ದೇಶದ ಕರೋನಾ ಸೋಂಕಿತರ ಸಂಖ್ಯೆ 7.5 ಲಕ್ಷ ದಾಟುತ್ತಲೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 20 ಜನರಲ್ಲಿ ಕರೋನಾದೃಢಪಟ್ಟಿದೆ. ಇಂದು ಮಂಗಳೂರಿನಲ್ಲಿ ಮೃತಪಟ್ಟ ಭಟ್ಕಳದ ವ್ಯಕ್ತಿ, ಸೋಮುವಾರ ಕಾರವಾರದಲ್ಲಿ ಮೃತಪಟ್ಟ ಶಿರಸಿಯ ವ್ಯಕ್ತಿ ಹಾಗೂ ಭಟ್ಕಳದ ಹಿಂದಿನ ಒಂದು ಸಾವುಗಳು ಹೊರಜಿಲ್ಲೆಗಳ ಲೆಕ್ಕದಲ್ಲಿವೆ. ಹಾಗಾಗಿ ಸರ್ಕಾರದ ಅಂಕಿಸಂಖ್ಯೆಗಳಲ್ಲಿ ಉತ್ತರಕನ್ನಡದಲ್ಲಿ ಈವರೆಗೆ ಒಂದು ಕರೋನಾ ಸಾವು ದಾಖಲೆಗೆ ಸಿಕ್ಕಿದ್ದರೂ ವಾಸ್ತವದಲ್ಲಿ ಉತ್ತರ ಕನ್ನಡದಲ್ಲಿ 4 ಸಾವುಗಳಾಗಿವೆ.
ಇಂದಿನ ಉತ್ತರ ಕನ್ನಡದ ಕರೋನಾ ಸೋಂಕಿತರಲ್ಲಿ 14 ಭಟ್ಕಳ, 4 ಯಲ್ಲಾಪುರ, ಹಳಿಯಾಳ-ಕಾರವಾರಗಳ ತಲಾ ಒಂದು ಪ್ರಕರಣ ಸೇರಿವೆ.