ಉತ್ತರಕನ್ನಡ ಜಿಲ್ಲೆಯಲ್ಲಿ ಕರೋನಾ ರುದ್ರನರ್ತನ ಮುಂದುವರಿದಿದೆ. ಇಂದು ಜಿಲ್ಲೆಯಲ್ಲಿ 76 ಜನರಲ್ಲಿ ಕರೋನಾ ದೃಢವಾಗಿದ್ದು 3 ಸಾವುಗಳಾಗಿವೆ.
ಈವಾರದ ಪ್ರಾರಂಭದಿಂದ ಭಟ್ಕಳ,ಕುಮಟಾಗಳಲ್ಲಿ ದಾಖಲೆಯ ಸೋಂಕು ದೃಢವಾಗುತಿದ್ದ ಜಿಲ್ಲೆಯ ಚಿತ್ರಣ ಇಂದು ಬದಲಾಗಿದ್ದು ದಾಂಡೇಲಿ ಮತ್ತು ಹಳಿಯಾಳ ತಾಲೂಕುಗಳಲ್ಲಿ ಇಂದು37 ಜನರಲ್ಲಿ ಕರೋನಾ ದೃಢಪಡುವ ಮೂಲಕ ಕರೋನಾ ಪಯಣ ಭಟ್ಕಳದಿಂದ ದಾಂಡೇಲಿ, ಹಳಿಯಾಳದತ್ತ ಮುಖಮಾಡಿದಂತಾಗಿದೆ. ಭಟ್ಕಳದಲ್ಲಿ 2 ಕರೋನಾ ಸಾವುಗಳಾದರೆ,ದಾಂಡೇಲಿಯಲ್ಲಿ ಒಬ್ಬ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದಾರೆ.
ಯಲ್ಲಾಪುರದಲ್ಲಿ16, ಶಿರಸಿ 8,ಕುಮಟಾ6, ಕಾರವಾರ4 ಮುಂಡಗೋಡು 3, ಭಟ್ಕಳ 2ಜನರಲ್ಲಿ ಸೋಂಕು ಪತ್ತೆಯಾಗಿದೆ. ಯಲ್ಲಾಪುರದಲ್ಲಿ ಆಸ್ಪತ್ರೆ ಸಿಬ್ಬಂದಿ,ಸಾರಿಗೆ ಇಲಾಖೆ ಸಿಬ್ಬಂದಿಗಳು, ಶಿರಸಿಯ ಪ್ರಸಿದ್ಧ ಸರ್ಕಾರೇತರ ಸಂಸ್ಥೆಯ 3 ಜನ ಸಿಬ್ಬಂದಿಗಳಲ್ಲಿ ಕರೋನಾ ದೃಢಪಟ್ಟಿದೆ. ಈವರೆಗೆ ಜಿಲ್ಲೆಯ 8 ಜನರ ಸಾವು ಕರೋನಾದಿಂದಾಗಿದೆ ಎನ್ನುವ ದಾಖಲೆ ಇದ್ದರೂ ವಾಸ್ತವದಲ್ಲಿ ಒಂದೆರಡು ಪ್ರಕರಣ ಬಿಟ್ಟರೆ, ಉಳಿದ ಎಲ್ಲಾ ವ್ಯಕ್ತಿಗಳೂ ಇತರ ರೋಗಗಳಿಂದ ಬಳಲುತಿದ್ದವರು ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.