ಕರೋನಾ ವಿಚಾರದಲ್ಲಿ ಉತ್ತರ ಕನ್ನಡಕ್ಕೆ ಈ ವಾರ ಕರಾಳವಾರವಾಗಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕರೋನಾ ವಾರದ ಕೊನೆಯ ದಿವಸವಾದ ಇಂದು ಶಿರಸಿಯ ಮಾರಿಕಾಂಬಾ ದೇವಾಲಯದ ಸಿಬ್ಬಂದಿಗಳು ಹಾಗೂ ಕೆ.ಡಿ.ಸಿ.ಸಿ. ಬ್ಯಾಂಕ್ ಸಿಬ್ಬಂದಿಗಳು ಸೇರಿ ಒಟ್ಟೂ 25 ಜನರಲ್ಲಿ ದೃಢವಾಗುವ ಬಗ್ಗೆ ಮಾಹಿತಿಗಳಿವೆ. ನಿನ್ನೆ ಶಿರಸಿಯಲ್ಲಿ ಮಾರಿಕಾಂಬಾ ದೇವಾಲಯದ 5 ಜನ ಸಿಬ್ಬಂದಿಗಳಲ್ಲಿ ಕರೋನಾ ಸೋಂಕು ದೃಢವಾಗುವ ಸಾಧ್ಯತೆಗಳ ಬಗ್ಗೆ ವದಂತಿಗಳಿದ್ದವು. ಈ ವದಂತಿಯನ್ನು ಮಾರಿಕಾಂಬಾ ದೇವಾಲಯದ ಆಡಳಿತ ಮಂಡಳಿ ನಿರಾಕರಿಸಿತ್ತು. ಆದರೆ ಇಂದಿನ ವರ್ತಮಾನದ ಪ್ರಕಾರ ಇಲ್ಲಿಯ ಮಾರಿಕಾಂಬಾ ದೇವಾಲಯ ಮತ್ತು ಕೆ.ಡಿ.ಸಿ.ಸಿ. ಬ್ಯಾಂಕ್ ಸಿಬ್ಬಂದಿಗಳು ಸೇರಿ ಶಿರಸಿಯಲ್ಲೇ ಇಂದು 25 ಜನರಲ್ಲಿ ಕರೋನಾ ದೃಢಪಡುವ ಸಾಧ್ಯತೆಯನ್ನು ನಿರೀಕ್ಷಿಸಿವೆ. ಶುಕ್ರವಾರ ಮಾರಿಕಾಂಬಾ ದೇವಾಲಯ ಅಲ್ಲಗಳೆದ ಕರೋನಾ ವದಂತಿ ವಿಚಾರವನ್ನು ಈ ಲಿಂಕ್ ನಲ್ಲಿ ನೋಡಬಹುದಾಗಿದೆ.https://studio.youtube.com/video/L3nMzPgQ8FE/edit/basic
visit-samajamukhi.net, samajamukhi ಸಮಾಜಮುಖಿಕನ್ನೇಶ್ youtube channel