ಶಿರಸಿ ಜಗತ್ಪ್ರಸಿದ್ಧ ದೇವಾಲಯದ 5 ಜನರಿಗೆ ಸೇರಿ ಉತ್ತರ ಕನ್ನಡ ಜಿಲ್ಲೆಯ ಒಂದು ಡಜನ್ ಗೂ ಹೆಚ್ಚು ಜನರಲ್ಲಿ ಇಂದು ಕರೋನಾ ದೃಢಪಡಲಿದೆ ಎನ್ನುವ ಗಾಳಿಸುದ್ದಿ ಎಲ್ಲೆಡೆ ಸುಳಿದಾಡುತ್ತಿದೆ.
ಶಿರಸಿ ದೇವಾಲಯಕ್ಕೆ ಪ್ರತಿದಿನ ಹೋಗುತಿದ್ದ ವ್ಯಕ್ತಿ ಒಬ್ಬರಲ್ಲಿ ಕೋವಿಡ್ ದೃಢಪಟ್ಟ ಹಿನ್ನೆಲೆಯಲ್ಲಿ ಈ ಪ್ರದೇಶದ ಹಲವರ ಸ್ವಾಬ್ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇಂದು ಜಿಲ್ಲೆಯ ಹತ್ತು ತಾಲೂಕುಗಳ ಕೆಲವರ ಮಾದರಿ ಪರೀಕ್ಷೆಯ ಫಲಿತಾಂಶ ಬರಲಿದೆ ಎಂದು ಹೇಳಲಾಗಿತ್ತು. ವಾಸ್ತವದ ವರದಿ ಇನ್ನೊಂದು ಗಂ ಟೆಯೊಳಗೆ ಬರಬೇಕು ಆದರೆ ಸಾಮಾಜಿಕ ಜಾಲತಾಣ ಸೇರಿದಂತೆ ಆಫ್ ಲೈನ್, ಆಫ್ ದಿ ರೆಕಾರ್ಡ್ ಸಂದರ್ಭಗಳಲ್ಲಿ ಶಿರಸಿ ದೇವಾಲಯದ 5 ಜನರು ಸೇರಿದಂತೆ ಜಿಲ್ಲೆಯ 12 ತಾಲೂಕುಗಳ ಕನಿಷ್ಟ ಒಂದು ಡಜನ್ ಜನರಲ್ಲಿ ಇಂದು ಕರೋನಾ ದೃಢವಾಗಲಿದೆ ಎನ್ನುವ ಗಾಳಿಸುದ್ದಿ ಸದ್ದು ಮಾಡುತ್ತಿದೆ.