

ನಿನ್ನೆ ಪ್ರಕಟವಾದ ಪಿ.ಯು.ಸಿ. ಫಲಿತಾಂಶದಲ್ಲಿ ಉತ್ತರ ಕನ್ನಡ ಮತ್ತು ಸಿದ್ಧಾಪುರದ ವಿದ್ಯಾರ್ಥಿ,ವಿದ್ಯಾರ್ಥಿನಿಯರು ಗಮನಾರ್ಹ ಸಾಧನೆ ಮಾಡಿದ್ದಾರೆ.



ಬಿದ್ರಕಾನಿನ ಮಣ್ಣಿಕೊಪ್ಪದ ವಿದ್ಯಾರ್ಥಿನಿ ಅಖಿಲಾ ಹೆಗಡೆ ಪ್ರತಿಶತ 99 ಅಂಕಗಳಿಸಿ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದಿದ್ದಾರೆ.
ಶಿವಮೊಗ್ಗದಲ್ಲಿ ಓದುತಿದ್ದ ಪ್ರೀಯಾಭಟ್ ರಾಜ್ಯಕ್ಕೆ 7 ನೇ ಸ್ಥಾನ ಪಡೆದಿದ್ದಾರೆ.
ಸಾಗರ ಸಿರವಂತೆ ಸರ್ಕಾರಿ ಪಿ.ಯು. ಕಾಲೇಜ್ ವಿದ್ಯಾರ್ಥಿನಿ ಮೇಘನಾ ನಾಯ್ಕ ಮನ್ಮನೆ ಕಾಲೇಜಿಗೆ ಮೊದಲ ಸ್ಥಾನ ಪಡೆದಿದ್ದಾಳೆ.
ಮೂಡಬಿದ್ರೆಯಲ್ಲಿ ಓದುತಿದ್ದ ಕೋಲಶಿರ್ಸಿಯ ಸಂದೇಶ್ ಕೊಠಾರಿ 97 % ಮಾಡಿ ಹೆಸರು ಮಾಡಿದ್ದಾನೆ. ಈತ ಶಿಕ್ಷಕಿ ಅಕ್ಕಮ್ಮ ಮತ್ತು ಹೊಸೂರು ಬಂಕೇಶ್ವರ ಪ್ರೌಢ ಶಾಲೆಯ ಮುಖ್ಯಶಿಕ್ಷಕ ಲೋಕೇಶ್ ನಾಯ್ಕ ದಂಪತಿಗಳ ಪುತ್ರ ಇವರೊಂದಿಗೆ ಇನ್ನೂ ಅನೇಕರು ಹೆಚ್ಚಿನ ಅಂಕಗಳಿಸಿ ತಾಲೂಕಿಗೆ ಕೀರ್ತಿ ತಂದಿದ್ದಾರೆ.
