

ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಒಟ್ಟು ಶೇ. 61.80ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಈ ಬಾರಿಯೂ ಬಾಲಕಿಯರು ಮೇಲುಗೈ ಸಾಧಿಸಿದ್ದರೆ ಶೇ.68.73ರಷ್ಟು ಬಾಲಕಿಯರು, ಶೇ. 54.77ರಷ್ಟು ಬಾಲಕರು ತೇರ್ಗಡೆ ಹೊಂದಿದ್ದಾರೆ. ಉಡುಪಿ ಪ್ರಥಮ ಸ್ಥಾನದಲ್ಲಿದ್ದರೆ ದಕ್ಷಿಣ ಕನ್ನಡ ದ್ವಿತೀಯ ಮತ್ತು ಕೊಡಗು ತೃತೀಯ ಸ್ಥಾನದಲ್ಲಿವೆ. ಚಿತ್ರದುರ್ಗ, ರಾಯಚ…..

ಬೆಂಗಳೂರು: ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಒಟ್ಟು ಶೇ. 61.80ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಈ ಬಾರಿಯೂ ಬಾಲಕಿಯರು ಮೇಲುಗೈ ಸಾಧಿಸಿದ್ದರೆ ಶೇ.68.73ರಷ್ಟು ಬಾಲಕಿಯರು, ಶೇ. 54.77ರಷ್ಟು ಬಾಲಕರು ತೇರ್ಗಡೆ ಹೊಂದಿದ್ದಾರೆ. ಉಡುಪಿ ಪ್ರಥಮ ಸ್ಥಾನದಲ್ಲಿದ್ದರೆ ದಕ್ಷಿಣ ಕನ್ನಡ ದ್ವಿತೀಯ ಮತ್ತು ಕೊಡಗು ತೃತೀಯ ಸ್ಥಾನದಲ್ಲಿವೆ. ಚಿತ್ರದುರ್ಗ, ರಾಯಚೂರು ಮತ್ತು ವಿಜಯಪುರಗಳು ಕೊನೆಯ ಸ್ಥಾನದಲ್ಲಿವೆ. ಈ ಬಾರಿ ವಿಜ್ಞಾನ, ವಾಣಿಜ್ಯ, ಕಲಾ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಟಾಪರ್ಸ್ ಆದವರ ವಿವರ ಹೀಗಿದೆ-
ವಿಜ್ಞಾನ ವಿಭಾಗ
ವಿಜ್ಞಾನ ವಿಭಾಗದಲ್ಲಿ ಉಡುಪಿಯ ವಿದ್ಯೋದಯ ಕಾಲೇಜು ವಿದ್ಯಾರ್ಥಿನಿಯಾಗಿರುವ ಅಭಿಜ್ಞಾ ರಾವ್ ಟಾಪರ್ ಆಗಿದ್ದಾರೆ. ಅಭಿಜ್ಞಾ ರಾವ್ ವಿಜ್ಞಾನ ವಿಭಾಗದಲ್ಲಿ 596 ಅಂಕಗಳನ್ನು ಗಳಿಸಿಕೊಂಡಿದ್ದು ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದ್ದಾರೆ.
ಅಭಿಜ್ಞಾ ಪಿಸಿಎಂಸಿ ವಿಷಯಗಳಲ್ಲಿ ತಲಾ 100 , ಇಂಗ್ಲೀಷ್ ಭಾಷೆಯಲ್ಲಿ 96 ಹಾಗೂ ಸಂಸ್ಕೃತದಲ್ಲಿ 100 ಅಂಕ ಪಡೆದಿದ್ದಾರೆ.
ಇನ್ನು ಇದೇ ವಿಭಾಗದಲ್ಲಿ ಬೆಂಗಳೂರಿನ ಮಲ್ಲೇಶ್ವರಂನ ವಿದ್ಯಾಮಂದಿರ್ ಪಿ.ಯು ಕಾಲೇಜಿನ ಪ್ರೇರಣಾ ಕೂಡ 596 ಅಂಕ ಗಳಿಸಿದ್ದಾರೆ. ಆಕಾಂಕ್ಷಾ ಪೈ (595) ದ್ವಿತೀಯ ಹಾಗೂ ಯಶಸ್ ಎಂ.ಎಸ್ (594) ತೃತೀಯ ಸ್ಥಾನ ಗಳಿಸಿಕೊಂಡಿದ್ದಾರೆ.
ವಾಣಿಜ್ಯ ವಿಭಾಗ
ವಾಣಿಜ್ಯ ವಿಭಾಗದಲ್ಲಿ ಬೆಂಗಳೂರಿನ ಮಲ್ಲೇಶ್ವರಂ ವಿದ್ಯಾಮಂದಿರ್ ಪಿ.ಯು ಕಾಲೇಜಿನ ಅರವಿಂದ ಶ್ರೀವತ್ಸ 598 ಅಂಕಗಳೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಬೃಂದಾ ದ್ವಿತೀಯ ಸ್ಥಾನ (596), ಮಲ್ಲೇಶ್ವರಂ ವಿದ್ಯಾಮಂದಿರ್ ಪಿಯು ಕಾಲೇಜಿನ ಅಭಿಲಾಶ್ ಶರ್ಮಾ(595) ತೃತೀಯ ಸ್ಥಾನ ಪಡೆದಿದ್ದಾರೆ.
ಕಲಾ ವಿಭಾಗ
ಬಳ್ಳಾರಿಯ ಕರೇಗೌಡ ದಾಸನ್ ಗೌಡರ್ 594 ಅಂಕ ಗಳಿಸಿ ಕಲಾ ವಿಭಾಗದಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ಕಲಾ ವಿಭಾಗದಲ್ಲಿ ಸ್ವಾಮಿ (592) ದ್ವಿತೀಯ ಮೊಹಮ್ಮದ್ ರಫೀಕ್ (591) ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿಕೊಂಡಿದ್ದಾರೆ.
