

ಶಿರಸಿಯ 5 ಜನರಲ್ಲಿ ಇಂದು ಕರೋನಾ ಸೋಂಕು ದೃಢವಾಗಲಿದೆ ಎನ್ನುವ ಗಾಳಿಸುದ್ದಿ ಸುಳ್ಳಾಗಿದ್ದು ಶಿರಸಿಯ ಒಬ್ಬರು ಆರೋಗ್ಯ ಸಿಬ್ಬಂದಿ ಸೇರಿ ಒಟ್ಟೂ 33 ಜನರಲ್ಲಿ ಇಂದು ಕೋವಿಡ್ ದೃಢಪಟ್ಟಿದೆ.
ಈ ವಾರದ ಶಿರಸಿ-ಸಿದ್ಧಾಪುರದ ಕರೋನಾ ಪ್ರಕರಣಗಳ ಹಿನ್ನೆಲೆಯಲ್ಲಿ ಇಂದು ಕೂಡಾ ಶಿರಸಿ ಸಿದ್ಧಾಪುರದ ಕೆಲವರಲ್ಲಿ ಕೋವಿಡ್ ದೃಢಪಡುವ ಸಾಧ್ಯತೆ ನಿಚ್ಚಳವಾಗಿತ್ತು. ಆದರೆ ಈಗತಾನೆ ಪ್ರಕಟವಾಗಿರುವ ಆರೋಗ್ಯ ಇಲಾಖೆಯ ಪ್ರಕಟಣೆ ಜಿಲ್ಲೆಯ ಮುಂಡಗೋಡಿನಲ್ಲಿ 13,ಕಾರವಾರದಲ್ಲಿ 10,ಹಳಿಯಾಳದಲ್ಲಿ 8, ಶಿರಸಿ ಮತ್ತು ಹೊನ್ನಾವರಗಳ ತಲಾ ಒಂದು ಪ್ರಕರಣ ಸೇರಿ ಒಟ್ಟೂ 33 ಜನರಲ್ಲಿ ಇಂದು ಕರೋನಾ ದೃಢವಾಗಿರುವುದನ್ನು ಖಚಿತಪಡಿಸಿದೆ.
