

ಭಟ್ಕಳ,ಕುಮಟಾ ದಲ್ಲಿ ಮುಂದುವರಿದ ಕರೋನಾ ಹಾವಳಿ ಜೊತೆಗೆ ಉಡುಪಿಯಲ್ಲಿ ಮೃತರಾದ ಅಂಕೋಲಾದ ಒಬ್ಬ ವ್ಯಕ್ತಿ ಸೇರಿ ಇಂದು ಉತ್ತರಕನ್ನಡದಲ್ಲಿ ಒಟ್ಟೂ 70 ಜನರಲ್ಲಿ ಕರೋನಾ ದೃಢಪಟ್ಟಂತಾಗಿದೆ.
ಸೋಮವಾರ ಪರೀಕ್ಷೆಗೊಳಗಾದ ಉತ್ತರಕನ್ನಡ ಜಿಲ್ಲೆಯ 700 ಮಾದರಿಗಳಲ್ಲಿ 29 ಜನರಲ್ಲಿ ಕರೋನಾ ದೃಢಪಟ್ಟಿತ್ತು. ಸೋಮವಾರದ ಆರೋಗ್ಯ ಇಲಾಖೆಯ ವರದಿಯಲ್ಲಿ 70 ರಷ್ಟು ಜನರ ಮಾದರಿಗಳಲ್ಲಿ ಕರೋನಾ ದೃಢವಾಗುವ ನಿರೀಕ್ಷೆ ಇತ್ತು. ಆದರೆ ನಿನ್ನೆ 29 ಜನರಲ್ಲಿ ಮಾತ್ರ ಕರೋನಾ ದೃಢಪಟ್ಟು ಉತ್ತರಕನ್ನಡ ಜಿಲ್ಲೆ ನಿಟ್ಟುಸಿರು ಬಿಟ್ಟಿತ್ತು.
ಇಂದು ಕೂಡಾಪರೀಕ್ಷಿಸಲ್ಟಟ್ಟು ಬಂದ ಮಾದರಿಗಳಲ್ಲಿ ಪ್ರತಿಶತ 10 ರಷ್ಟು ಜನರಲ್ಲಿ ಮಾತ್ರ ಕರೋನಾ ದೃಢವಾಗಿರುವ ಮಾಹಿತಿಇದೆ. ಈವರೆಗೆ ಉತ್ತರಕನ್ನಡ ಜಿಲ್ಲೆಯ ಒಟ್ಟೂ ಹತ್ತುಸಾವಿರದಷ್ಟು ಮಂದಿಗಳ ಮಾದರಿ ಪರೀಕ್ಷೆಗಳಲ್ಲಿ 600 ಕ್ಕಿಂತ ಹೆಚ್ಚು ಜನರಲ್ಲಿ ಕರೋನಾ ದೃಢವಾಗಿದೆ. ಈ ಆರು ನೂರಕ್ಕಿಂತ ಹೆಚ್ಚಿನ ಸೋಂಕಿತ ವ್ಯಕ್ತಿಗಳಲ್ಲಿ 6 ಜನರ ಮರಣವಾಗಿದೆ. ಪರೀಕ್ಷಿಸಲ್ಪಟ್ಟ ಹತ್ತುಸಾವಿರ ಜನರು, ಅವರಲ್ಲಿ 600 ಕ್ಕಿಂತ ಹೆಚ್ಚು ಜನರು ಸೋಂಕಿತರು, ಮರಣದ ಪ್ರಮಾಣ ಪ್ರತಿಶತ 1%.
ಸಮಾಧಾನಕ್ಕೆ ಈ ಅಂಕಿಸಂಖ್ಯೆಗಳು ಸಾಕು, ಆದರೆ ……………
15 ಲಕ್ಷ ಜನಸಂಖ್ಯೆಯಲ್ಲಿ ಹತ್ತುಸಾವಿರಕ್ಕಿಂತ ಹೆಚ್ಚು ಜನರ ಮಾದರಿ ಪರೀಕ್ಷೆ ನಡೆದು ಅವರಲ್ಲಿ 10% ಕ್ಕಿಂತ ಕಡಿಮೆ ಜನರಲ್ಲಿ ಕೋವಿಡ್ ದೃಢಪಟ್ಟಿದೆ. ಇನ್ನುಳಿದ ಸರಿಸುಮಾರು 15 ಲಕ್ಷ ಜನಸಂಖ್ಯೆಯಲ್ಲಿ 14.5 ಲಕ್ಷಕ್ಕಿಂತ ಹೆಚ್ಚು ಜನರ ಗಂಟಲುದೃವ ಪರೀಕ್ಷೆ ನಡೆದಿಲ್ಲ.
ಇದು ರಾಜ್ಯ, ರಾಷ್ಟ್ರ ಮತ್ತು ಬಹುತೇಕ ವಿಶ್ವದ ಅಂದಾಜು ಮಾದರಿ ಪರೀಕ್ಷೆಯ ಚರಿತ್ರೆ ಮತ್ತು ಗುಟ್ಟು. ಆರೋಗ್ಯವಂತ ಲಕ್ಷಾಂತರ ಜನರ ದೇಹ ಹೊಕ್ಕು ಅಲ್ಲೇ ಸತ್ತು ಹೋಗಿರಬಹುದಾದ ಕೋವಿಡ್ 19 ವೈರಸ್ ಪ್ರಮಾಣವೇ ಜನರನ್ನು ಹೊಕ್ಕು, ಲೆಕ್ಕಕ್ಕೆ ಸಿಕ್ಕು, ಕೆಲವರನ್ನು ಮುಗಿಸಿ ರುದ್ರನರ್ತನ ಮಾಡುತ್ತಿರುವ ವೈರಸ್ ಪ್ರಮಾಣಕ್ಕಿಂತ ಹೆಚ್ಚು ಎನ್ನುವುದು ವಾಸ್ತವ, ಸತ್ಯ, ಸಮಾಧಾನ ಎನ್ನುವುದು ಈ ಹೊತ್ತಿನ ವರ್ತಮಾನ!.
