳದ ಸರ್ಕಾರಿ ಆಸ್ಫತ್ರೆಯ ವೈದ್ಯರು ಸಿಬ್ಬಂದಿಗಳಿಗೆ ಕೋವಿಡ್ ಸೋಂಕು ದೃಢಪಟ್ಟಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗುತ್ತಲೇ ಜಿಲ್ಲಾಡಳಿತ ಶಿರಸಿ ಮತ್ತು ಭಟ್ಕಳಗಳಲ್ಲಿ ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳಿಗೆ ಮುಂದಾಗಿದೆ.