

ಸಿದ್ದಾಪುರ. ತಾಲೂಕಿನ ಪಟ್ಟಣ ವ್ಯಾಪ್ತಿಯ ಸರಕಾರಿ ಪ.ಪೂ.ಕಾಲೇಜು ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದೆ. ಕಲಾ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ ಒಟ್ಟು 46 ವಿದ್ಯಾರ್ಥಿಗಳಲ್ಲಿ 2 ಉನ್ನತಶ್ರೇಣಿ( distinction), 22 ವಿದ್ಯಾರ್ಥಿಗಳು ಪ್ರಥಮ ದರ್ಜೆ, 6 ವಿದ್ಯಾರ್ಥಿಗಳು ದ್ವಿತೀಯ ದರ್ಜೆ ಮತ್ತು 2 ವಿದ್ಯಾರ್ಥಿ ಪಾಸ್ ದರ್ಜೆ ಪಡೆದಿದ್ದಾರೆ.









ವಾಣಿಜ್ಯ ವಿಭಾಗದಲ್ಲಿ ಒಟ್ಟು 63 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 3 ವಿದ್ಯಾರ್ಥಿಗಳು ಉನ್ನತಶ್ರೇಣಿಯಲ್ಲಿ 39 ವಿದ್ಯಾರ್ಥಿಗಳು ಪ್ರಥಮಶ್ರೇಣಿಯಲ್ಲಿ ,10 ವಿದ್ಯಾರ್ಥಿಗಳು ದ್ವಿತೀಯ ಮತ್ತು 2 ವಿದ್ಯಾರ್ಥಿಗಳು ಪಾಸ್ ದರ್ಜೆಗಳಿಸಿ ಉತ್ತೀರ್ಣರಾಗಿದ್ದಾರೆ.
ವಿಜ್ಞಾನ ವಿಭಾಗದ ಒಟ್ಟು 28 ವಿದ್ಯಾರ್ಥಿಗಳ ಪೈಕಿ 2 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 23 ವಿದ್ಯಾರ್ಥಿಗಳು ಪ್ರಥಮ ದರ್ಜೆ, 3 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇದರಿಂದಾಗಿ ಕಲಾ ವಿಭಾಗದಲ್ಲಿ ಶೇಕಡಾ 69.57, ವಾಣಿಜ್ಯ ವಿಭಾಗದಲ್ಲಿ ಶೇಕಡಾ 85.71 ಮತ್ತು ವಿಜ್ಞಾನ ವಿಭಾಗದಲ್ಲಿ ಶೇಕಡಾ 100 ಫಲಿತಾಂಶ ದಾಖಲಾಗಿದೆ. ಕಾಲೇಜಿನ ಒಟ್ಟೂ ಫಲಿತಾಂಶ ಶೇಕಡಾ 83.21 ಆಗಿದೆ .
ಕಲಾವಿಭಾಗದಲ್ಲಿ ಜೀವನಾ ಎನ್ ನಾಯ್ಕ (89.5%),ಮಾನಸಾ ಎಂ ಮಡಿವಾಳ(87.83%),ಸುರೇಂದ್ರ ಆಯ್ ಮಡಿವಾಳ(84.83%) ವಾಣಿಜ್ಯ ವಿಭಾಗದಲ್ಲಿ ಶಶಿ ಅಣ್ಣಪ್ಪ ಗೌಡ (95.17%), ನಯನಾ ಆರ್ ನಾಯ್ಕ(90.5%), ಆದಿತ್ಯ ಆರ್ ನಾಯ್ಕ(87%) ಮತ್ತು ವಿಜ್ಞಾನ ವಿಭಾಗದಲ್ಲಿ ಕವಿತಾ ಶಂಕರ ಗೌಡ (87.50%), ಮದನ್ ಎಮ ನಾಯ್ಕ (85%),ರಾಕೇಶ ಎ ನಾಯ್ಕ(79.5%), ಅಂಕಗಳಿಸುವುದರೊಂದಿಗೆ ಕಾಲೇಜಿಗೆ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದ್ದಾರೆ.
ದ್ವಿತೀಯ ಪಿಯುಸಿ ಫಲಿತಾಂಶ: ನಾಣಿಕಟ್ಟಾ ಕಾಲೇಜಿನ ಉತ್ತಮ ಸಾಧನೆ
ಸಿದ್ದಾಪುರ. ತಾಲೂಕಿನ ನಾಣಿಕಟ್ಟಾ ಪ.ಪೂ.ಕಾಲೇಜು ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದೆ. ಕಲಾ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ ಒಟ್ಟು 43 ವಿದ್ಯಾರ್ಥಿಗಳಲ್ಲಿ ಮೂವರು ಉನ್ನತಶ್ರೇಣಿ(distinction), 21 ವಿದ್ಯಾರ್ಥಿಗಳು ಪ್ರಥಮ ದರ್ಜೆ, 10 ವಿದ್ಯಾರ್ಥಿಗಳು ದ್ವಿತೀಯ ದರ್ಜೆ ಮತ್ತು 1 ವಿದ್ಯಾರ್ಥಿ ಪಾಸ್ ದರ್ಜೆ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಒಟ್ಟು 74 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 8 ವಿದ್ಯಾರ್ಥಿಗಳು ಉನ್ನತಶ್ರೇಣಿಯಲ್ಲಿ 51 ವಿದ್ಯಾರ್ಥಿಗಳು ಪ್ರಥಮಶ್ರೇಣಿಯಲ್ಲಿ ,8 ವಿದ್ಯಾರ್ಥಿಗಳು ದ್ವಿತೀಯ ಮತ್ತು 5 ವಿದ್ಯಾರ್ಥಿಗಳು ಪಾಸ್ ದರ್ಜೆಗಳಿಸಿ ಉತ್ತೀರ್ಣರಾಗಿದ್ದಾರೆ.
ವಿಜ್ಞಾನ ವಿಭಾಗದ ಒಟ್ಟು 31 ವಿದ್ಯಾರ್ಥಿಗಳ ಪೈಕಿ 9 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 18 ವಿದ್ಯಾರ್ಥಿಗಳು ಪ್ರಥಮ ದರ್ಜೆ, 3 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇದರಿಂದಾಗಿ ಕಲಾ ವಿಭಾಗದಲ್ಲಿ ಶೇಕಡಾ 81.39, ವಾಣಿಜ್ಯ ವಿಭಾಗದಲ್ಲಿ ಶೇಕಡಾ 97.29 ಮತ್ತು ವಿಜ್ಞಾನ ವಿಭಾಗದಲ್ಲಿ ಶೇಕಡಾ 996.77 ಫಲಿತಾಂಶ ದಾಖಲಾಗಿದೆ. ಕಾಲೇಜಿನ ಒಟ್ಟೂ ಫಲಿತಾಂಶ ಶೇಕಡಾ 92.56 ಆಗಿದ್ದು ಉತ್ತಮ ಸಾಧನೆಯಾಗಿದೆ
ಕಲಾವಿಭಾಗದಲ್ಲಿ ಜುಬೇದಾ ಅಬ್ಬು ಸಾಬ (92.33%),ಭಾಸ್ಕರ ಅಣ್ಣಪ್ಪ ನಾಯ್ಕ(89.66%), ಚಿತ್ರಾ ವೆಂಕಟೇಶ ನಾಯ್ಕ(88.16%) ವಾಣಿಜ್ಯ ವಿಭಾಗದಲ್ಲಿ ಇಂಚರಾ ಆರ್ ಭಂಡಾರಿ (93%), ರಕ್ಷಿತಾ ಜಿ ನಾಯ್ಕ (92.16%), ನಿಶ್ಚಿತಾ ಪಿ ಭಂಡಾರಿ(91.83%) ಮತ್ತು ವಿಜ್ಞಾನ ವಿಭಾಗದಲ್ಲಿ ಮಧುರಾ ಮೋಹನ ನಾಯ್ಕ (93.83%), ಅಖಿಲಾಲಕ್ಷ್ಮಿ ರವೀಂದ್ರ ಹೆಗಡೆ (91.66%),ಕಾರ್ತಿಕ ಈರೇಶ ಮಡಿವಾಳ(91.33%), ಅಂಕಗಳಿಸುವುದರೊಂದಿಗೆ ಕಾಲೇಜಿಗೆ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ದೇವಿಕಾ ಮಂಜುನಾಥ ನಾಯ್ಕ (88.33%), ಸವಿತಾ ಒಕ್ಕಲಿಗ(88%), ಮಹಮ್ಮದ್ ಅಫ್ತಾಬ ಸಾಬ (85.5%), ನಾಗಶ್ರೀ ದಿನಕರ ನಾಯ್ಕ (85.16%) ಚೈತ್ರಾ ಪರಶುರಾಮ ನಾಯ್ಕ (85%), ವಿಜ್ಞಾನ ವಿಭಾಗದಲ್ಲಿ ಚಂದನ್ ಗಿರೀಶ ಗೌಡರ್ (90.33%), ಗಣೇಶ ಕಮಲಾಕರ ಮಡಿವಾಳ (90.33%), ಜಾನಕಿ ಕೆ.ಗೌಡ (88.83%), ಎಸ್. ತೇಜಕುಮಾರ (88.66%), ಯೋಗಿತಾ ಅಣ್ಣಪ್ಪ ನಾಯ್ಕ (86.83%), ಜ್ಯೋತಿ ಮಾರುತಿ ನಾಯ್ಕ (86.5%) ಉನ್ನತ ಶ್ರೇಣಿಯಲ್ಲಿ ತೇರ್ಗಡೆಹೊಂದಿದ್ದಾರೆ.
