

ದೇಶದ ಪ್ರಸಿದ್ಧ ಶಿರಸಿ ಶ್ರೀ ಮಾರಿಕಾಂಬಾ ದೇವಾಲಯದ ಸಿಬ್ಬಂದಿಗಳು, ಅವರ ಕುಟುಂಬಸ್ಥರು ಸೇರಿ 13 ಜನರೊಂದಿಗೆ ಕೆ.ಡಿ.ಸಿ.ಸಿ.ಬ್ಯಾಂಕಿನ ಕೆಲವರು, ವಿಶಾಲನಗರದ ಕೋವಿಡ್ ಸೋಂಕಿತನ ಸಂರ್ಕದಲ್ಲಿದ್ದವರು ಒಟ್ಟೂ 24 ಜನರಿಗೆ ಒಂದೇ ದಿನ ಕೋವಿಡ್ ದೃಢವಾಗುವ ಮೂಲಕ ಶಿರಸಿ ಬೆಚ್ಚಿಬಿದ್ದಿದೆ.

ಶಿರಸಿಯಲ್ಲಿ ಒಂದು ಸಾವನ್ನು ಅನುಸರಿಸಿ, ಮರಾಠಿಕೊಪ್ಪ ವಿಶಾಲನಗರ, ಸರ್ಕಾರಿ ಆಸ್ಫತ್ರೆ, ಮಾರಿಕಾಂಬಾ ದೇವಾಲಯ, ಕೆ.ಡಿ.ಸಿ.ಸಿ. ಬ್ಯಾಂಕ್ ಹೀಗೆ ಶಿರಸಿಯನ್ನು ಸುತ್ತುಹಾಕುತ್ತಿರುವ ಕರೋನಾ ಗೆ ಸಾಕ್ಷಾತ್ ಮಾರಿಕಾಂಬಾ ದೇವಾಲಯದ ಸಿಬ್ಬಂದಿಗಳು ಸೋಂಕಿತರಾಗಿರುವುದು ಆಶ್ಚರ್ಯ.
ಇಂದು ಶಿರಸಿಯ 24 ಪ್ರಕರಣಗಳೊಂದಿಗೆ ಉತ್ತರಕನ್ನಡ ಜಿಲ್ಲೆಯ ಒಟ್ಟೂ 39 ಜನರಲ್ಲಿ ಕರೋನಾ ಸೋಂಕು ದೃಢಪಟ್ಟಿರುವ ಮಾಹಿತಿಯನ್ನು ಆರೋಗ್ಯ ಇಲಾಖೆ ನೀಡಿದೆ.
