ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಕೂಡಾ 50 ಕ್ಕಿಂತ ಹೆಚ್ಚು ಜನರಲ್ಲಿ ಕರೋನಾ ದೃಢಪಟ್ಟಿದೆ. ಖುಷಿಯ ವಿಷಯವೆಂದರೆ…ಸಿದ್ಧಾಪುರದ ಹಿಂದಿನ ಪ್ರಕರಣಗಳು ಮತ್ತು ಸರ್ಕಾರಿ ಆಸ್ಫತ್ರೆಯ ಮಾದರಿಗಳೆಲ್ಲಾ ನೆಗೆಟಿವ್ ಬಂದಿವೆ. ಈ ಶುಭ ಸಮಾಚಾರದ ನಡುವೆ ಬೆಂಗಳೂರಿನಿಂದ ಸಿದ್ಧಾಪುರಕ್ಕೆ ಮರಳಿದ್ದ ನಗರದ ವ್ಯಾಪಾರಿಯೊಬ್ಬರ ಮಗನಲ್ಲಿ ಇಂದು ಕರೋನಾ ದೃಢಪಟ್ಟಿದೆ.
ಈ ಪ್ರಕರಣದ ಹಿನ್ನೆಲೆಯಲ್ಲಿ ಸಿದ್ಧಾಪುರದ ರವೀಂದ್ರನಗರ ಅವರ ಮನೆ ಪ್ರದೇಶ, ಅವರಿಗೆ ಸಂಬಂಧಿಸಿದ ಎರಡು ಅಂಗಡಿಗಳನ್ನು ಶೀಲ್ ಡೌನ್ ಮಾಡಲಾಗಿದೆ. ಈ ಸೋಂಕಿತರ ಪ್ರಾಥಮಿಕ ಸಂಪರ್ಕದ ಕನಿಷ್ಟ 15 ಜನರಿಗೆ ಕಾರಂಟೈನ್ ಮಾಡಲಾಗಿದೆ.
ವಿಚಿತ್ರವೆಂದರೆ, ಸುಮಾರು ಎರಡು ವಾರಗಳ ಹಿಂದೆ ಬೆಂಗಳೂರಿನಿಂದ ಮರಳಿದ್ದ ಇಂದಿನ ಸೋಂಕಿತ ತನ್ನ ಮಾದರಿ ಪರೀಕ್ಷೆಯ ವರದಿ ಬರುವ ಮುನ್ನ ತಮ್ಮ ಹೆಂಡತಿಯ ಮನೆ ಬಿಳಗಿಗೆ ಹೋಗಿದ್ದರು. ಅಲ್ಲಿ ಮಗುವಿನ ಹುಟ್ಟುಹಬ್ಬದ ಕಾರ್ಯಕ್ರಮ ನೆರವೇರಿಸಿದ್ದರು ಎನ್ನಲಾಗುತ್ತಿದೆ.
ಸೋಂಕಿತನ ಮಗುವಿನ ಹುಟ್ಟುಹಬ್ಬಕ್ಕೆ ಅನೇಕ ಸ್ಥಳಿಯರು ಹೋಗಿದ್ದರು ಎಂದು ಬಿಳಗಿಯ ಜನ ಹಾದಿ-ಬೀದಿಯಲ್ಲಿ ಚರ್ಚಿಸುತಿದ್ದಾರೆ. ಸ್ಥಳಿಯ ಆಡಳಿತ ಮಾತ್ರ ಬಿಳಗಿಯಲ್ಲಿ ಸೋಂಕಿತನ ಮಗುವಿನ ಹುಟ್ಟುಹಬ್ಬದಲ್ಲಿ ಪಾಲ್ಗೊಂಡವರು ಬೆರಳೆಣಿಕೆ ಜನರು ಅವರಿಗೆ ಹೋಮ್ ಕಾರಂಟೈನ್ ಮಾಡಲಾಗಿದ್ದು ಮಾದರಿ ಪರೀಕ್ಷೆಗಳ ವರದಿ ಬರುವವರೆಗೆ ಅವರಿಗೆ ಅನ್ಯರ ಸಂಪರ್ಕಮಾಡದಂತೆ ಆದೇಶಿಸಲಾಗಿದೆ ಎಂದು ಮಾಹಿತಿ ನೀಡಿದೆ.
ಸಿದ್ಧಾಪುರದಲ್ಲಿ ಜನರ ಸಹಕಾರ,ಜಾಗೃತಿಯಿಂದ ಕರೋನಾ ನಿಯಂತ್ರಣದಲ್ಲಿದೆ ಎಂದು ಇಂದು ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ. ಈ ಹೇಳಿಕೆ ಪ್ರಕಟವಾಗುವ ಮೊದಲು ಸಿದ್ಧಾಪುರ, ಬಿಳಗಿಯ ಕೆಲವೆಡೆ ಶೀಲ್ ಡೌನ್ ಮಾಡಲಾಗಿದೆ. ಇಂದಿನ ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಒಳಪಟ್ಟವರು ಸ್ವಯಂ ತಾಲೂಕು ಆಡಳಿತಕ್ಕೆ ಮಾಹಿತಿ ನೀಡಿ ಅವಶ್ಯ ಪರೀಕ್ಷೆ, ಕಾರಂಟೈನ್ ಗೆ ಸಹಕರಿಸಿದರೆ ಹೆಚ್ಚಿನ ಅಪಾಯ ತಪ್ಪಿಸಬಹುದಾಗಿದೆ.