

ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು ದೃಢಪಟ್ಟ ಕೋವಿಡ್ -19 ರ



21 ಪ್ರಕರಣಗಳಲ್ಲಿ ಕಾರವಾರದ 10 ಮತ್ತು ಸಿದ್ಧಾಪುರದ 5 ಪ್ರಕರಣಗಳು ಸುದ್ದಿಮಾಡಿವೆ. ಸಿದ್ಧಾಪುರದ ವೈದ್ಯರು ಮತ್ತವರ ಸಹಾಯಕ ಲ್ಯಾಬ್ ಟೆಕ್ನಿಶಿನ್ ಗಳು ಪರ ಊರಿನಿಂದ ಸಿದ್ಧಾಪುರಕ್ಕೆ ಪ್ರತಿನಿತ್ಯ ಬಂದುಹೋಗುತಿದ್ದವರು. ಇವರಲ್ಲಿ ಯಾರು ಕರೋನಾ ತಂದರೋ ತಿಳಿದಿಲ್ಲ ಆದರೆ ಇವರ ಪ್ರತಿದಿನದ ಓಡಾಟ ಸಿದ್ಧಾಪುರಕ್ಕೆ ಮಾರಕವಾಗಿದೆ. ಹೊಸೂರಿನ ಇಬ್ಬರು ಯುವತಿಯರು ಬೆಂಗಳೂರಿನಿಂದ ಬಂದು ಕರೋನಾ ದೃಢವಾದವರು.
ಇವರ ಮಧ್ಯೆ ವಾಟಗಾರು, ವಾಜಗೋಡಿನ ಸುದ್ದಿ ಹೆಚ್ಚು ಸದ್ದುಮಾಡುತ್ತಿವೆ. ಯಾಕೆಂದರೆ…..
ವಾಟಗಾರಿನ ಯುವಕ ಬೆಂಗಳೂರಿನಿಂದ ಬಂದು ಸ್ವಾಬ್ ಮಾದರಿಯಲ್ಲಿ ಕರೋನಾ ದೃಢವಾಗಿದೆ. ಈ ಹಿನ್ನೆಲೆಯಲ್ಲಿ ಅವರ ಮನೆಯನ್ನು ಶೀಲ್ ಡೌನ್ ಮಾಡಿ ಅವರ ಮನೆಯವರ ಮಾದರಿಗಳನ್ನೂ ಪರೀಕ್ಷೆಗೆ ನೀಡಲಾಗಿದೆ. ಇವೆಲ್ಲಾ ಉತ್ತರ ಕನ್ನಡದಲ್ಲಿ ಅಧೀಕೃತವಾಗಿ ದಾಖಲಾದ ಪ್ರಕರಣಗಳು.
ಈ ಪ್ರಕರಣಗಳನ್ನು ಬಿಟ್ಟು ಇನ್ನೊಂದು ಪ್ರಕರಣದಲ್ಲಿ ವಾಜಗೋಡಿನ ಮನೆಯೊಂದನ್ನೂ ಶಿಲ್ಡ ಡೌನ್ ಮಾಡಿ ಪಹರೆ ಕಾಯುತ್ತಾ ಆ ಮನೆಯವರ ಸ್ವಾಬ್ ಮಾದರಿಗಳನ್ನೂ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಪ್ರಕರಣದಲ್ಲಿ ಸಾಗರದ ಕೆ.ಎಸ್.ಆರ್.ಟಿ. ಚಾಲಕರೊಬ್ಬರು ವಾಜಗೋಡಿನ ಮಾವನ ಮನೆಗೆ ಬಂದಿದ್ದರು. ಅವರಲ್ಲಿ ಕರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆ ವ್ಯಕ್ತಿಯನ್ನು ಸಾಗರಕ್ಕೆ ಕೊಂಡೊಯ್ದು ಅವರ ಮಾವನ ಮನೆಯನ್ನು ಕಂಟೇನ್ ಮೆಂಟ್ ಪ್ರದೇಶ ಮಾಡಲಾಗಿದೆ.
ಸಾಗರದ ಈ ವ್ಯಕ್ತಿ ಸ್ವಾಬ್ ಮಾದರಿ ಕೊಟ್ಟದ್ದು ಸಾಗರದಲ್ಲಿ ಬಂದು ಬೀಡು ಬಿಟ್ಟಿದ್ದು ವಾಜಗೋಡಿನಲ್ಲಿ ಹಾಗಾಗಿ ಉತ್ತರ ಕನ್ನಡ ಜಿಲ್ಲೆಯ ಪಟ್ಟಿಯಲ್ಲಿ ಕಾಣಿಸಿಕೊಳ್ಳದ ಈ ವ್ಯಕ್ತಿ ಮತ್ತು ಇವರ ಮಾವನ ಮನೆ ಸುದ್ದಿಯ ಕೇಂದ್ರ ಬಿಂದು ಆಗಿದೆ. ಹಾಗಾಗಿ ವಾಜಗೋಡು ಭಾಗದ ಒಂದು ಮನೆ
ಶೀಲ್ಡ್ ಡೌನ್ ಆಗಿದೆ. ಆದರೆ ಕರೋನಾ ದೃಢಪಟ್ಟ ಆ ಮನೆಯ ಸಂಬಂಧಿ ಶಿವಮೊಗ್ಗ ಜಿಲ್ಲೆಯ ಕರೋನಾ ಸೋಂಕಿತರ ಪಟ್ಟಿಗೆ ಸೇರಿದ್ದಾನೆ. ಈ ವಿಶೇಶದಿಂದಾಗಿ ಇಂದು ಸಿದ್ಧಾಪುರ ವ್ಯಾಪ್ತಿಯಲ್ಲಿ ಒಟ್ಟೂ 6 ಕೋವಿಡ್ ಪ್ರಕರಣಗಳು ದೃಢ ಪಟ್ಟರೂ ಉ.ಕ. ಜಿಲ್ಲೆಯ ಅಧೀಕೃತ ಪಟ್ಟಿಯಲ್ಲಿ 5 ಜನರ ಹೆಸರು ಮಾತ್ರ ದಾಖಲೆಯಾಗಿದೆ.
