
ಸಿದ್ದಾಪುರದ ಹೊಸ 5 ಪ್ರಕರಣಗಳು ಸೇರಿ ದೇಶದಲ್ಲಿ ಒಂದೇ ದಿನ 24879 ಸೋಂಕಿತರು! ದೃಢಪಡುವ ಮೂಲಕ ದೇಶದಲ್ಲಿ ಕೋವಿಡ್ ರುದ್ರನರ್ತನ ವೃದ್ಧಿಸಿದೆ.
ಉತ್ತರಕನ್ನಡಜಿಲ್ಲೆಯಲ್ಲಿ ಪ್ರತಿದಿನ ಒಂದಂಕಿಯಿಂದ ಪ್ರಾರಂಭವಾದ ಕರೋನಾ ಸೋಂಕಿತರ ಸಂಖ್ಯೆ ಈಗ ಮೂರಂಕಿಗೆ ಬರುವ ಪಾಯದ ಮಟ್ಟದಲ್ಲಿದೆ. ಈ ಮಧ್ಯೆ ಇಂದು ಸಿದ್ಧಾಪುರದ ನಗರದಲ್ಲಿ 2 ಗ್ರಾಮೀಣ ಭಾಗದ ಮೂರು ಸೇರಿ ಒಟ್ಟೂ ಐದು ಜನರಲ್ಲಿ ಕರೋನಾ ದೃಢವಾಗುವ ಸಾಧ್ಯತೆ ನಿಚ್ಚಳವಾಗಿದೆ.
ಈವರೆಗೆ ಸಿದ್ಧಾಪುರದ 6 ಪ್ರಕರಣಗಳು ಸೇರಿ ಉತ್ತರಕನ್ನಡ ಜಿಲ್ಲೆಯಲ್ಲಿ 500ರಷ್ಟು ಕರೋನಾ ಸೋಂಕಿತರಿದ್ದರು. ಇವರಲ್ಲಿ ಒಂದು ಮೃತಪಟ್ಟ ಪ್ರಕರಣ ಬಿಟ್ಟರೆ ಅರ್ಧಕ್ಕಿಂತ ಹೆಚ್ಚು ಜನ ಗುಣಮುಖರಾಗಿದ್ದಾರೆ.
ಇಂದು ಸಿದ್ಧಾಪುರದ 5 ಜನರಲ್ಲಿ ಕರೋನಾ ದೃಢಪಡುವುದರಿಂದ ತಾಲೂಕಾ ಆಸ್ಫತ್ರೆ ಸೇರಿದಂತೆ ಕೆಲವು ಕಡೆ ಶೀಲ್ ಡೌನ್ ಮಾಡುವ ಬಗ್ಗೆ ತಾಲೂಕಾ ಆಡಳಿತ ನಿರ್ಧರಿಸಲಿದೆ. ವಿಶೇಶವೆಂದರೆ…… ಸಿದ್ಧಾಪುರದ ಈ ಐದೂ ಕರೋನಾ ಸೋಂಕಿತರಿಗೆ ತಾಲೂಕಾ ಆಸ್ಫತ್ರೆಯ ಕೋವಿಡ್ ವಾರ್ಡ್ನಲ್ಲೇ ಚಿಕಿತ್ಸೆ ನೀಡಲಾಗುತ್ತಿದೆಯಂತೆ.
