

ವಿರೋಧಪಕ್ಷದ ನಾಯಕ ಸಿದ್ಧರಾಮಯ್ಯ ರಾಜ್ಯ ಸರ್ಕಾರದ 2 ಸಾವಿರ ಕೋಟಿ ಕರೋನಾ ಹಗರಣದ ಬಗ್ಗೆ ಆರೋಪಿಸಿದ್ದಾರೆ. ಇದೇ ವಿಚಾರದಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮೀತಿ ತನಿಖೆಗೆ ತಡೆಯಾಜ್ಞೆ ನೀಡಿದ ಪ್ರಾಮಾಣಿಕತೆ ಬಗ್ಗೆ ಕರ್ನಾಟಕ ರಾಷ್ಟ್ರಸಮೀತಿ ಅಧ್ಯಕ್ಷ ರವಿಕೃಷ್ಣ ರೆಡ್ಡಿ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಸರ್ಕಾರಕ್ಕೆ ಸವಾಲು ಹಾಕಿದ್ದರು.
ಈ ನಡುವೆ ಶಿರಸಿಯ ಟಿ.ಎಸ್.ಎಸ್. ನಲ್ಲಿ ಖರೀದಿಮಾಡಿರುವ ಕಿಟ್ ಗಳಿಗೆ ಕಾರ್ಮಿಕ ಇಲಾಖೆ ನೂರುಪಟ್ಟು (ಮುದ್ರಿತ 1500 ವಾಸ್ತವ ಬೆಲೆಗಿಂತ)ಹೆಚ್ಚು ಬೆಲೆ ದಾಖಲಿಸಿದೆ ಎಂದು ಮಾಹಿತಿ ಕಾರ್ಯಕರ್ತರೊಬ್ಬರು ಆರೋಪಿಸಿದ್ದರು. ಈ ವಿಚಾರದಲ್ಲಿ ಆರೋಗ್ಯ ಇಲಾಖೆ ಖರೀದಿಸಿರುವ ಕರೋನಾ ಉಪಕರಣಗಳ ಮೇಲೆ ನೂರಾರು ಪಟ್ಟು ಹೆಚ್ಚುವರಿ ಬಿಲ್ ಮಾಡಿರುವ ಬಗ್ಗೆ ದಾಖಲೆ ಸಿಕ್ಕಿದೆ. ವಿಚಿತ್ರವೆಂದರೆ……
ಶಿರಸಿ ಟಿ.ಎಸ್.ಎಸ್. ನಿಂದ ಎಷ್ಟು ಆಹಾರದ ಕಿಟ್ ಗಳನ್ನು ಕಾರ್ಮಿಕ ಇಲಾಖೆ ಖರೀದಿಸಿದೆ, ಅದಕ್ಕೆ ಸರ್ಕಾರದಿಂದ ಪಾವತಿಸಿರುವ ಕಿಟ್ ಗಳ ಮೊತ್ತವೆಷ್ಟು? ಎಂದರೆ ಕಾರ್ಮಿಕ ಇಲಾಖೆ ‘ಮಾಹಿತಿಇಲ್ಲ-ದಾಖಲೆ ಇಲ್ಲ ಎಂದು ಉತ್ತರ ನೀಡಿದೆ.
ರಾಜ್ಯ ಸರ್ಕಾರ ಆರೋಗ್ಯ ಇಲಾಖೆ, ಕಾರ್ಮಿಕ ಇಲಾಖೆಯಿಂದ ಖರೀದಿಸಿದ ವಸ್ತುಗಳ ವಾಸ್ತವದ ಬೆಲೆ ಎರಡು ನೂರರಿಂದ ಮೂರುನೂರು ಕೋಟಿ ರೂಪಾಯಿ ಆದರೆ ಸರ್ಕಾರದ ದಾಖಲೆಯಲ್ಲಿ ಈ ಖರೀದಿ ಮೊತ್ತ 2-3 ಸಾವಿರ ಕೋಟಿ!
ಅಲ್ಲಿಗೆ ರಾಜ್ಯ ಸರ್ಕಾರದ ಹಗಲು ದರೋಡೆ ಹಗರಣ ನಡೆದಿರುವುದಂತೂ ಸತ್ಯ. ಅದರಲ್ಲಿ ಹಳೆಯ ಗಣಿ ಸ್ನೇಹಿತರಾದ ಬಳ್ಳಾರಿ,ಕಾರವಾರ (ಉ.ಕ.)ದ ಹಳೆ ದೋಸ್ತಿಗಳ ಕೈವಾಡ ಪಕ್ಕಾ ಎನ್ನುವುದು ಸಾಬೀತಾಗಿದೆ.
ಈ ಹಗರಣದಲ್ಲಿ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತ ಅವರ ರಾತ್ರಿ ದೋಸ್ತಿಯ ಕಾಂಗ್ರೆಸ್ ಸಂಸ್ಥೆ ಟಿ.ಎಸ್.ಎಸ್. ಪಾತ್ರ ಪಕ್ಕಾ ಆಗಿದೆ. ಈ ಹಗರಣದ ಸಂಪೂರ್ಣ ವಿವರ ಮುರಗೇಶ್ ನಿರಾಣಿಯವರ ಬಳಿ ಇರುವ ಬಗ್ಗೆ ಚರ್ಚೆ ನಡೆದಿದೆ. ಆದರೆ ಈ ಹಗರಣದ ಮಾಹಿತಿ ನನ್ನ ಬಳಿ ಇದೆ ಎನ್ನುವುದು ನಿರಾಧಾರ ಎಂದು ನಿರಾಣಿ ಹೇಳಿದ್ದಾರೆ.
ಇಷ್ಟೆಲ್ಲಾ ಹಸಿಬಿಸಿ ಚರ್ಚೆಗಳ ನಡುವೆ ಶಾಸಕ ಮುರಗೇಶ್ ನಿರಾಣಿ ಕಾರವಾರದ ಶಾಸಕಿ ರೂಪಾಲಿ ನಾಯ್ಕರೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಏನು ಚರ್ಚಿಸಿದರು!? ಎನ್ನುವುದು ಅನುಮಾನಸ್ಫದ ಸಂಗತಿಯಾಗಿದೆ.
ಒಟ್ಟಾರೆ ಕರೋನಾ ಹೆಸರಲ್ಲಿ ಕಾರವಾರ, ಯಲ್ಲಾಪುರ ಶಿರಸಿಗಳಿಂದ ಪ್ರಾರಂಭವಾದ ಲಿಂಕ್ ಒಂದು ಬೆಂಗಳೂರಿನವರೆಗೆ ಸುತ್ತುಹೊಡೆಯುತ್ತಿದೆ. ಸಿದ್ಧರಾಮಯ್ಯ ಜೈಲಿಗೆ ಕಳಿಸಿದ ಗಣಿಧಣಿಗಳ ಆಪ್ತರು ಮುಂದೆ ಜೈಲುಪಾಲಾಗುವರೆ ಎನ್ನುವುದು ಈಗ ಯಕ್ಷ ಪ್ರಶ್ನೆಯಾಗಿದೆ. ಬಿ.ಜೆ.ಪಿ.ಯ ಮಾಸ್ಟರ್ ಮೈಂಡ್ ಇರುವ ಉತ್ತರಕನ್ನಡದಲ್ಲಿ ಕಾಂಗ್ರೆಸ್ ಸದಸ್ಯಬಾಹುಳ್ಯದ ಸಂಸ್ಥೆಯೊಂದನ್ನೂ
ಬಳಸಿಕೊಂಡಿರುವುದು ದೇಶಪ್ರೇಮಿಗಳ ನಿರಂತರ ನಾಟಕದ ಪ್ರಮುಖ ಅಂಕ ಎನ್ನಲಾಗುತ್ತಿದೆ. ಈ ಬಗೆಗಿನಒಂದು ಮಾಹಿತಿಗಾಗಿ ಈ ಲಿಂಕ್ ನೋಡಿ-https://www.youtube.com/watch?v=O6U7VI88LiQ @#samajamukhi ಸಮಾಜಮುಖಿ ಕನ್ನೇಶ್ youtube channel#
(one more news-) ಕುಮಟಾದಲ್ಲಿ ಅರ್ಧದಿನ ಲಾಕ್ಡೌನ್ ಗೆ ಸರ್ವಪಕ್ಷ ಮುಖಂಡರ ತೀರ್ಮಾನ
ಉತ್ತರ ಕಕನ್ನಡ ಜಿಲ್ಲೆಯಲ್ಲಿ ಕೋವಿಡ್ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇಂದು ಜಿಲ್ಲೆಯಲ್ಲಿ ದೃಢವಾಗುತ್ತಿರುವ 27 ಪ್ರಕರಣಗಳಲ್ಲಿ ಯಥಾ ಪ್ರಕಾರ ಭಟ್ಕಳಕ್ಕೆ ಸಿಂಹಪಾಲು ಉಳಿದಂತೆ ಕುಮಟಾ, ಶಿರಸಿ, ಹಳಿಯಾಳ ಸೇರಿದ ಪ್ರಕರಣಗಳಿವೆ. ಇದೇವಾರದಲ್ಲಿ ಒಂದು ಕಾಲು ಶತಕ ಕರೋನಾ ಸೋಂಕಿತರ ಸಂಖ್ಯೆ ದಾಖಲಿಸಿರುವ ಉತ್ತರಕನ್ನಡ ಜಿಲ್ಲೆ ಈ ವರೆಗೆ ಮೂರು ಸಾವುಗಳಿಗೂ ಸಾಕ್ಷಿಯಾಗಿದೆ.


